Padubidri Fortune Safty Glassನ ನೂತನ ಘಟಕ ‘ಇನ್ಸುಲೇಟೆಡ್‌ ಗ್ಲಾಸ್‌’ನ.20 ರಂದು ಶುಭಾರಂಭ


Team Udayavani, Nov 17, 2023, 2:45 PM IST

5-add

ಉಡುಪಿ: ಶ್ರೀ ದೇವಿ ಗ್ಲಾಸ್‌ ಹೌಸ್‌ ಸಂಸ್ಥೆಯ ಪಡುಬಿದ್ರಿ ನಂದಿಕೂರು ಇಂಡಸ್ಟ್ರೀಯಲ್‌ ಏರಿಯಾದಲ್ಲಿರುವ ಫಾರ್ಚೂನ್‌ ಸೇಫ್ಟಿ ಗ್ಲಾಸ್‌ನ ನೂತನ ಘಟಕ “ಇನ್ಸುಲೇಟೆಡ್‌ ಗ್ಲಾಸ್‌’ (ಡಿಜಿಯು) ಉದ್ಘಾಟನೆ ನ. 20ರ ಬೆಳಿಗ್ಗೆ 11.30ಕ್ಕೆ ನಡೆಯಲಿದೆ.

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಮಾಂಡವಿ ಬಿಲ್ಡರ್ ಆ್ಯಂಡ್‌ ಡೆವಲಪರ್ನ ಆಡಳಿತ ನಿರ್ದೇಶಕ ಡಾ| ಜೆರ್ರಿ ವಿನ್ಸೆಂಟ್‌ ಡಯಾಸ್‌ ಉದ್ಘಾಟಿಸುವರು. ನ್ಯಾಶನಲ್‌ ಕೌನ್ಸಿಲ್‌ ಸದಸ್ಯ ಕುಮಾರಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.

ಉಡುಪಿ ಎ.ಜೆ. ಅಸೋಸಿಯೇಟ್ಸ್‌ನ ಎಂ. ಗೋಪಾಲ ಭಟ್‌, ಆರ್ಕಿಟೆಕ್ಟ್ ಯೋಗೀಶ್ಚಂದ್ರಧರ, ಮಂಗಳೂರು ಕ್ರೆಡೈ ಅಧ್ಯಕ್ಷ ವಿನೋದ್‌ ಎ.ಆರ್‌.ಪಿಂಟೋ, ಮಂಗಳೂರು ಎಸಿಸಿಎ (ಐ) ಚೇರ್ ವೆುನ್‌ ಉಜ್ವಲ್‌ ಡಿ’ಸೋಜಾ, ಮಂಗಳೂರು ನಾರ್ದರ್ನ್ ಸ್ಕೈ ಪ್ರಾಪರ್ಟೀಸ್‌ ಪ್ರೈ.ಲಿ.ನ ನಿರ್ದೇಶಕಿ ಕ್ರಿತಿನ್‌ ಅಮೀನ್‌, ಉಡುಪಿ ಎಸಿಇ ಟೆಕ್ನೋ ಕ್ರಾಫ್ಟ್ನ ಆರ್ಕಿಟೆಕ್ಟ್ ರಮಣಿ ಹಂದೆ, ಉಡುಪಿ ಉಜ್ವಲ್‌ ಡೆವಲಪರ್ನ ಆಡಳಿತ ನಿರ್ದೇಶಕ ಪುರುಷೋತ್ತಮ ಪಿ. ಶೆಟ್ಟಿ, ಸೈಂಟ್‌ ಗೋಬಿನ್‌ ಗ್ಲಾಸ್‌ ಇಂಡಿಯಾ ಪ್ರೈ.ಲಿ.ನ ಪ್ರೊಜೆಕ್ಟ್ ಆಫ್ ಪ್ರೊಸೆಸ್ಸಿಂಗ್‌ನ ರೀಜನಲ್‌ ಮ್ಯಾನೇಜರ್‌ ಅಂತೋನಿ ಸಂತೋಷ್‌ ಇ.ಟಿ. ಉಪಸ್ಥಿತರಿರುವರು.

ಇನ್ಸುಲೇಟೆಡ್‌ ಗ್ಲಾಸ್‌ಎಂದರೇನು?

ಶಾಖ ಮತ್ತು ಧ್ವನಿ ವರ್ಗಾವಣೆಯನ್ನು ಕಡಿಮೆ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಶಕ್ತಿ ಮತ್ತು ಸಾಮರ್ಥ್ಯವುಳ್ಳ ಗ್ಲಾಸ್‌ “ಇನ್ಸುಲೇಟೆಡ್‌ ಗ್ಲಾಸ್‌’. ಇದು ಎರಡು ಅಥವಾ ಹೆಚ್ಚಿನ ಗಟ್ಟಿಯಾದ ಗಾಜಿನ ಪದರಗಳು, ಎನರ್ಜಿ ಎಫೀಸಿಯೆಂಟ್‌ ಗ್ಲಾಸ್‌ ಅಥವಾ ಲ್ಯಾಮಿನೇಟೆಡ್‌ ಗ್ಲಾಸ್‌ಗಳ ಸ್ಯಾಂಡ್ವಿಚ್‌ ಮಾಡಲಾದ ಘಟಕಗಳು ಒಣ ಗಾಳಿಯ ಜಾಗದಿಂದ ಬೇರ್ಪಟ್ಟು ಅಲ್ಯುಮಿನೀಯಂ ಅಂಚುಗಳಿಂದ ಮುಚ್ಚಲ್ಪಟ್ಟಿವೆ. ನಿರೋಧಕ ಗಾಜಿನ ಘಟಕಗಳು ಉಷ್ಣ ತಡೆಯುವ ಮೂಲಕ ಉಷ್ಣ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಎರಡು ವಿಭಿನ್ನ ಅವಶ್ಯಕತೆಗಳನ್ನು ಪೂರೈಸಲು ಗಾಜನ್ನು ಶಕ್ತಗೊಳಿಸುತ್ತದೆ. ಇದು ಶೀತ ವಾತಾವರಣದಲ್ಲಿ ಬೆಚ್ಚಗಿರುತ್ತದೆ ಮತ್ತು ಬಿಸಿ ವಾತಾವರಣದಲ್ಲಿ ತಂಪಾಗಿರುತ್ತದೆ. ಒಳಗಿನ ಮತ್ತು ಹೊರಗಿನ ತಾಪಮಾನವನ್ನು ಸಮತೋಲನದಲ್ಲಿಡಲು ಈ ಗ್ಲಾಸ್‌ ಸಹಕಾರಿಯಾಗಲಿದೆ.

ಈ ಗ್ಲಾಸ್‌ ಬಳಕೆಯಿಂದ ಗ್ಲಾಸ್‌ನಲ್ಲಿ ತೇವಾಂಶ ಸಂಗ್ರಹವಾಗುವುದಿಲ್ಲ. ಬಹು ಮಹಡಿ ಕಟ್ಟಡಗಳಲ್ಲಿ ಬಳಸಲ್ಪಡುವ ಈ ಗ್ಲಾಸ್‌ ಯಾವುದೇ ಕಾರಣಕ್ಕೂ ಒಡೆದು ಹೋಗದೆ, ಬಿರುಕು ಬಿಡುವುದಿಲ್ಲ. ತೂಕ, ಗಾಳಿ, ಮತ್ತು ಬಿಸಿಲನ್ನು ತಡೆದುಕೊಳ್ಳುವ ಗಟ್ಟಿಮುಟ್ಟಾದ ಈ ಗ್ಲಾಸ್‌ ಹಲವು ವಿಧಗಳಲ್ಲಿ ತಯಾರಾಗಲಿವೆ. ಸೌಂಡ್‌ ಪ್ರೂಫ್ ಮತ್ತು ಅತ್ಯಂತ ಸುರಕ್ಷಿತ ಗ್ಲಾಸ್‌ ಇದಾಗಿದ್ದು, ಡವ್‌ ಸೀಲ್‌’ ಎನ್ನುವ ಬ್ರ್ಯಾಂಡ್‌ನ‌ಲ್ಲಿ ಉತ್ಪಾದನೆಗೊಳ್ಳುತ್ತಿದೆ. ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪಡುಬಿದ್ರಿಯಲ್ಲಿ ತಯಾರಾಗುವ ಈ ಗ್ಲಾಸ್‌ ಫ್ಯಾಕ್ಟರಿಯಲ್ಲಿ ದಿನವೊಂದಕ್ಕೆ 500 ಚ.ಅಡಿ. ಮೀಟರ್‌ ಗ್ಲಾಸ್‌ ತಯಾರಿಸಲಾಗುತ್ತದೆ.

4 ರಿಂದ 9 ಎಂಎಂನ ಸಿಂಗಲ್‌ ಗ್ಲಾಸ್‌, 18ರಿಂದ 50 ಇಂಚ್‌ನ ದಪ್ಪದ ಡಬಲ್‌ ಮತ್ತು ತ್ರಿಬಲ್‌ ಗ್ಲಾಸ್‌ಗಳು ತಯಾರಿಸಲ್ಪಡುತ್ತದೆ. ಗ್ರಾಹಕರ ವಿವಿಧ ಬೇಡಿಕಗೆ ಅನುಗುಣವಾಗಿ ತಯಾರಿಸಿಕೊಡಲಾಗುತ್ತದೆ. ಈ ಗ್ಲಾಸನ್ನು ವಾಣಿಜ್ಯ ಮತ್ತು ವಸತಿ ಕಟ್ಟಡಗಳ ಮೆರುಗು ಹೆಚ್ಚಿಸಲು ಸ್ಥಿರ ಮತ್ತು ಕಾರ್ಯನಿರ್ವಹಿಸಬಹುದಾದ ಕಿಟಕಿಗಳು, ಕರ್ಟನ್‌ ವಾಲ್ಸ್‌ ಮತ್ತು ಅಂಗಡಿ ಮುಂಗಟ್ಟುಗಳು, ರೈಲ್ವೇ ಕೋಚ್‌ಗಳು, ನಾನ್‌-ವಿಷನ್‌ (ಸ್ಪಾಂಡ್ರೆಲ…) ಲೊಕೇಶನ್‌, ಡೀಪ್‌ ಫ್ರೀಜರ್ ಮತ್ತು ರೆಫ್ರಿಜರೇಟರ್‌ಗಳು, ಪಾರ್ಟಿಶನ್‌ ವಾಲ್ಸ್‌, ರೆಸ್ಟೋರೆಂಟ್‌ಗಳು, ಮೆಟ್ರೋ ರೈಲ್ವೇ, ಏರ್‌ಪೋರ್ಟ್ಸ್, ಬೇಕರಿ ರೆಫ್ರಿಜರೇಟರ್‌, ಬಾತ್‌ರೂಮ್‌, ಆಸ್ಪತ್ರೆಗಳಲ್ಲಿ ಬಳಸಲಾಗುತ್ತದೆ.

ಸಂಸ್ಥೆಯ ಹಿನ್ನೆಲೆ

1990ರಲ್ಲಿ ಸ್ಥಾಪನೆಗೊಂಡ ಶ್ರೀ ದೇವಿ ಗ್ಲಾಸ್‌ ಹೌಸ್‌ ಸಂಸ್ಥೆಯು ನೂರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಅಭಿವೃದ್ಧಿ ಹೊಂದುತ್ತಾ ಸಾಗಿ ಅನಂತರ 2019ರಲ್ಲಿ “ಫಾರ್ಚೂನ್‌ ಸೇಫ್ಟಿ ಗ್ಲಾಸ್‌’ ಫ್ಯಾಕ್ಟರಿ ಆರಂಭಗೊಂಡು ಸಾಕಷ್ಟು ಬೇಡಿಕೆ ಗಿಟ್ಟಿಸಿಕೊಂಡಿದೆ. ಈಗಾಗಲೇ ಕರ್ನಾಟಕ, ಗೋವಾ, ಕೇರಳ ರಾಜ್ಯಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಇದೀಗ ಪ್ರಾರಂಭಿಸಲಾದ “ಇನ್ಸುಲೇಟೆಡ್‌ ಗ್ಲಾಸ್‌’ನ ನೂತನ ಘಟಕ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: www.fortunesaftyglass.com ಸಂಪರ್ಕಿಸಲು ಮಾಲಕ ಸುರೇಶ್‌ ಸುಮನಾ ನಾಯ್ಕ ತಿಳಿಸಿದ್ದಾರೆ.

ಪ್ರದರ್ಶನ-ಪ್ರಾತ್ಯಕ್ಷಿಕೆ: ನ. 20ರಂದು ಉದ್ಘಾಟನೆ ಕಾರ್ಯಕ್ರಮ ಪ್ರಯುಕ್ತ ಟಫೆನ್‌ ಗ್ಲಾಸ್‌ ಎಷ್ಟರಮಟ್ಟಿಗೆ ಗಟ್ಟಿಯಾಗಿವೆ ಎಂದು ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಕ್ರಿಕೆಟ್‌ ಹಾರ್ಡ್‌ ಬಾಲ್‌ ಮೂಲಕ ಗ್ಲಸ್‌ನಿಂದ ತಯಾರಿಸಲ್ಪಟ್ಟ ವಿಕಟ್‌ಗಳಿಗೆ ಬೌಲಿಂಗ್‌ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಲ್ಯಾಮಿನೇಟೆಡ್‌ ಗ್ಲಾಸ್‌ಗಳನ್ನು ಸಾಲಾಗಿ ನಿಲ್ಲಿಸಿ ಅವುಗಳಿಗೆ ಹ್ಯಾಮರ್‌ ಮೂಲಕ ಹೊಡೆದು ಒಡೆಯಲು ಅವಕಾಶ ನೀಡಲಾಗುವುದು. ಸಂಸ್ತೆಯಲ್ಲಿ ತಯಾರಿಸಲ್ಪಡುವ ಹೀಟ್‌ ಸ್ಟ್ರೆಂಥನ್ಡ್ ಗ್ಲಾಸ್‌, ಈವಾ ಲ್ಯಾಮಿನೇಟೆಡ್‌ ಗ್ಲಾಸ್‌, ಬೆಂಡ್‌ ಗ್ಲಾಸ್‌, ಸ್ಮಾರ್ಟ್‌ ಗ್ಲಾಸ್‌, ಲೇಕರ್ಡ್‌ ಗ್ಲಾಸ್‌, ಡಿಸೈನರ್‌ ಗ್ಲಾಸ್‌, ಕಲರ್‌ ಲ್ಯಾಮಿನೇಟೆಡ್‌ ಗ್ಲಾಸ್‌ ಇತ್ಯಾದಿ ಗ್ಲಾಸ್‌ಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಟಾಪ್ ನ್ಯೂಸ್

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

4

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

1

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

13(1)

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Belagavi: UT Khader, Basavaraja Horatti visited Suvrana vidhasoudha

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

16-bng

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

15-

Bengaluru: ಎಎಸ್‌ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು

9

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.