![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 21, 2023, 7:45 AM IST
ಈ ಜೀವನದ ಸತ್ಯ-ಅಸತ್ಯತೆಗಳಿಗಿಂತ ಕೆಲವೊಂದು ಕನಸೇ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ?!
ನಂಗೆ ಈ ತರ ಸಾವಿರ ಸಲ ಅನ್ಸಿದೆ. ನಿಮಗೂ ಅನಿಸಿರಬಹುದು. ತಾಯಿ ತನ್ನ ಮಗುವಿಗೆ ಚಂದಮಾಮ ತೋರಿಸಿ ಮಗು ಊಟ ಮಾಡ್ಲಿ ಅಂತ ಸತ್ಯವಲ್ಲದಿದ್ದರೂ ಏನೇನೊ ಕತೆ ಹೇಳ್ತಾರಲ್ಲ ಹಾಗೇ. ಅಂತದ್ದು ಯಾವುದೂ ಕೂಡ ನಿಜ ಆಗಲ್ಲ ಅಂತಾ ಗೊತ್ತಿದ್ರೂ ಕೂಡ ಆ ತರ ಆದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ಅನಿಸೋದಿದೆ!
ಕಂಡ ಕನಸುಗಳು ಸಾವಿರಾರು ಆದ್ರೆ, ಅದರಲ್ಲಿ ನೆನಪಿರೋದೆಷ್ಟು ಅರ್ಧದಷ್ಟು ಕೂಡ ಇಲ್ಲ. ಕೆಲವೊಂದು ಕನಸುಗಳು ತುಂಬಾ ಚೆನ್ನಾಗಿರುತ್ತೆ, ಆದ್ರೆ ಯಾವುದೂ ಕೂಡ ನೆನಪಿರೋದಿಲ್ಲ. ಅದೇನೋ ಹೇಳ್ತಾರಲ್ಲಾ ಕಂಡ ಕನಸುಗಳು ಮರೆತು ಹೋದ್ರೆ ಅದು ನಿಜ ಆಗುತ್ತೆ ಅಂತಾ ಒಮ್ಮೆಮ್ಮೆ ಅಂತಹ ಒಳ್ಳೆ ಕನಸುಗಳು ಮರೆತೇ ಹೋಗ್ಲಿ, ಹಾಗಾದರೂ ನಿಜವಾಗಲಿ ಅನ್ನೋ ಹುಚ್ಚು ಆಸೆ ನಮಗೆ!
ಈ ಬದುಕಿನ ಕೆಲವು ಘಟನೆಗಳು ಕೂಡ ಹಾಗೆ ಅಲ್ವಾ. ಮರೆಯಬೇಕಾಗಿರೋದನ್ನ ಮರೆಯೋಕಾಗಲ್ಲ ಮರೆಯಬಾರದು ಅಂತ ಅನ್ಕೊಂಡ್ರೆ ಬೇಗ ಮರೆತು ಬಿಡುತ್ತೇವೆ. ಒಂದೊಂದು ಸಲ ನಿದ್ದೆ ಮಾಡೋವಾಗ ಒಳ್ಳೆ ಕನಸುಗಳು ಬೀಳಲಿ ಅಂತ ಅಂದುಕೊಳ್ಳುತೇವೆ. ಆದ್ರೆ ಕನಸೇ ಬೀಳ್ಳೋದಿಲ್ಲ… ಯಾವಾಗ ಕನಸುಗಳು ಕಾಣೋ ಗುಂಗಲ್ಲೇ ನಾವು ಇರೋದಿಲ್ವೋ ಆವಾಗ್ಲೇ ಕನಸುಗಳು ಬೀಳುತ್ತವೆ…
ಜೀವನ ವಿಚಿತ್ರ ಅಲ್ವಾ?
ಕೆಲವೊಂದು ಕೆಟ್ಟ ಕನಸುಗಳು ನಮ್ಮ ನಿದ್ದೆಯನ್ನೇ ಹಾಳುಗೆಡುತ್ತವೆ. ಕೆಲವೊಂದು ಕನಸು ಬರಲಿ ಅಂತ ನಿದ್ದೆ ಮಾಡುತ್ತೇವೆ. ಆದರೆ ಕೆಲವೊಮ್ಮೆ ಕನಸಿಗಿಂತ ವಾಸ್ತವವೇ ತುಂಬಾ ಕರಾಳವಾಗಿರುತ್ತೆ ಅಲ್ವಾ? ನಾವು ಅಂದುಕೊಳ್ಳೋ ರೀತಿ ಜೀವನ ಇರಲ್ಲ ಅಂತ ಗೊತ್ತಿದ್ದರೂ ಕೂಡ ಹೀಗೆ ಇಬೇìಕು ಅಂತ ಅಂದುಕೊಳ್ಳುತ್ತೇವೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನವೆಂಬಂತೆ ಇಲ್ಲದನ್ನು ಬಯಸುವುದು, ಆಗದೇ ಇರುವುದನ್ನು ಕಲ್ಪಿಸಿಕೊಳ್ಳುವುದೇ ಮಾನವನ ಸಹಜ ಗುಣ.
ಕನಸಿಗೂ ಜೀವನದ ವಾಸ್ತವಕ್ಕೂ ಸಾಮ್ಯತೆಗಳಿವೆ. ಕನಸುಗಳಂತೆ ಕೆಲವೊಂದು ಘಟನೆಗಳೂ ಕೂಡ ನಮಗರಿವಿಲ್ಲದಂತೆ ಬಂದು ಬಿಡುತ್ತವೆ. ಕೆಲವೊಂದು ಘಟನೆಗಳನ್ನು ಮರೆಯಬೇಕೆಂದೆನಿಸಿದರೂ ಮರೆಯಲಾಗದೆ ಮರಳಿ ಮರಳಿ ಕಾಡುತಿರುತ್ತವೆ. ಎಲ್ಲವೂ ಅನಿಶ್ಚಿತವಾಗಿಯೇ ಇರುತ್ತವೆ.
ಕಣ್ಣು ಮುಚ್ಚಿ ಕಣೋ ಕನಸುಗಳು ಸಾವಿರ. ಆದ್ರೆ ಕಣ್ಣು ತೆರೆದು ಕಾಣೋ ಕನಸೊಂದೆ. ಆ ಒಂದು ಕನಸಿಗೋಸ್ಕರ ಇಡೀ ಜೀವನದುದ್ದಗಲಕ್ಕೂ ಓಡುತ್ತಾ ಓಡುತ್ತಾ ಕೆಲವೊಬ್ಬರ ಕನಸುಗಳು ನನಸಾದರೆ, ಕನಸಿನ ಜತೆ ಮನಸುಗಳೂ ಚೂರಾಗುವುದು ಸಹಜ.
ಕನಸುಗಳು ಚೂರಾದಷ್ಟು ಬಾರಿ ಪುನಃ ಚಿಗುರೊಡೆಯುತ್ತವೆ. ಜೀವನದಲ್ಲಿ ಕನಸುಗಳಿಗೆಂದೂ ಕೊನೆಯಿಲ್ಲ ಹಾಗೆಯೇ ಅವುಗಳು ಕೊಡುವ ಉಲ್ಲಾಸ, ಚಡಪಡಿಕೆ, ನಿರೀಕ್ಷೆ, ಭರವಸೆ, ಹತಾಶೆ,ಹಾಗೂ ಕಣ್ಣೀರ ಧಾರೆಗೂ ಕೂಡ!
-ಪ್ರೇರಣಾ ಸುವರ್ಣ
ವಿ.ವಿ.ಕಾಲೇಜು ಮಂಗಳೂರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.