Rajasthan “ಕೈ’ ವಿಕೆಟ್ ಕೀಳಲು “ಕ್ರಿಕೆಟ್’ ಬಳಕೆ; ಕಾಂಗ್ರೆಸ್ ವಿರುದ್ಧ ಮೋದಿ ವ್ಯಂಗ್ಯ
ಪರಸ್ಪರರ ರನೌಟ್‌ಗೆ ಯತ್ನಿಸುತ್ತಾ ಕಾಲ ಕಳೆದರು
Team Udayavani, Nov 19, 2023, 11:51 PM IST
ಹೊಸದಿಲ್ಲಿ: ದೇಶಾದ್ಯಂತ ವಿಶ್ವಕಪ್ ಜ್ವರ ಆವರಿಸಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವಿರೋಧಿಗಳನ್ನು ಹಳಿಯಲು “ಕ್ರಿಕೆಟ್ ಅಸ್ತ್ರ’ವನ್ನೇ ಬಳಸಿಕೊಂಡಿದ್ದಾರೆ. ರವಿವಾರ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಪ್ರಚಾರ ರ‍್ಯಾಲಿಯಲ್ಲಿ “ಕ್ರಿಕೆಟ್’ನ ಉದಾಹರಣೆ ಕೊಡುತ್ತಲೇ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
“ಕ್ರಿಕೆಟ್‌ನಲ್ಲಿ ಬ್ಯಾಟರ್ ಬಂದು ತನ್ನ ತಂಡಕ್ಕಾಗಿ ರನ್‌ಗಳನ್ನು ಸ್ಕೋರ್ ಮಾಡುತ್ತಾನೆ. ರಾಜಸ್ಥಾನ ಕಾಂಗ್ರೆಸ್ ಕೂಡ ಒಂದು ಕ್ರಿಕೆಟ್ ಟೀಂ ಇದ್ದಂತೆ. ಆದರೆ, ಕಾಂಗ್ರೆಸ್‌ನಲ್ಲಿ ಎಷ್ಟೊಂದು ಒಳಜಗಳ ಇದೆಯೆಂದರೆ, ರನ್‌ಗಳನ್ನು ಗಳಿಸುವ ಬದಲು ಕಾಂಗ್ರೆಸ್‌ನ ನಾಯಕರು ಪರಸ್ಪರರನ್ನು ರನೌಟ್ ಮಾಡಲು ಯತ್ನಿಸುತ್ತಲೇ ಕಳೆದ 5 ವರ್ಷಗಳನ್ನು ಕಳೆದರು’ ಎನ್ನುತ್ತಾ ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವಿನ ಅಧಿಕಾರಕ್ಕಾಗಿ ಕಿತ್ತಾಟವನ್ನು ಪರೋಕ್ಷವಾಗಿ ಉಲ್ಲೇಖಿಸಿ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ.
ಜತೆಗೆ, ಕಾಂಗ್ರೆಸ್ ಮತ್ತು ಅಭಿವೃದ್ಧಿ ಕೂಡ ಪರಸ್ಪರ ಶತ್ರುಗಳು. ಅವುಗಳು ಶತ್ರುಗಳಾಗಿಯೇ ಮುಂದು ವರಿಯಲಿವೆ. ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಎಲ್ಲ ಭ್ರಷ್ಟರನ್ನೂ ಹೊರದಬ್ಬಿ, ಕ್ಷಿಪ್ರ ಅಭಿವೃದ್ಧಿ ಸಾಧಿಸಲಾಗುತ್ತದೆ ಎಂದೂ ಮೋದಿ ಭರವಸೆ ನೀಡಿದ್ದಾರೆ.
ಪ್ರಿಯಾಂಕಾ ವಾಗ್ಧಾಳಿ: ತೆಲಂಗಾಣದಲ್ಲಿ ಆಡಳಿ ತಾರೂಢ ಬಿಆರ್‌ಎಸ್, ಎಐಎಂಐಎಂ ಪಕ್ಷದ ಅಸಾ ದುದ್ದೀನ್ ಒವೈಸಿ ಮತ್ತು ಬಿಜೆಪಿ ಪರಸ್ಪರ ಕೈಜೋಡಿಸಿದ್ದು, ಇದನ್ನು ನೀವೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. ತೆಲಂಗಾಣದ ಖನಾಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದ್ದಾರೆ. ಇದೇ ವೇಳೆ, ನಾರಾ ಯಣಪೇಟ್‌ನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಶೇ.30 ಕಮಿಷನ್‌ನ ಬಿಆರ್‌ಎಸ್ ಸರಕಾರವನ್ನು ನ.30ರ ಚುನಾವಣೆಯಲ್ಲಿ ಪ್ಯಾಕ್ ಮಾಡಿ ಮನೆಗೆ ಕಳುಹಿಸಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ.
ಮೋದಿ “ಅದಾನಿ ಜೀ ಕಿ ಜೈ’ ಎನ್ನಬೇಕು
ಪ್ರಧಾನಿ ಮೋದಿ ಯವರು ಎರಡು ಹಿಂದೂಸ್ಥಾನವನ್ನು ರೂಪಿಸಲು ಬಯಸಿದ್ದಾರೆ. ಒಂದು ಅದಾನಿಗೆ, ಮತ್ತೊಂದು ಬಡವರಿಗೆ. ಮೋದಿಯವರು ಕೋಟ್ಯಧಿಪತಿ ಉದ್ಯಮಿ ಗೌತಮ್ ಅದಾನಿ ಯವರಿಗೋಸ್ಕರ ಕೆಲಸ ಮಾಡು ತ್ತಿದ್ದಾರೆ. ಹೀಗಾಗಿ ಅವರು “ಭಾರತ್ ಮಾತಾ ಕೀ ಜೈ’ ಎನ್ನುವ ಬದಲು “ಅದಾನಿ ಜೀ ಕಿ ಜೈ’ ಎನ್ನಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ಥಾನದ ಬುಂದಿ ಮತ್ತು ದೌಸಾದಲ್ಲಿ ರಾಹುಲ್ ಪ್ರಚಾರ ನಡೆಸಿದ್ದಾರೆ.
ಪೈಲಟ್ ಓಟ್‌ಬ್ಯಾಂಕ್‌ಗೆ ಲಗ್ಗೆ ಹಾಕುತ್ತಾ ಬಿಜೆಪಿ?
ರಾಜಸ್ಥಾನದ ಟೋಂಕ್ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ “ಸ್ಥಳೀಯ ಅಭ್ಯರ್ಥಿ ವರ್ಸಸ್ ಬಾಹ್ಯ ಅಭ್ಯರ್ಥಿ’ ಅಸ್ತ್ರವು ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲಟ್‌ಗೆ ಸೋಲಿನ ರುಚಿ ತೋರಿಸಲಿದೆಯೇ? ಟೋಂಕ್ ಶಾಸಕ ಪೈಲಟ್‌ಗೆ ಪ್ರಭಾವಿ ಸಮುದಾಯಗಳ ಬೆಂಬಲವಿದೆ. ಜತೆಗೆ ಕಾಂಗ್ರೆಸ್‌ನ ರಾಷ್ಟ್ರಮಟ್ಟದ ನಾಯಕ ಎಂಬ ವರ್ಚಸ್ಸು ಇದೆ. ಪೈಲಟ್ ಪರ ಗಟ್ಟಿಯಾಗಿ ನಿಂತಿರುವ ಮುಸ್ಲಿಂ-ಗುರ್ಜರ್ ಓಟ್ ಬ್ಯಾಂಕ್ ಅನ್ನು ಅಷ್ಟು ಸುಲಭದಲ್ಲಿ ಒಡೆಯಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೂ ಗೊತ್ತು. ಆದರೂ ಕಮಲ ಪಕ್ಷ ತನ್ನ ಪ್ರಯತ್ನ ಮುಂದುವರಿಸಿದೆ. “ಹಿಂದುತ್ವ’ ಮತ್ತು “ಲೋಕಲ್ ವರ್ಸಸ್ ಔಟ್‌ಸೈಡರ್’ ಮಂತ್ರದೊಂದಿಗೆ ಬಿರುಸಿನ ಪ್ರಚಾರ ನಡೆಸುತ್ತಿದೆ. “ಕಳೆದ ಚುನಾವಣೆಯಲ್ಲಿ ಸಚಿನ್ ಪೈಲಟ್‌ರನ್ನು ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಹಾಗಾಗಿ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿಯೂ ಇಲ್ಲ. ಅಲ್ಲದೇ ಅವರು ಹೊರಗಿನವರು. ಈ ಕ್ಷೇತ್ರದ ಮೂಲ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿಲ್ಲ. ಕ್ಷೇತ್ರದ ಪ್ರತಿಯೊಂದು ಸಣ್ಣ ಸಣ್ಣ ಸಮಸ್ಯೆಯೂ ನನಗೆ ಗೊತ್ತು’ ಎನ್ನುತ್ತಾ ಪ್ರಚಾರ ಮಾಡುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ ಅಜಿತ್ ಸಿಂಗ್ ಮೆಹ್ತಾ. ಇವರ ಮಾತುಗಳು ಕೆಲವು ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾಗಬಹುದು. ಆದರೂ ಪೈಲಟ್ ಇಂದು ಸಿಎಂ ಆಗದಿದ್ದರೂ, ನಾಳೆ ಆಗಿಯೇ ಆಗುತ್ತಾರೆ. ಅವರಿಗೆ ನಮ್ಮ ಬೆಂಬಲ ಮುಂದುವರಿಯುತ್ತದೆ ಎನ್ನುವುದು ಇನ್ನು ಕೆಲವರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.