![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 19, 2023, 6:37 PM IST
ಚಿಕ್ಕಮಗಳೂರು : ‘ಟೆಂಟಲ್ಲಿ * ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವನು’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಹನಿಡ್ಯೂ ರೆಸಾರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ”ದೊಡ್ಡ ಆಲದಹಳ್ಳಿಯ ಸಾತನೂರಿನಲ್ಲಿ 2 ಟೆಂಟ್ ಇದ್ದವಲ್ಲಾ, ನಾವು ಮಳಿಯಾಳಿ ಸಿನಿಮಾಗೆ ಕಟ್ಟಿಂಗ್ ಸೇರಿಸೋರಲ್ಲ, ನಾವು ಚಿಕ್ಕವರಿದ್ದಾಗ ಆ ಜೀವನ ಮಾಡಿಕೊಂಡು ಬಂದಿಲ್ಲ.ಆ ಮನಸ್ಥಿತಿಯಲ್ಲಿ ಅವನಿಗೆ ಇನ್ನೇನು ಬರುತ್ತದೆ. ಆ ತರ ಪೋಸ್ಟರ್ ಮಾಡಿಸೋದು ಬಿಟ್ಟು ದೇವರದ್ದು ಹಾಕಿಸುತ್ತಾನಾ? ಅದನ್ನೇ ಮುಂದುವರೆಸುತ್ತಿದ್ದಾರೆ, ಅವರು ಬಂದಿರುವುದೇ ಆ ಸಂಸ್ಕೃತಿಯಲ್ಲಿ.ಅಂತವರನ್ನ ಈ ರಾಜ್ಯದ ಜನ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ಸೂ ಇಂದು ಅಂತವರಿಗೆ ಅಧಿಕಾರ ನೀಡಿದ್ದಾರೆ. ಅವರ ಜೀವನ, ಸಂಸ್ಕೃತಿ, ಬದುಕೇ ಅಷ್ಟು.ಏನು ಮಾಡೋದು” ಎಂದರು.
‘ಅವರಿಗೆ ಅವರ ಧರ್ಮದ ಬಗ್ಗೆ ಅಷ್ಟು ಅಭಿಮಾನ ಇದೆ. ನಮ್ಮ ಧರ್ಮದ ಧರ್ಮಾಭೀಮಾನಕ್ಕೆ ನಾನು ಭಯ ಪಡುತ್ತೇನಾ? ಹಾಕುವ ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇನೆ. ಏಕೆ ಹಾಕಬಾರದು? ದೇವರ ಕಾರ್ಯಕ್ರಮ, ಹಾಕೋದು ಬಂದರೆ ಹಾಕುತ್ತೇನೆ. ಕಾನೂನು ಬಾಹಿರವಾಗಿ ಅಲ್ಲ ಯಾವುದನ್ನೂ ಮಾಡಲ್ಲ.ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ” ಎಂದರು.
”ಜಾತ್ಯತೀತತೆ ಅಂದರೆ ಏನು.? ಅಲ್ಲೆಲ್ಲೋ ಹೋಗಿ ನಿಮ್ಮ ಮಂತ್ರಿ ಮಾತನಾಡಿದ್ದಾರಲ್ಲ.ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ಯೋಗ್ಯತೆ ಇದೆ” ಎಂದು ಪ್ರಶ್ನಿಸಿದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
You seem to have an Ad Blocker on.
To continue reading, please turn it off or whitelist Udayavani.