The Venkat House Review; ಬೆಚ್ಚಿ ಬೀಳಿಸುವ ಹೌಸ್‌


Team Udayavani, Nov 18, 2023, 2:35 PM IST

The Venkat House Review

ಸುಂದರವಾದ ಪ್ರಕೃತಿಯ ನಡುವೆ ಇರುವ ಆ ಊರಿನಲ್ಲಿ ಬಹು ದಿನಗಳಿಂದ ಮನೆಯೊಂದು ಖಾಲಿ ಬಿದ್ದಿದೆ. ಸುತ್ತಮುತ್ತಲಿನವರ “ದೃಷ್ಠಿ’ಯಿಂದ ದೂರ ಉಳಿದಿದ್ದ ಆ ಖಾಲಿ ಮನೆಗೆ, ಒಮ್ಮೆ ಇಬ್ಬರು ಅಪರಿಚಿತರ ಆಗಮನವಾಗುತ್ತದೆ. ಅವರು ಯಾರು, ಅವರಿಬ್ಬರ ನಡುವಿನ ಸಂಬಂಧವೇನು ಎಂಬುದು ಅಕ್ಕಪಕ್ಕದವರಿಗೆ ಗೊತ್ತಾಗುವ ಹೊತ್ತಿಗೆ ಅಲ್ಲೊಂದು ಅನಾಹುತ ನಡೆದು ಹೋಗುತ್ತದೆ. ಆ ಅನಾಹುತದ ರಹಸ್ಯ ಬೇಧಿಸಲು ಹೊರಟ ಎದುರು ಮನೆಯ ಹುಡುಗ ಅನಿರೀಕ್ಷಿತ ಸುಳಿಯೊಂದರಲ್ಲಿ ಸಿಲುಕಿಕೊಳ್ಳುತ್ತಾನೆ. ಅಂತಿಮವಾಗಿ “ಹೌಸ್‌’ನಲ್ಲಿ ಸಿಲುಕಿಕೊಂಡ ಎದುರು ಮನೆಯ ಹುಡುಗನಿಗೆ ಮತ್ತು ಎದುರು ಕೂತವರಿಗೆ ಏನೇನು ಅನುಭವವಾಗುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ದಿ ವೆಕೆಂಟ್‌ ಹೌಸ್‌’ ಸಿನಿಮಾದ ಕಥಾಹಂದರ.

ಸಿನಿಮಾದ ಹೆಸರು, ಪೋಸ್ಟರ್‌, ಟ್ರೇಲರ್‌ ಗಳಲ್ಲಿ ತೋರಿಸಿರುವಂತೆ, “ದಿ ವೆಕೆಂಟ್‌ ಹೌಸ್‌’ ಅಪ್ಪಟ ಹಾರರ್‌-ಥ್ರಿಲ್ಲರ್‌ ಶೈಲಿಯ ಕಥಾಹಂದರದ ಸಿನಿಮಾ. ಒಂದು ಮನೆ ಅದರ ಹಿಂದೆ ನಾಲ್ಕಾರು ಪಾತ್ರಗಳ ಸುತ್ತ ಇಡೀ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಸಿನಿಮಾದ ನಾಯಕಿ ಕಂ ನಿರ್ದೇಶಕಿ ಎಸ್ತಾರ್‌ ನರೋನ್ಹಾ.

ಹಾರರ್‌-ಥ್ರಿಲ್ಲರ್‌ ಜೊತೆಗೆ ಲವ್‌, ಸೆಂಟಿಮೆಂಟ್‌, ರೊಮ್ಯಾನ್ಸ್‌, ಒಂದೆರಡು ಮೆಲೋಡಿ ಹಾಡುಗಳು ಹೀಗೆ ಒಂದಷ್ಟು ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನೂ ಹದವಾಗಿ ಬೆರೆಸಿ ಮಾಸ್‌ ಆಡಿಯನ್ಸ್‌ ಗಮನ ಸೆಳೆಯುವ ಕಸರತ್ತು ಕೂಡ ಮಾಡಲಾಗಿದೆ.

ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ಎಸ್ತಾರ್‌ ನರೋನ್ಹಾ, ಮೊದಲ ಸಿನಿಮಾದಲ್ಲೇ ನಿರ್ದೇಶಕಿಯಾಗಿಯೂ ಸೈ ಎನಿಸಿಕೊಂಡಿ ದ್ದಾರೆ. ಸರಳವಾದ ಕಥೆಯೊಂದನ್ನು ಇಟ್ಟುಕೊಂಡು ಅದನ್ನು ಒಂದಷ್ಟು ಕುತೂಹಲಭರಿತವಾಗಿ ಪ್ರೇಕ್ಷಕರ ಮುಂದಿಡಲು ಎಸ್ತಾರ್‌ ನರೋನ್ಹಾ ಹಾಕಿರುವ ಪರಿಶ್ರಮ ಸಿನಿಮಾದಲ್ಲಿ ಕಾಣುತ್ತದೆ.

ಇನ್ನು ಕಲಾವಿದರ ಬಗ್ಗೆ ಹೇಳುವುದಾದರೆ, ಎಸ್ತಾರ್‌ ಗ್ಲಾಮರಸ್‌ ಲುಕ್‌ನಿಂದ ನೋಡುಗರಿಗೆ ಇಷ್ಟವಾದರೆ, ನಟ ಶ್ರೇಯಸ್‌ ಚಿಂಗಾ ಅಭಿನಯ ಸಿನಿಮಾಕ್ಕೆ ದೊಡ್ಡ ಹಿನ್ನಡೆ ಎನ್ನಬಹುದು. ಛಾಯಾಗ್ರಹಣ “ದಿ ವೆಕೆಂಟ್‌ ಹೌಸ್‌’ನ ಅಂದವನ್ನು ಹೆಚ್ಚಿಸಿದೆ, ಸಂಕಲನ ಮತ್ತು ನಿರೂಪಣೆಗೆ ಇನ್ನಷ್ಟು ವೇಗ ನೀಡಿದ್ದರೆ, “ಹೌಸ್‌’ನಲ್ಲಿ ಕೂತವರಿಗೆ ಇನ್ನಷ್ಟು ಹಾರರ್‌ ಥ್ರಿಲ್‌ ಸಿಗುವ ಸಾಧ್ಯತೆಗಳಿದ್ದವು.

ಟಾಪ್ ನ್ಯೂಸ್

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Krishna-Mata-Udupi

Udupi: ಇಂದು ಶ್ರೀ ಕೃಷ್ಣ ಮಠದಲ್ಲಿ 100 ನೃತ್ಯಗಾರರಿಂದ 14 ಗಂಟೆ ನೃತ್ಯ ಪ್ರದರ್ಶನ

Sulya13

Guttigaru: ವೃದ್ಧರನ್ನು ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ದರು!

Cabinet approves: ರೈತಗೆ ಬಂಪರ್‌; ಹಿಂಗಾರು ಬೆಳೆಗೆ ಬೆಂಬಲ ಬೆಲೆ ಹೆಚ್ಚಳ

Cabinet approves: ರೈತಗೆ ಬಂಪರ್‌; ಹಿಂಗಾರು ಬೆಳೆಗೆ ಬೆಂಬಲ ಬೆಲೆ ಹೆಚ್ಚಳ

Mangaluru-VV

Research: ಮಂಗಳೂರು ವಿಶ್ವವಿದ್ಯಾನಿಲಯ “ಪೇಟೆಂಟ್‌’ ಮಹತ್ವದ ಮೈಲುಗಲ್ಲು

Islamabad: ಪಾಕ್‌ನ ಇಬ್ಬಂದಿತನಕ್ಕೆ ಕಿಡಿ: ಜೈಶಂಕರ್‌ ನಡೆ ಶ್ಲಾಘನೀಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

Gopilola Movie Review

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

Bhairadevi Review; ಅಘೋರಿ ಹಿಂದೆ ಘೋರ ಕಥನ

Bhairadevi Review; ಅಘೋರಿ ಹಿಂದೆ ಘೋರ ಕಥನ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Krishna-Mata-Udupi

Udupi: ಇಂದು ಶ್ರೀ ಕೃಷ್ಣ ಮಠದಲ್ಲಿ 100 ನೃತ್ಯಗಾರರಿಂದ 14 ಗಂಟೆ ನೃತ್ಯ ಪ್ರದರ್ಶನ

de

Kundapura: ಲಾರಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಮರಣ ಹೊಂದಿದ ಚಾಲಕ

Sulya13

Guttigaru: ವೃದ್ಧರನ್ನು ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ದರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.