Fireworks: ಜಿಲ್ಲೆಯಲ್ಲಿ ಈ ಬಾರಿ ಪಟಾಕಿ ಸದ್ದು ಜೋರು!  


Team Udayavani, Nov 18, 2023, 3:13 PM IST

Fireworks: ಜಿಲ್ಲೆಯಲ್ಲಿ ಈ ಬಾರಿ ಪಟಾಕಿ ಸದ್ದು ಜೋರು!  

ಚಿಕ್ಕಬಳ್ಳಾಪುರ: ಪರಿಸರ ಸ್ನೇಹಿ ದೀಪಾವಳಿ ಆಚರಣೆ ಬಗ್ಗೆ ಹಲವು ಸಂಘ, ಸಂಸ್ಥೆಗಳು ಜನ ಜಾಗೃತಿ ಮೂಡಿಸುವುದರ ಜೊತೆಗೆ ಢಂಢಂ ಪಟಾಕಿ ಮಾರಾಟಕ್ಕೆ ಸರ್ಕಾರ ಹಲವು ಬಿಗಿ ಕ್ರಮಗಳನ್ನು ಕೈಗೊಂ ಡರೂ ಜಿಲ್ಲೆಯಲ್ಲಿ ಈ ಬಾರಿಯ ದೀಪಾವಳಿಯಂದು ನೆರೆಯ ಕೋಲಾರ ಬಿಟ್ಟರೆ ಚಿಕ್ಕ ಬಳ್ಳಾಪುರ ಅತ್ಯಧಿಕ ಶಬ್ದ ಮಾಲಿನ್ಯ ದಾಖ ಲಿಸಿದ ಅಪಕೀರ್ತಿಗೆ ಪಾತ್ರವಾಗಿದೆ.

ಹೌದು, ದೀಪಾವಳಿ ಹಬ್ಬದ ಆಸತತ ಮೂರು ದಿನಗಳ ಡೆಸಿಬಲ್‌ ಲೆಕ್ಕಚಾರದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಸಿ ಕ್ರೋಢೀಕರಿಸಿರುವ ಅಂಕಿ, ಅಂಶಗಳು ಉದಯವಾಣಿಗೆ ಲಭ್ಯವಾಗಿದು, ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಜಿಲ್ಲೆಯಲ್ಲಿ ಹೆಚ್ಚು ಶಬ್ದಮಾಲಿನ್ಯ ದಾಖಲಾಗಿರುವುದು ದೃಢಪಟ್ಟಿದೆ. ನ.13 ರಂದು ದೀಪಾವಳಿ ಹಬ್ಬದ ವೇಳೆ ಸಿಡಿಸಿದ ಪಟಾಕಿಗಳ ಶಬ್ದ ಮಾಲಿನ್ಯದಲ್ಲಿ ಇಡೀ ರಾಜ್ಯಕ್ಕೆ ನೆರೆಯ ಕೋಲಾರ ಪ್ರಥಮ ಸ್ಥಾನದಲ್ಲಿದ್ದರೆ ಚಿಕ್ಕಬಳ್ಳಾಪುರ ಜಿಲ್ಲೆಯು ನ.13 ರಂದು ಎರಡನೇ ಸ್ಥಾನದಲ್ಲಿದೆ. ಇನ್ನೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲೆಯ ಜನ ವಸತಿ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದಂದು ಉಂಟಾದ ಶಬ್ದವನ್ನು ಅಳತೆ ಮಾಡುವ ನಿಟ್ಟಿನಲ್ಲಿ ತನ್ನ ಶಬ್ದ ಮಾಪನ ಘಟಕದಲ್ಲಿ ದಾಖಲಾಗಿರುವ ಪ್ರಕಾರ 45 ರಿಂದ 55 ರಷ್ಟು ಇರಬೇಕಿದ್ದ ಡೆಸಿಬಲ್‌ ದೀಪಾವಳಿ ಹಬ್ಬದ ಆಚರಿಸಿದ ನ.11 ರಿಂದ 13ರ ವರೆಗೂ ಮೂರು ದಿನಗಳ ಕಾಲ ಸರಾಸರಿ ಬರೋಬ್ಬರಿ 74.8ರಷ್ಟು ಡೆಸಿಬಲ್‌ ದಾಖಲಾಗಿದೆ.

ಕಳೆದ ವರ್ಷದ (2022) ದೀಪಾವಳಿ ಹಬ್ಬದಂದು ಡೆಸಿಬಲ್‌ ಕೇವಲ 56.8 ರಷ್ಟು ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.18 ರಷ್ಟು ಶಬ್ದ ಮಾಲಿನ್ಯ ಹೆಚ್ಚಳ ಕಂಡಿದೆ. ಠುಸ್‌ ಆದ ಹಸಿರು ಪಟಾಕಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಯು ಮಾಲಿನ್ಯದಲ್ಲಿ ತುಸು ಕಡಿಮೆಯಾದರೂ ಶಬ್ದ ಮಾಲಿನ್ಯದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ದಿಕ್ಕಿನಲ್ಲಿ ಹಲವು ಸಂಘ, ಸಂಸ್ಥಗಳು, ಜಿಲ್ಲಾಡಳಿತ ಹಲವು ಕ್ರಮಗಳನ್ನು ವಹಿಸುವು ದರ ಜೊತೆಗೆ ಹಸಿರು ಪಟಾಕಿಗಳ ಮಾರಾಟಕ್ಕೆ ಆದೇಶಿಸಿ ದರೂ, ಜಿಲ್ಲೆಯಲ್ಲಿ ಮಾರ್ಗಸೂಚಿಗಳು ಸಮರ್ಪ ಕವಾಗಿ ಅನುಷ್ಠಾಗೊಳಿಸದಿರುವುದು ಎದ್ದು ಕಾಣುತ್ತಿದೆ.

ದೀಪಾವಳಿ ಆಚರಿಸಿದ 3 ದಿನಗಳ ಡೆಸಿಬಲ್‌ ವಿವರ: ಕಳೆದ ವರ್ಷ ನ.12 ರಂದು 54.3 ರಷ್ಟಿದ್ದ ಡೆಸಿಬಲ್‌ 2023 ರ ನ,12 ರಂದು 68.0 ರಷ್ಟು ದಾಖಲಾದರೆ 2022 ರ ನ.13 ರಂದು 54.9 ರಷ್ಟು ದಾಖಲಾಗಿದ್ದ ಡೆಸಿಬಲ್‌ 2023ರ ನ.13 ರಂದು 77.1ರಷ್ಟು ದಾಖಲಾಗಿದೆ. 2022 ರ ನ.14 ರಂದು 59.3 ರಷ್ಟಿದ್ದ ಡೆಸಿಬಲ್‌ 2023ರ ನ.14 ರಂದು 75.2 ರಷ್ಟು ದಾಖಲಾಗೊಂಡಿದೆಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ಮೂರು ದಿನಗಳ ಸಂದರ್ಭದಲ್ಲಿ ತನ್ನ ಶಬ್ದ ಮಾಲಿನ್ಯ ಮಾಪನ ಘಟಕದಲ್ಲಿ ದಾಖಲಾಗಿರುವ ಶಬ್ದಮಾಲಿನ್ಯ ಡೆಸಿಬಲ್‌ ವಿವರಗಳನ್ನು ಕ್ರೋಢೀಕರಿಸಿ ಪ್ರಕಟಿಸಿರುವ ವಿವರದಲ್ಲಿ ಸ್ಪಷ್ಟಪಡಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ದೀಪಾವಳಿ ಹಬ್ಬದಂದು ವಾಯು ಮಾಲಿನ್ಯ ಈ ವರ್ಷ ಸ್ವಲ್ಪ ಕಡಿಮೆ ಆಗಿದೆ. ಆದರೆ ಶಬ್ದ ಮಾಲಿನ್ಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಶಬ್ದ ಮಾಲಿನ್ಯ ಹಬ್ಬದ ಮೂರು ದಿನಗಳಂದು ದಾಖಲಾಗಿದೆ. – ಸಿದ್ದೇಶ್ವರ್‌, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ, ಪ್ರಾದೇಶಿಕ ಕಚೇರಿ ಚಿಕ್ಕಬಳ್ಳಾಪುರ. 

– ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್‌ ನಿಲ್ದಾಣ  

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Gudibande: ಹೆಸರಿಗಷ್ಟೇ ಬಸ್‌ ನಿಲ್ದಾಣ; ಬಸ್‌ಗಳೇ ಬರಲ್ಲ

Gudibande: ಹೆಸರಿಗಷ್ಟೇ ಬಸ್‌ ನಿಲ್ದಾಣ; ಬಸ್‌ಗಳೇ ಬರಲ್ಲ

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.