Cargo: ಭಾರತಕ್ಕೆ ಬರುತ್ತಿದ್ದ ಸರಕು ಹಡಗು ಹೈಜಾಕ್
ಕೆಂಪು ಸಮುದ್ರದಲ್ಲಿ ಹೌತಿ ಬಂಡು ಕೋರರ ಕೃತ್ಯ
Team Udayavani, Nov 20, 2023, 12:31 AM IST
ಹೊಸದಿಲ್ಲಿ: ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಸರಕು ಹಡಗನ್ನು ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೌತಿ ಬಂಡುಕೋರರು ಅಪಹರಣ ಮಾಡಿದ ಘಟನೆ ರವಿವಾರ ನಡೆದಿದೆ.
“ಗ್ಯಾಲಕ್ಸಿ ಲೀಡರ್’ ಎಂಬ ಹೆಸರಿನ ಸರಕು ನೌಕೆಯಲ್ಲಿ ಬೇರೆ ಬೇರೆ ದೇಶ ಗಳಿಗೆ ಸೇರಿದ್ದ 50 ಸಿಬಂದಿ ಇದ್ದಾರೆ. ಆದರೆ ಈ ಪೈಕಿ ಭಾರತೀಯರು ಇದ್ದರೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹಡಗು ಹೈಜಾಕ್ ಆಗಿರುವುದನ್ನು ಇಸ್ರೇಲ್‌ನ ರಕ್ಷಣ ಇಲಾಖೆ ದೃಢಪಡಿಸಿದೆ. ಯೆಮೆನ್ ಸಮೀಪವೇ ಹೌತಿ ಬಂಡುಕೋರರು ಸರಕು ಹಡಗನ್ನು ಅಪಹರಿಸಿರುವುದು ಜಾಗತಿಕವಾಗಿ ಕಳವಳಕಾರಿ ವಿಚಾರ ವಾಗಿದೆ. ಅಂತಾರಾಷ್ಟ್ರೀಯ ನೌಕೆಯ ಮೇಲೆ ಇರಾನ್ ನಡೆಸಿರುವ ದಾಳಿ ಇದಾಗಿದೆ ಎಂದೂ ಇಸ್ರೇಲ್ ರಕ್ಷಣ ಇಲಾಖೆ ಹೇಳಿದೆ. ಜತೆಗೆ ಅದರಲ್ಲಿ ಇಸ್ರೇಲ್ ನಾಗರಿಕರು ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಇರಾನ್‌ನ ನಿರ್ದೇಶನದ ಮೇರೆಗೆ ಬಂಡುಕೋರರು ನೌಕೆಯನ್ನು ಹೈಜಾಕ್ ಮಾಡಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾರ್ಯಾಲಯ “ಎಕ್ಸ್’ನಲ್ಲಿ ಬರೆದುಕೊಂಡಿದೆ. ಗಾಜಾದಲ್ಲಿ ಇಸ್ರೇಲ್ ಆಕ್ರಮಣ ನಿಲ್ಲುವವರೆಗೂ ನಮ್ಮ ದಾಳಿ ಮುಂದುವರಿಯುತ್ತದೆ ಎಂದು ಇತ್ತೀಚೆಗಷ್ಟೇ ಹೌತಿ ಬಂಡುಕೋರರು ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.