Telangana: ಕಾಂಗ್ರೆಸ್‌ನ ಆರು ಗ್ಯಾರಂಟಿ- 42 ಪುಟಗಳ ಅಭಯ ಹಸ್ತಂ ಪ್ರಣಾಳಿಕೆ ಬಿಡುಗಡೆ
ಈ ಪ್ರಣಾಳಿಕೆ ನಮಗೆ ಗೀತೆ, ಕುರಾನ್, ಬೈಬಲ್ ಇದ್ದಂತೆ - ಜಾರಿ ಮಾಡಿಯೇ ಸಿದ್ಧ ಎಂದ ಎಐಸಿಸಿ ಅಧ್ಯಕ್ಷ ಖರ್ಗೆ
Team Udayavani, Nov 17, 2023, 8:50 PM IST
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ 14 ದಿನಗಳು ಬಾಕಿಯಿರುವಂತೆಯೇ ರಾಜ್ಯಕ್ಕೆ ಕಾಂಗ್ರೆಸ್ “ಬಂಪರ್ ಗ್ಯಾರಂಟಿ’ಗಳನ್ನು ಘೋಷಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ “ಗ್ಯಾರಂಟಿಗಳು” ಪಕ್ಷದ “ಕೈ” ಹಿಡಿದ ಬೆನ್ನಲ್ಲೇ ತೆಲಂಗಾಣದಲ್ಲೂ ಇದೇ ಮಾದರಿಯ ಆಶ್ವಾಸನೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಅದೃಷ್ಟ ಪರೀಕ್ಷೆಗೆ ಇಳಿದಿದೆ.
ಶುಕ್ರವಾರ ಪಕ್ಷದ 42 ಪುಟಗಳ “ಅಭಯ ಹಸ್ತಂ’ ಹೆಸರಿನ ಪ್ರಣಾಳಿಕೆ ಬಿಡುಗಡೆ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, 6 ಗ್ಯಾರಂಟಿಗಳು ಮತ್ತು ರಾಜ್ಯಕ್ಕಾಗಿ ಹಲವು ನಿರ್ಣಯಗಳನ್ನೂ ಪ್ರಕಟಿಸಿದ್ದಾರೆ. “ಆಗಿದ್ದಾಗಲಿ, ಈ ಬಾರಿ ಕಾಂಗ್ರೆಸ್ ಅನ್ನೇ ಅಧಿಕಾರಕ್ಕೆ ತರಬೇಕು’ ಎಂಬ ನಿರ್ಧಾರಕ್ಕೆ ತೆಲಂಗಾಣದ ಜನರು ಬಂದಾಗಿದೆ ಎಂದೂ ಖರ್ಗೆ ನುಡಿದಿದ್ದಾರೆ.
ಯುಪಿಎಸ್‌ಸಿ ಮಾದರಿಯಲ್ಲೇ ಟಿಎಸ್‌ಪಿಎಸ್‌ಸಿ(ತೆಲಂಗಾಣ ರಾಜ್ಯ ನಾಗರಿಕ ಸೇವಾ ಆಯೋಗ)ಯನ್ನು ಪುನಶ್ಚೇತನಗೊಳಿಸಲು ಹೊಸ ಕಾನೂನು ರಚಿಸಲಾಗುವುದು, ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಖಾಲಿಯಿರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು, ಬಸಾರಾ ಐಐಐಟಿಯಂತೆ ಇನ್ನೂ 4 ಐಐಐಟಿಗಳನ್ನು ಸ್ಥಾಪಿಸಲಾಗುವುದು ಎಂದೂ ಖರ್ಗೆ ತಿಳಿಸಿದ್ದಾರೆ.
6 ಗ್ಯಾರಂಟಿಗಳು ಯಾವುವು?
ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು, 500ರೂ.ಗೆ ಅಡುಗೆ ಅನಿಲ ಸಿಲಿಂಡರ್, ಬಸ್ ಪ್ರಯಾಣ ಉಚಿತ, ಎಲ್ಲ ಕುಟುಂಬಗಳಿಗೂ 200 ಯೂನಿಟ್‌ವರೆಗೆ ವಿದ್ಯುತ್ ಉಚಿತ, ರೈತ ಬಂಧು ಭರೋಸಾದಡಿ ಪ್ರತಿ ವರ್ಷ ರೈತರಿಗೆ 15 ಸಾವಿರ ರೂ.ಗಳ ಹೂಡಿಕೆ ಸಹಾಯಧನ, ಕೃಷಿ ಕಾರ್ಮಿಕರಿಗೆ 12 ಸಾವಿರ ರೂ.ಗಳ ಸಹಾಯಧನ, ಚೇಯುತ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 4,000 ರೂ.ಗಳ ಸಾಮಾಜಿಕ ಪಿಂಚಣಿ ಮತ್ತು 10 ಲಕ್ಷ ರೂ.ಗಳ ವಿಮೆ, ಇಂದಿರಮ್ಮ ಇಂಡ್ಲು ಯೋಜನೆಯಡಿ ಮನೆಯಿಲ್ಲದವರಿಗೆ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಯುವ ವಿಕಾಸಮ್ ಯೋಜನೆಯಡಿ 5 ಲಕ್ಷ ರೂ. ಧನಸಹಾಯ, ತೆಲಂಗಾಣ ಚಳವಳಿಯಲ್ಲಿ ಹೋರಾಡಿದ ಎಲ್ಲರಿಗೂ 250 ಚದರ ಯಾರ್ಡ್ ನಿವೇಶನ ನೀಡುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ.
ಕರ್ನಾಟಕದ ಪ್ರಸ್ತಾಪ
ಕರ್ನಾಟಕದಲ್ಲಿ ನಾವು ಘೋಷಿಸಿದ್ದ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದಾಗಿ ಕರ್ನಾಟಕದ ಮಹಿಳೆಯರು ವಿವಿಧ ದೇವಾಲಯಗಳಿಗೆ ಭೇಟಿ ನೀಡುವಂತಾಗಿದೆ. ಈ ಪ್ರಣಾಳಿಕೆಯು ನಮಗೆ ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಇದ್ದಂತೆ. ಇದನ್ನು ಜಾರಿ ಮಾಡುವುದು ನಿಶ್ಚಿತ. ಮೊದಲ ಸಂಪುಟ ಸಭೆಯಲ್ಲೇ ಎಲ್ಲ ಗ್ಯಾರಂಟಿಗಳನ್ನೂ ಅನುಷ್ಠಾನ ಮಾಡಲಾಗುತ್ತದೆ ಎಂದಿದ್ದಾರೆ ಖರ್ಗೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.