![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 17, 2023, 4:11 PM IST
ಕಾರವಾರ: ಬಿಜೆಪಿಗರು ಯಡಿಯೂರಪ್ಪ ನವರನ್ನೇ ಬಿಟ್ಟಿಲ್ಲ, ಇನ್ನು ಅವರ ಮಗನನ್ನು ಬಿಡ್ತಾರಾ ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳು ವೈದ್ಯ ಹೇಳಿದರು.
ಕಾರವಾರದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಯಡಿಯೂರಪ್ಪ ಅವರನ್ನ ಸಿಎಂ ಆದಾಗಲೇ ಬಿಜೆಪಿಯವರು ಕುರ್ಚಿಯಿಂದ ಇಳಿಸಿದ್ದರು. ಈಗ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿ ಶೀಘ್ರದಲ್ಲೇ ಇಳಿಸುತ್ತಾರೆ, ಬಿಜೆಪಿ ಪಕ್ಷದ ನಾಯಕರೇ ಅಧ್ಯಕ್ಷ ಹುದ್ದೆ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಮಾಡುವ ಕೆಲಸವನ್ನು ಅವರ ಪಕ್ಷದ ನಾಯಕರೇ ಮಾಡುತ್ತಿದ್ದಾರೆ ಎಂದು ಸಚಿವ ವೈದ್ಯ ನುಡಿದರು.
ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ಬಿಜೆಪಿಗರು ಹೇಳುತ್ತಾರೆ. ಕಳೆದ ಬಾರಿ ಮಿಸ್ ಆಗಿ 27 ಸ್ಥಾನದಲ್ಲಿ ಬಿಜೆಪಿಗರು ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್ 28 ಸ್ಥಾನದಲ್ಲಿ ಗೆಲ್ಲಲಿದೆ. ನಮ್ಮಲ್ಲಿ 136 ಶಾಸಕರು ಇದ್ದಾರೆ,ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಕಳೆದ ಬಾರಿ ಜೆಡಿಎಸ್ ಜೊತೆ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಈ ಬಾರಿ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಗರು ಚುನಾವಣೆಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟೀಕೆ ಮಾಡುವುದೇ ಕೆಲಸ. ಟೀಕೆ ಮಾಡುವುದನ್ನು ಬಿಟ್ಟು ಬೇರೆ ಏನು ಮಾಡುವುದಿಲ್ಲ. ಕರೆಂಟ್ ಕದ್ದ ಪ್ರಕರಣದಲ್ಲಿ ಯಾವುದೇ ಮುಲಾಜಿಲ್ಲದೇ ನಾವು ಎಫ್.ಐ.ಆರ್ ಮಾಡಿದ್ದೇವೆ ಎಂದು ವೈದ್ಯ ಹೇಳಿದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.