Krishi Mela 2023: ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ನೀಡುವ ಸೂರ್ಯಕಾಂತಿ

Team Udayavani, Nov 20, 2023, 11:10 AM IST

TDY-5

ಬೆಂಗಳೂರು: ರಾಜ್ಯದಲ್ಲಿ ಸೂರ್ಯಕಾಂತಿ ಎಣ್ಣೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವ ಬೆನ್ನಲ್ಲೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಡಿಮೆ ನೀರಿನಲ್ಲಿ 80 ದಿನಗಳಲ್ಲಿ ಕಟಾವಿಗೆ ಬರುವ, ಹೆಕ್ಟೇರ್‌ಗೆ 24 ಕ್ವಿಂಟಾಲ್‌ ಇಳುವರಿ ಕೊಡುವ “ಕೆಬಿಎಸ್‌ಎಚ್‌-90 ಸಂಕರಣ ಸೂರ್ಯಕಾಂತಿ ತಳಿ’ ಸಂಶೋಧಿಸಿದ್ದಾರೆ.

ಉಕ್ರೇನ್‌-ರಷ್ಯಾ ಯುದ್ಧದಿಂದ ಭಾರತಕ್ಕೆ ವಿದೇಶಗಳಿಂದ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಹೀಗಾಗಿ ಸ್ವಾವಲಂಬನೆ ಸಾಧಿಸಲು ಹೊಸ ಮಾದರಿಯ ಸೂರ್ಯಕಾಂತಿ ಬೆಳೆಗೆ ಕರ್ನಾಟಕದಲ್ಲಿ ಹೆಚ್ಚಿನ ಬೇಡಿಕೆವ್ಯಕ್ತವಾಗಿದೆ. “ಕೆಬಿಎಸ್‌ಎಚ್‌-90 ಸಂಕರಣ ಸೂರ್ಯಕಾಂತಿ’ಯು ಅಲ್ಪಾವದಿ ತಳಿಯಾಗಿದ್ದು, 80 ದಿನಗಳಲ್ಲಿ ಕಟಾವಿಗೆ ಬರಲಿದೆ. ಒಂದು ಹೆಕ್ಟೇರ್‌ಗೆ ನೀರಾವರಿಪ್ರದೇಶದಲ್ಲಿ 24 ಕ್ವಿಂಟಾಲ್‌, ಮಳೆ ಆಶ್ರಿತ ಪ್ರದೇಶದಲ್ಲಿ 12 ಕ್ವಿಂಟಾಲ್‌ ಇಳುವರಿ ಬರುತ್ತದೆ. ಶೇ.40ರಷ್ಟು ಎಣ್ಣೆಯ ಅಂಶ ಹೊಂದಿರುತ್ತದೆ. ವರ್ಷಪೂರ್ತಿ ಎಲ್ಲ ವಾತಾವರಣಗಳಲ್ಲೂ ಈ ಬೆಳೆ ಬೆಳೆಯಬಹುದಾಗಿದೆ.

ಬರಗಾಲದಲ್ಲಿ “ಕೆಬಿಎಸ್‌ಎಚ್‌ -90′ ಸೂಕ್ತ: ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಗಳಲ್ಲಿ ಎಲ್ಲೆಂದರಲ್ಲಿ ಬೆಳೆಯಬಹುದು. ಹೆಚ್ಚಿನ ನೀರಿನ ಅಗತ್ಯತೆ ಇಲ್ಲ. ರಾಜ್ಯದಲ್ಲಿ ಮಳೆ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಕಾಲಕ್ಕೆ ಕೆಬಿಎಸ್‌ಎಚ್‌-90 ಸೂರ್ಯಕಾಂತಿ ಬೆಳೆ ಸೂಕ್ತವಾಗಿದೆ.

ಕರಾವಳಿಯಂತಹ ನೀರು ನಿಲ್ಲುವ ಪ್ರದೇಶಗಳಲ್ಲಿ ಹಾಗೂ ಉಪ್ಪು ಮಣ್ಣು ಇರುವ ಪ್ರದೇಶಕ್ಕೆ ಈ ಬೆಳೆ ಸೂಕ್ತವಲ್ಲ. ಬತ್ತದ ಗದ್ದೆಗಳಲ್ಲೂ ಇದನ್ನು ಬಿತ್ತನೆ ಮಾಡಬಹುದು. 80 ದಿನಗಳಲ್ಲಿ ಬೆಳೆ ಬರುವುದರಿಂದ ಮುಂಗಾರಿನಲ್ಲಿ ಬೆಳೆ ತೆಗೆದು ಮತ್ತೆ ಹಿಂಗಾರಿನಲ್ಲಿ ಇನ್ನೊಂದು ಬೆಳೆ ತೆಗೆದುಕೊಂಡರೆ ಹೆಚ್ಚು ಇಳುವರಿ ನಿರೀಕ್ಷಿಸಬಹುದು. ಜಿಕೆ-ವಿಕೆಯಲ್ಲಿರುವ ರಾಷ್ಟ್ರೀಯ ಬೀಜ ಪ್ರಯೋಜನೆಯಲ್ಲಿ “ಕೆಬಿಎಸ್‌ ಎಚ್‌-90 ಬೀಜವನ್ನು ಉತ್ಪಾದಿಸಿ ರೈತರಿಗೆ ಮಾರುಕಟ್ಟೆಗೆ ಕೊಡುತ್ತಾರೆ. ಕೆಬಿಎಸ್‌ಎಚ್‌-90 ತಳಿಯ ಬೀಜಕ್ಕೆ ಒಂದು ಕೆಜಿಗೆ 500 ರೂ. ನಿಗದಿಪಡಿಸಲಾಗಿದೆ. 2024ರಿಂದ ಈ ಬೀಜ ಖರೀದಿಸಬಹುದು.

ಬಿತ್ತನೆ ಮಾಡುವುದು ಹೇಗೆ ?: ಒಂದು ಎಕರೆಗೆ ಎರಡು ಕೆಜಿ ಬೀಜ ಬೇಕಾಗುತ್ತದೆ. ಎರಡು ಅಡಿ ಸಾಲು ಮಾಡಬೇಕು. ಸಾಲಿನಿಂದ ಸಾಲಿಗೆ ಎರಡು ಅಡಿ, ಗಿಡದಿಂದ ಗಿಡಕ್ಕೆ ಸಾಲಿನೊಳಗೆ ಒಂದು ಅಡಿ ಅಂತರ ನಿರ್ಮಿಸಬೇಕು. ಸಾಲಿನಲ್ಲಿಗೊಬ್ಬರ ಹಾಕಿ ಒಂದೊಂದು ಗುಣಿಗೆ ಎರೆಡೆರಡು ಬೀಜ ಬಿತ್ತಿದರೆ ಅದು 6 ದಿನಕ್ಕೆ ಮೊಳಕೆ ಬರುತ್ತದೆ. 10 ದಿನಗೊಳಗೆ ಒಂದು ಗುಣಿಯಿಂದ ಒಂದೇ ಗಿಡ ಬಿಡುತ್ತದೆ. ಒಂದು ವೇಳೆ ಒಂದು ಗುಣಿಯಲ್ಲಿ ಎರಡು ಗಿಡ ಬಿಟ್ಟರೆ ಇಳುವರಿ ಕಡಿಮೆಯಾಗುತ್ತದೆ. ವರ್ಷದಲ್ಲಿ 3 ಬಾರಿ ಬೆಳೆ ತೆಗೆಯಬಹುದು. ಒಂದೇ ಪ್ರದೇಶದಲ್ಲಿ ಪದೇಪದೆ ಬೆಳೆದರೆ ಆ ಪ್ರದೇಶದ ಮಣ್ಣಿನ ಫ‌ಲವತ್ತತೆ ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ.

ಹೀಗಾಗಿ ಒಂದು ವರ್ಷ ಒಂದು ಪ್ರದೇಶದಲ್ಲಿ ಬೆಳೆದರೆ ಮತ್ತೂಂದು ವರ್ಷ ಅದರ ಪಕ್ಕದ ಜಾಗದಲ್ಲಿ ಬೆಳೆಯಬೇಕು. ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಪ್ರಕಾರ 1 ಕ್ವಿಂಟಾಲ್‌ಗೆ ಮಾರುಕಟ್ಟೆಯಲ್ಲಿ 6,700 ರೂ. ಇದೆ.

ಕೆಬಿಎಸ್‌ಎಚ್‌-90 ವಿಶೇಷತೆ ಏನು ?: ಸಾಮಾನ್ಯ ಸೂರ್ಯಕಾಂತಿ ಬೆಳೆಗಳಲ್ಲಿ ಇತ್ತೀಚೆಗೆ ವಿವಿಧ ರೋಗಗಳು ಬಾಧಿಸಿ ಇಳುವರಿ ಕಡಿಮೆಯಾಗುತ್ತದೆ. ಆದರೆ, ಕೆಬಿಎಸ್‌ಎಚ್‌ -90 ತಳಿ ರೋಗ ರುಜಿನ ತಡೆದುಕೊಳ್ಳುವ ಶಕ್ತಿ ಹೆಚ್ಚಿರುತ್ತದೆ. ಇದು ಉತ್ತಮ ಸಂಕರಣ ತಳಿಯಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಸೂರ್ಯಕಾಂತಿಗಿಂತ ಇದರಲ್ಲಿ ಕಾಳು ಕಟ್ಟುವಿಕೆ ಹೆಚ್ಚಾಗಿ ಇಳುವರಿಗೆ ಸಹಕಾರಿಯಾಗಿದೆ. ಜೊತೆಗೆ ಎಣ್ಣೆಯ ಅಂಶ ಹೆಚ್ಚಿರುತ್ತದೆ. ಸೂರ್ಯಕಾಂತಿಗೆ ಹೆಚ್ಚಾಗಿ ಬಾಧಿಸುವ ಕೇದಿಗೆರೋಗ ಕೆಬಿಎಸ್‌ ಎಚ್‌-90ಗೆ ತಗುಲುವುದಿಲ್ಲ. ಹೀಗಾಗಿ ಇವುಗಳಿಗೆ ಔಷಧಿ ಸಿಂಪಡಿಸುವ ಅಗತ್ಯವಿಲ್ಲ

ಸೂರ್ಯಕಾಂತಿ ಗಿಡಗಳ ನಡುವೆ ಜೇನು ಕೃಷಿ:  ಕೆಬಿಎಸ್‌ಎಚ್‌-90 ತಳಿಯ ಸೂರ್ಯಕಾಂತಿ ಗಿಡಗಳ ಮಧ್ಯೆ ಜೇನು ಕೃಷಿ ಮೂಲಕ ರೈತರು ಇನ್ನಷ್ಟು ಲಾಭಗಳಿಸಬಹುದು. ಜೇನು ನೊಣಗಳ ಪರಾಗಸ್ಪರ್ಶಕ್ಕಾದರೆ ಒಂದು ಎಕರೆಗೆ 4 ಜೇನು ಪೆಟ್ಟಿಗೆ ಇಡಬಹುದು. ಜೇನುತುಪ್ಪ ಸಂಗ್ರಹಕ್ಕಾದರೆ 10 ಅಡಿ ಅಂತರದಲ್ಲಿ ಒಂದೊಂದು ಜೇನು ಪೆಟ್ಟಿಗೆ ಇಡಬಹುದು. ಒಂದು ಜೇನುಪೆಟ್ಟಿಯಿಂದ 10 ಕೆಜಿ ಜೇನು ಸಂಗ್ರಹಿಸಬಹುದು ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜೇನು ಕೃಷಿ ತಜ್ಞ ನಿತಿನ್‌.

ಕಳೆದ 6 ವರ್ಷಗಳ ಸತತ ಸಂಶೋಧನೆ ನಡೆಸಿ ಕೆಬಿಎಸ್‌ಎಚ್‌-90 ಸಂಕರಣ ಸೂರ್ಯಕಾಂತಿ ತಳಿ ಪತ್ತೆ ಹಚ್ಚಿ ಅಭಿವೃದ್ಧಿಪಡಿಸಿದ್ದೇವೆ. 2024ರ ಆರಂಭದಲ್ಲಿ ಇದರ ಬೀಜ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಸಾಮಾನ್ಯ ಸೂರ್ಯಕಾಂತಿಗೆ ಹೋಲಿಸಿದರೆ ಈ ತಳಿಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ತೆಗೆಯಬಹುದು.ಡಾ.ಎಸ್‌.ಡಿ.ನೆಹರು, ಹಿರಿಯ ವಿಜ್ಞಾನಿ, ಸೂರ್ಯಕಾಂತಿ ಪ್ರಾಯೋಜನೆ ವಿಭಾಗ, ಜಿಕೆ-ವಿಕೆ 

ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.