Vande Bharat: ಚೆನ್ನೈ-ಬೆಂಗಳೂರು ನಡುವೆ ರಾತ್ರಿ ವೇಳೆ ವಂದೇ ಭಾರತ್
Team Udayavani, Nov 20, 2023, 12:35 AM IST
ಚೆನ್ನೈ: ದೇಶದಲ್ಲಿ ಇದೇ ಮೊದಲ ಮೊದಲ ಬಾರಿಗೆ ರಾತ್ರಿಯೂ ವಂದೇ ಭಾರತ್ ರೈಲು ಸಂಚಾರ ಆರಂಭ ಆಗಲಿದೆ. ನ. 21ರಿಂದ ಬೆಂಗಳೂರು-ಚೆನ್ನೈ ನಡುವೆ ಇದು ಕಾರ್ಯಾಚರಣೆ ಆರಂಭಿಸಲಿದೆ.
ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಮಂಗಳ ವಾರ (ನ. 21) ರಾತ್ರಿ 11 ಗಂಟೆಗೆ ಹೊರಟು ಬೆಂಗಳೂರಿನ ಯಶವಂತಪುರಕ್ಕೆ ಬುಧವಾರ ಬೆಳಗ್ಗೆ 4.30ಕ್ಕೆ ತಲುಪಲಿದೆ. ಈ ರೈಲಿನಲ್ಲಿ ಒಟ್ಟು ಎಂಟು ಕೋಚ್ಗಳು ಇರಲಿವೆ. ಎರಡು ನಿಲ್ದಾಣಗಳ ನಡುವಿನ ದೂರವನ್ನು ಹೊಸ ರೈಲು ಐದೂವರೆ ತಾಸುಗಳಲ್ಲಿ ಕ್ರಮಿಸಲಿದೆ.
ಯಶವಂತಪುರದಿಂದ ನ. 20ರಂದು ಸಂಜೆ 5.45ಕ್ಕೆ ಹೊರಟ ಮತ್ತೂಂದು ವಂದೇ ಭಾರತ್ ರೈಲು ಅದೇ ದಿನ ರಾತ್ರಿ 10 ಗಂಟೆಗೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಕ್ಕೆ ತಲುಪಲಿದೆ.
ದೇಶದಲ್ಲಿ ಒಟ್ಟು 34 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ರಜಾಕಾಲದಲ್ಲಿ ಪ್ರಯಾಣಿಕರಿಗಾಗಿ ವಿಶೇಷವಾಗಿ ಹೊಸ ಮಾದರಿಯ ರೈಲುಗಳ ಸಂಚಾರ ಆರಂಭ ಮಾಡಲಾಗುತ್ತಿದೆ ಎಂದು ದಕ್ಷಿಣ ರೈಲ್ವೇಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.