Mangaluru: ಗೋವುಗಳ ಪೋಷಣೆ ನಿರಂತರವಾಗಿರಲಿ- ಪೇಜಾವರ ಶ್ರೀ

ಗೋಮಾತೆ ಮನೆಯಲ್ಲಿದ್ದರೆ ಯಾವುದೇ ಪ್ರಕೃತಿ ಚಿಕಿತ್ಸೆಗೆ ಹೊರಗೆ ಹೋಗಬೇಕೆಂದಿಲ್ಲ

Team Udayavani, Nov 17, 2023, 4:20 PM IST

Mangaluru: ಗೋವುಗಳ ಪೋಷಣೆ ನಿರಂತರವಾಗಿರಲಿ- ಪೇಜಾವರ ಶ್ರೀ

ಕದ್ರಿಕಂಬಳ: ಹಲವು ವರ್ಷಗಳ ಹಿಂದೆ ಮನೆ ಮನೆಗಳಲ್ಲಿ ಗೋ ಶಾಲೆಗಳಿದ್ದವು. ಆದರೆ ಕಾಲದ ಪ್ರಭಾವದಿಂದ ನಮ್ಮ ಪರಿಸರದಲ್ಲಿ ಗೋ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗೋವುಗಳು ತಾಯಿಗೆ ಸಮಾನ. ಅವುಗಳ ಪೋಷಣೆ ನಿರಂತರವಾಗಿ ನಡೆಯುತ್ತಿರಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಹೇಳಿದರು.

ಹರಿಪಾದಗೈದಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣೆ ಯೊಂದಿಗೆ, ಪೇಜಾವರ ಶ್ರೀಗಳ ಷಷ್ಟ್ಯಬ್ಧ ಪೂರ್ತಿ ಸರಣಿ ಕಾರ್ಯಕ್ರಮದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಕದ್ರಿಕಂಬಳದ ಮಂಜುಪ್ರಾಸಾದದಲ್ಲಿ ಗುರುವಾರ ಹಮ್ಮಿಕೊಂಡ ಸಾರ್ವಜನಿಕ ಗೋಪೂಜಾ ಉತ್ಸವದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ಆಸ್ತಿಕರಾದ ನಾವು ತಂದೆ- ತಾಯಿಯನ್ನು ಭಗವಂತನ ರೂಪ ದಲ್ಲಿ ಪೂಜಿಸುತ್ತೇವೆ. ಅದೇ ರೀತಿ, ಗೋವು ಗಳಿಗೂ ಮೊದಲ ಸ್ಥಾನವಿದೆ. ಒಂದಲ್ಲಾ ಒಂದು ವಿಚಾರದಲ್ಲಿ ನಾವು ಗೋವುಗಳನ್ನು ಅವಲಂಭಿತರಾಗಿದ್ದೇವೆ. ಗೋವುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗ ಬೇಕು. ಅದಕ್ಕೆ ಗೋಪೂಜೆಯಂತಹ ಕಾರ್ಯಕ್ರಮಗಳು ಮತ್ತಷ್ಟು ಕಡೆಗಳಲ್ಲಿ ನಡೆಯಬೇಕು ಎಂದು ತಿಳಿಸಿದರು.

ಗೋವು ಸಂಪದ್ಭರಿತ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ ಆಶೀರ್ವಚನ ನೀಡಿ, ಗೋಪೂಜೆಗೈದರೆ ಎಲ್ಲ ದೇವಾನುದೇವತೆಗಳಿಗೂ ಸಂತೃಪ್ತಿಯಾಗುತ್ತದೆ. ಗೋವು ಸಂಪದ್ಭರಿತ. ಈ ಹಿಂದೆ ಪ್ರತೀ ಮನೆಗಳಲ್ಲೂ ಗೋವುಗಳನ್ನು
ಸಾಕುತ್ತಿದ್ದರು. ಮನುಷ್ಯನ ಜೀವನಶೈಲಿ ಬದಲಾದಂತೆ ಗೋವು ಸಾಕುವ ಪದ್ಧತಿಯೂ ಕ್ಷೀಣಗೊಂಡಿದೆ. ಗೋವಿಗೆ ಉನ್ನತ ಸ್ಥಾನವಿದ್ದು, ದೇವತೆಗೆ ಸಮಾನ ಎಂದು ಹೇಳಿದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವಿಸಿದರು. ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಶ್ರೀ ಕ್ಷೇತ್ರ ಶರವಿನ ಶಿಲೆ ಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರೀ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ| ಹರಿಕೃಷ್ಣ ಪುನರೂರು, ಮಂಗಳೂರು ನಗರ ಟ್ರಾಫಿಕ್‌ ಡಿಸಿಪಿ ಗೀತಾ ಕುಲಕರ್ಣಿ, ಪ್ರಮುಖರಾದ ಡಾ| ಎಂ.ಬಿ. ಪುರಾಣಿಕ್‌, ಡಾ| ಪ್ರಭಾಕರ ಜೋಶಿ, ಸುಧಾಕರ ರಾವ್‌ ಪೇಜಾವರ, ರಾಮಕೃಷ್ಣ ರಾವ್‌, ಪ್ರಭಾಕರ ರಾವ್‌ ಪೇಜಾವರ, ಚಂದ್ರಶೇಖರ ಮಯ್ಯ,
ಜನಾರ್ದನ ಹಂದೆ, ವಿಜಯಲಕ್ಷ್ಮೀ ಶೆಟ್ಟಿ, ಪೂರ್ಣಿಮಾ ಪೇಜಾವರ, ವಂದನಾ ಸುರೇಶ್‌, ರಮಾಮಣಿ, ಗಣೇಶ ಹೆಬ್ಬಾರ್‌, ಶಶಿಪ್ರಭ, ತಾರಾನಾಥ ಹೊಳ್ಳ, ಮಾಧವ ಜೋಗಿತ್ತಾಯ, ಡಾ| ಸತ್ಯಕೃಷ್ಣ ಭಟ್‌, ಶ್ರೀರಂಗ ಐತಾಳ್‌, ರವಿ ಭಟ್‌, ವಿನೋದ ಕಲ್ಕೂರ ಮತ್ತಿತರರಿದ್ದರು.

ಗೋವಿನ ಬಗ್ಗೆ ಶ್ರದ್ಧೆ, ಜಾಗೃತಿ ಅವಶ್ಯ
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದಸರಸ್ವತಿ ಸ್ವಾಮೀಜಿ ಅವ ರು ಆಶೀರ್ವಚನ ನೀಡಿ, ಗೋವಿನ ಬಗ್ಗೆ ಶ್ರದ್ಧೆ, ಜಾಗೃತಿ ಅವಶ್ಯ. ಗೋವಿನ ಸೇವೆ ಮಾಡಿದರೆ ಗೋಮಾತೆ ನಮ್ಮನ್ನು ರಕ್ಷಿಸುತ್ತಾಳೆ. ನಡೆದಾಡುವ ದೇವಾಲಯ ಗೋಮಾತೆ ಮನೆಯಲ್ಲಿದ್ದರೆ ಯಾವುದೇ ಪ್ರಕೃತಿ ಚಿಕಿತ್ಸೆಗೆ ಹೊರಗೆ ಹೋಗಬೇಕೆಂದಿಲ್ಲ ಎಂದು ಹೇಳಿದರು.

ಟಾಪ್ ನ್ಯೂಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

10

Kaup ಒಳಚರಂಡಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಸಭೆ

22-bng

Bengaluru: ಏರ್ಪೋರ್ಟ್‌ ಟಿ-2ಗೆ ವರ್ಟಿಕಲ್‌ ಗಾರ್ಡನ್‌ ರಂಗು

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.