Tollywood: ‘ಸಲಾರ್ʼ ಕಂಟೆಂಟ್ ಲೀಕ್ ಮಾಡಿದ ಇಬ್ಬರ ಬಂಧನ; ಎಚ್ಚರಿಕೆ ಕೊಟ್ಟ ಚಿತ್ರತಂಡ
Team Udayavani, Nov 18, 2023, 1:08 PM IST
ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ ಅವರ ʼಸಲಾರ್ʼ ಸಿನಿಮಾ ರಿಲೀಸ್ ಗೆ ಪ್ರೇಕ್ಷಕರು ಕಾಯುತ್ತಿದ್ದಾರೆ. ವರ್ಷದ ಕೊನೆಯಲ್ಲಿ ಬಹುದೊಡ್ಡ ಸಿನಿಮಾವೊಂದು ಬಿಗ್ ಹಿಟ್ ಕೊಡುವ ಸಾಧ್ಯತೆಯಿದೆ.
ಸಿನಿಮಾ ಸಟ್ಟೇರಿದ ದಿನದಿಂದ ಇಂದಿನವರೆಗೂ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಕುತೂಹಲವನ್ನು ಹೆಚ್ಚಿಸಿದೆ. ಇತ್ತೀಚೆಗೆ ಯಾವ ರಾಜ್ಯದಲ್ಲಿ ಯಾವ ಸಂಸ್ಥೆ ಸಿನಿಮಾ ವಿತರಣೆ ಮಾಡುತ್ತದೆ ಎನ್ನುವ ಅಪ್ಡೇಟ್ ನ್ನು ಚಿತ್ರತಂಡ ನೀಡಿತ್ತು. ಇದರೊಂದಿಗೆ ಬಹು ನಿರೀಕ್ಷಿತ ಟ್ರೇಲರ್ ಯಾವಾಗ ರಿಲೀಸ್ ಎನ್ನುವ ದಿನಾಂಕವನ್ನು ರಿವೀಲ್ ಮಾಡಿತ್ತು.
ʼಸಲಾರ್ʼ ಸಟ್ಟೇರಿದ ದಿನದಿಂದ ಚಿತ್ರತಂಡ ಸಿನಿಮಾದ ಚಿತ್ರೀಕರಣದ ಫೋಟೋ, ವಿಡಿಯೋ ಯಾವುದನ್ನು ಲೀಕ್ ಆಗದಂತೆ ನೋಡಿಕೊಂಡಿದೆ. ಆದರೆ ಸಿನಿಮಾದ ಕಂಟೆಂಟ್ ನ್ನು ಲೀಕ್ ಮಾಡಿದ್ದಕ್ಕಾಗಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ: Tiger 3: ವೇದಿಕೆಯಲ್ಲೇ ಇಮ್ರಾನ್ ಹಶ್ಮಿಗೆ ಕಿಸ್ ಮಾಡಿದ ಸಲ್ಮಾನ್ ಖಾನ್.!
ಟಾಲಿವುಡ್ ಸಿನಿರಂಗದ ಪಿಆರ್ ಒ ಆಗಿರುವ ವಂಶಿ ಶೇಖರ್ ಅವರು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ʼಸಲಾರ್ʼ ಸಿನಿಮಾದ ಕಂಟೆಂಟ್ ಲೀಕ್ ಮಾಡಿದ್ದಕ್ಕಾಗಿ ಇಬ್ಬರನ್ನು ಹೈದರಾಬಾದ್ ಸೈಬರ್ ಪೊಲೀಸರು ಬಂಧಿಸಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಸಿನಿಮಾದ ಕುರಿತಾದ ಅನಧಿಕೃತ ವಿಷಯವನ್ನು ಪ್ರಚಾರ ಮಾಡುವವರ ವಿರುದ್ಧವೂ ಇದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರತಂಡ ಎಚ್ಚರಿಕೆ ನೀಡಿದೆ ಎಂದು ವರದಿ ತಿಳಿಸಿದೆ.
ಡಿ.1 ರ ಸಂಜೆ ʼಸಲಾರ್ʼ ಟ್ರೇಲರ್ ರಿಲೀಸ್ ಆಗಲಿದೆ. ಡಿ.22 ರಂದು 5000 ಕ್ಕೂ ಹೆಚ್ಚಿನ ಸ್ಕ್ರೀನ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಬ್ರಹ್ಮಾಜಿ, ತಿನ್ನು ಆನಂದ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಇನ್ನೂ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.
Two individuals have been caught by Cybercrime Police for spreading unauthorised content of #Salaar on social media platforms.
Word of Caution: 🚫 Strict action will be taken against those involved in unauthorised leaks related to @SalaarTheSaga.
— 𝐕𝐚𝐦𝐬𝐢𝐒𝐡𝐞𝐤𝐚𝐫 (@UrsVamsiShekar) November 17, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.