Agri: ಸಂಕಷ್ಟದಲ್ಲಿ “ಕೃಷಿ ಯಂತ್ರಧಾರೆ” ಯೋಜನೆ


Team Udayavani, Nov 17, 2023, 1:19 AM IST

agri tracter

ಕೋಟ: ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಕಡಿಮೆ ಬಾಡಿಗೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದ ಗಿಸಿ ಖಾಸಗಿ ಕೃಷಿ ಯಂತ್ರಗಳ ಬಾಡಿಗೆ ನಿಯಂತ್ರಿಸಲು 2014-15 ರಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಕೃಷಿ ಯಂತ್ರ ಧಾರೆ ಯೋಜನೆ ಸಂಕಷ್ಟಕ್ಕೆ ಸಿಲುಕಿದೆ.

ಹಲವು ಯಂತ್ರ ಕೇಂದ್ರಗಳ ಗುತ್ತಿಗೆ ಅವಧಿ ಮುಗಿದು ವರ್ಷ ಕಳೆದರೂ ನವೀಕರಣವಾಗಿಲ್ಲ. ಜತೆಗೆ ಹೊಸ ಕಂಪೆನಿಗಳು ಗುತ್ತಿಗೆಗೆ ಆಸಕ್ತಿ ತೋರುತ್ತಿಲ್ಲ. ಕೃಷಿ ಇಲಾಖೆಯಡಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಯಂತ್ರಧಾರೆ ಕೇಂದ್ರಗಳನ್ನು ನಡೆಸು ತ್ತಿದ್ದು, ಉಡುಪಿ ಜಿಲ್ಲೆಯಲ್ಲಿ 7 ರ ಪೈಕಿ 4 ಕೇಂದ್ರಗಳ ಗುತ್ತಿಗೆ ಅವಧಿ ಮುಗಿ ದಿದೆ. ದಕ್ಷಿಣ ಕನ್ನಡದ 15 ರಲ್ಲಿ 6 ರ ಗುತ್ತಿಗೆ ಮುಗಿದಿದೆ. ಉಳಿದವೂ ಜನವರಿಯಲ್ಲಿ ಮುಗಿಸಲಿವೆ. ಅದೇ ರೀತಿ ರಾಜ್ಯದ 490 ಹೋಬಳಿಗಳಲ್ಲಿನ 696 ಕೇಂದ್ರದಲ್ಲಿ ಬಹುಪಾಲು ಸ್ಥಗಿ ತಗೊಂಡಿವೆ. ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ನಿರ್ವಹಿಸುತ್ತಿರುವ 25 ಜಿಲ್ಲೆಗಳ 164 ಕೇಂದ್ರಗಳು ಮಾತ್ರ ಚಾಲನೆಯಲ್ಲಿವೆ. ಜನವರಿವರೆಗೆ ಇವುಗಳ ಅವಧಿ.

ಗುತ್ತಿಗೆಗೆ ನಿರುತ್ಸಾಹ ?
ಸರಕಾರದ ಶೇ. 70 ಹಾಗೂ ಗುತ್ತಿಗೆ ವಹಿಸಿಕೊಳ್ಳುವ ಕಂಪೆನಿ ಶೇ. 30 ಅನುದಾನದಲ್ಲಿ ಯಂತ್ರಗಳನ್ನು ಖರೀದಿಸಿ ಕೇಂದ್ರಗಳನ್ನು ಆರಂಭಿಸ ಲಾಗಿತ್ತು. ಭತ್ತ ಕಟಾವು ಯಂತ್ರ, ಟ್ರಾಕ್ಟರ್‌, ಪವರ್‌ ಟಿಲ್ಲರ್‌, ರೋಟರಿ ಟಿಲ್ಲರ್‌, ರೋಟಾವೇಟರ್‌, ಡಿಸ್ಕ್ ನೇಗಿಲು ಸೇರಿದಂತೆ 44 ಬಗೆಯ ಯಂತ್ರೋಪಕರಣಗಳು ಲಭ್ಯವಿ ದ್ದವು. ಸರಕಾರ ಗೊತ್ತುಪಡಿಸಿದ ಬಾಡಿಗೆಗೆ ಈ ಕೇಂದ್ರಗಳು ರೈತರಿಗೆ ಸೇವೆ ನೀಡಬೇಕಿತ್ತು. ಆರಂಭದಲ್ಲಿ ಇದರ ನಿರ್ವಹಣೆಗೆ ಖಾಸಗಿ ಸಂಸ್ಥೆಗಳು ಉತ್ಸಾಹ ತೋರಿದ್ದವು.

ಆದರೆ ಕಡಿಮೆ ಬಾಡಿಗೆ, ಡೀಸೆಲ್‌ ದುಬಾರಿ, ಚಾಲಕರು, ಸಿಬಂದಿ ಕೊರತೆ, ನಿರ್ವಹಣೆಗೆ ಸರಕಾರ ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ ಅವಧಿ ಮುಗಿದಿದ್ದರೂ ಇದುವರೆಗೆ ಗುತ್ತಿಗೆ ನವೀಕರಣ ಅಥವಾ ಬದಲಿ ಸಂಸ್ಥೆಗೆ ಹೊಣೆ ವಹಿಸುವ ಕೆಲಸವಾಗಿಲ್ಲ. ಹಲವೆಡೆ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಸರಕಾರ ಶೇ. 70 ಅನುದಾನ ನೀಡಿದ್ದು, ಕಂಪೆನಿ ಯಂತ್ರಗಳನ್ನು ಇಲಾಖೆಗೆ ವಾಪಸ್‌ ನೀಡಬೇಕಿದ್ದು ಈ ಪ್ರಕ್ರಿಯೆಯೂ ಸರಿಯಾಗಿ ನಡೆಯುತ್ತಿಲ್ಲ. ಉಡುಪಿ, ದ.ಕ.ದಲ್ಲಿ ಹಿಂದಿನ ಗುತ್ತಿಗೆ ಸಂಸ್ಥೆಗಳೇ ಹೊಸ ವ್ಯವಸ್ಥೆ ಬರುವ ತನಕ ಮುಂದುವರಿಯಲು ಮೌಖೀಕವಾಗಿ ಸೂಚಿಸಲಾಗಿದೆ. ಆದರೆ ಒಪ್ಪಂದವಿ ಲ್ಲದ ಕಾರಣ ಸಮರ್ಪಕ ರೀತಿಯಲ್ಲಿ ಸಾಗದಿರುವುದು ರೈತರಿಗೆ ಸಮಸ್ಯೆ ಸೃಷ್ಟಿಸಿದೆ.

ಯಂತ್ರಧಾರೆಯ ಅಗತ್ಯ

ಕೇಂದ್ರಗಳಲ್ಲಿ ಲಭ್ಯವಿರುವ ಯಂತ್ರ ಗಳಿಗೆ ಕಡಿಮೆ ಬಾಡಿಗೆ ಇರುವು ದರಿಂದ ಖಾಸಗಿ ಯಂತ್ರಗಳ ದರ ಸಮರ, ರೈತರ ಶೋಷಣೆ ತಡೆಯಲು ಅವಕಾಶವಿದೆ. ಉದಾಹರಣೆಗೆ ಕರಾವಳಿವಯಲ್ಲಿ ಭತ್ತ ಕಟಾವು ಯಂತ್ರಕ್ಕೆ ಖಾಸಗಿಯಲ್ಲಿ 2,200 – 2,300 ರೂ. ತನಕ ಬಾಡಿಗೆ ಇದ್ದರೆ ಯಂತ್ರಧಾರೆಯಲ್ಲಿ 1,800ರಿಂದ 2,000 ರೂ. ನೊಳಗೆ ಬಾಡಿಗೆ ಇದೆ.

ಕೃಷಿ ಯಂತ್ರಧಾರೆ ಕೇಂದ್ರಗಳಿಂದ ಸಾಕಷ್ಟು ಅನುಕೂಲವಿದೆ. ಇದರ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಎನ್‌. ಚೆಲುವರಾಯಸ್ವಾಮಿ, ರಾಜ್ಯ ಕೃಷಿ ಸಚಿವ

 ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.