Dakshina Kannada ಜಿಲ್ಲೆಯ ನಾಲ್ವರಿಗೆ “ಸಹಕಾರ ರತ್ನ’ ಗೌರವ

ನ. 20ರಂದು ವಿಜಯಪುರದ ಸಹಕಾರ ಸಪ್ತಾಹದಲ್ಲಿ ಪ್ರಶಸ್ತಿ ಪ್ರದಾನ

Team Udayavani, Nov 17, 2023, 11:40 PM IST

Dakshina Kannada ಜಿಲ್ಲೆಯ ನಾಲ್ವರಿಗೆ “ಸಹಕಾರ ರತ್ನ’ ಗೌರವ

ಮಂಗಳೂರು: ಸಹಕಾರ ರಂಗದಲ್ಲೇ ಉನ್ನತವಾದ “ಸಹಕಾರ ರತ್ನ’ ಪ್ರಶಸ್ತಿಗೆ ದಕಿಕ್ಷಣ ಕನ್ನಡ ಜಿಲ್ಲೆಯ ನಾಲ್ವರು ಸಹಕಾರಿ ನಾಯಕರು ಆಯ್ಕೆಯಾಗಿದ್ದಾರೆ.

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ನಿರಂಜನ್‌, ಮಂಗಳೂರು ಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಅನಿಲ್‌ ಲೋಬೊ ಹಾಗೂ ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಉಮೇಶ್‌ ಟಿ. ಕರ್ಕೇರ ಆಯ್ಕೆಯಾದವರು.

ನ. 20ರಂದು ವಿಜಯಪುರದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆವರಣದಲ್ಲಿ ನಡೆಯುವ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮೋನಪ್ಪ ಶೆಟ್ಟಿ ಎಕ್ಕಾರು
ಮಂಗಳೂರು ತಾಲೂಕು ಬಡಗ ಎಕ್ಕಾರಿನ ಮೋನಪ್ಪ ಶೆಟ್ಟಿ ಅವರು ಪ್ರಗತಿ ಪರ ಕೃಷಿಕರಾಗಿದ್ದು ಸಹಕಾರಿ, ರಾಜಕೀಯ ಕ್ಷೇತ್ರ ವನ್ನು ಪ್ರವೇಶಿಸಿ ಜವಾಬ್ದಾರಿ ನಿರ್ವಹಿಸಿದವರು. 1977 ರಲ್ಲಿ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ನಿರ್ದೇಶಕರಾಗಿ ಮೊದಲು ಆಯ್ಕೆಯಾದರು. 1978 ರಿಂದ 83ರ ವರೆಗೆ ಇದರ ಅಧ್ಯಕ್ಷರಾಗಿ, 1983ರಿಂದ 1997ರ ವರೆಗೆ ನಿರ್ದೇಶಕರಾಗಿದ್ದವರು. 1997ರಿಂದ ಸುದೀರ್ಘ‌ 25 ವರ್ಷ ಅಧ್ಯಕ್ಷರಾದರು. ಸಂಸ್ಥೆಯನ್ನು ನಿರಂತರ ಯಶಸ್ಸಿನತ್ತ ತೆಗೆದುಕೊಂಡು ಹೋದವರು.

ಬಿ. ನಿರಂಜನ
ತಣ್ಣೀರುಪಂಥ ಬಾವಂತಬೆಟ್ಟು ನಿವಾಸಿ ಬಿ. ನಿರಂಜನ ಅವರು ಜಿಲ್ಲಾ ಪಂಚಾಯತ್‌ ಸದಸ್ಯರಾಗಿ,ಉಪಾಧ್ಯಕ್ಷರಾಗಿ ಇದ್ದವರು. ತಣ್ಣೀರುಪಂಥ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಆರಂಭಗೊಂಡ 1983ನೇ ಇಸವಿಯಿಂದ ಅಧ್ಯಕ್ಷರಾಗಿ ಸುದೀರ್ಘ‌ 41 ವರ್ಷ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಸುದೀರ್ಘ‌ವಾಗಿ ಸಹಕಾರಿ ಮತ್ತು ರಾಜಕೀಯ ರಂಗ ದಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಅನಿಲ್‌ ಲೋಬೋ
ಮಂಗಳೂರಿನ ಎಂಸಿಸಿ ಬ್ಯಾಂಕ್‌ ಎರಡನೇ ಬಾರಿಗೆ ಅಧ್ಯಕ್ಷರಾಗಿ ಈಚೆಗೆ ಕಾರ್ಯಭಾರ
ವಹಿಸಿಕೊಂಡಿರುವ ಅನಿಲ್‌ ಲೋಬೊ ಅವರು ಸಹಕಾರ ಚಳವಳಿಯಲ್ಲಿ ನಾಯಕತ್ವ ಹಾಗೂ ಕಾರ್ಯ ಕೌಶಲದಿಂದ ಗಮನ ಸೆಳೆದವರು. ಅವರ ಅವಧಿಯಲ್ಲಿ ಬ್ಯಾಂಕ್‌ ಪ್ರಗತಿ, ಲಾಭ, ವಿಸ್ತರಣೆಯನ್ನು ಕಂಡಿದೆ. ಗ್ರಾಹಕ ಸ್ನೇಹಿ ಕ್ರಮಗಳೊಂದಿಗೆ ಗಮನ ಸೆಳೆದವರು. ಕ್ರೈಸ್ತ ಸಮುದಾಯದಿಂದ ಸಹಕಾರ ರತ್ನ ಪಡೆಯುತ್ತಿರುವವರಲ್ಲಿ ಮೊದಲಿಗರು.

ಉಮೇಶ್‌ ಟಿ. ಕರ್ಕೇರ
ಕುಳಾçಯವರಾದ ಉಮೇಶ್‌ ಅವರು ಕರ್ನಾಟಕ ಕರಾವಳಿ ಹಾಗೂ ಕೇರಳ, ಮಹಾರಾಷ್ಟ್ರದಾದ್ಯಂತ ತಮ್ಮ ಮತ್ಸ éರಾಜ್‌ ಫಿಶರೀಸ್‌ ಸಂಸ್ಥೆ ವತಿಯಿಂದ ನ್ಯಾಯ ಸಮ್ಮತ ಮೌಲ್ಯ ಸಿಗಲು ಶ್ರಮಿಸಿದವರು. ನಾಡದೋಣಿ ಮೀನುಗಾರರ ಸಂಘದ ಸ್ಥಾಪಕ ಅಧ್ಯಕ್ಷರಾಗಿ 1985ರಿಂದ 1991ರ ವರೆಗೆ ಇದ್ದವರು. ಕರ್ನಾಟಕ ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷರಾಗಿದ್ದರು. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾಗಿ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಂಚಾಲಕ ರಾಗಿ ಸೇವೆ ಸಲ್ಲಿಸಿದ್ದಾರೆ.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

-ROHAN

Rohan City Bejai: ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆಗೆ ಖಚಿತ ಪ್ರತಿಫಲ ಕೊಡುಗೆ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.