Special Tribal Scheme; ಆರು ತಿಂಗಳಿನಿಂದ ಸಿದ್ದಿ ಜನರಿಗೆ ಸಿಗುತ್ತಿಲ್ಲ ಪೌಷ್ಟಿಕ ಆಹಾರ
Team Udayavani, Nov 20, 2023, 2:20 PM IST
ಕಾರವಾರ: ವಿಶೇಷ ಗಿರಿಜನ ಯೋಜನೆಯಡಿ ಪೌಷ್ಟಿಕ ಆಹಾರ ಉತ್ತರ ಕನ್ನಡದ ಸಿದ್ದಿಗಳಿಗೆ ಕಳೆದ ಆರು ತಿಂಗಳಿಂದ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘ ರಾಜ್ಯಾಧ್ಯಕ್ಷ ಬೆನೆತ್ ಸಿದ್ದಿ ಆರೋಪಿಸಿದರು.
ಕಾರವಾರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಮಾಡಿದ ಅವರು 2011 ರಿಂದ ವರ್ಷದ ಪ್ರತಿ ಆರು ತಿಂಗಳು ಗಿರಿಜನರಿಗೆ ಪೌಷ್ಟಿಕ ಆಹಾರ ಕೊಡುವ ಯೋಜನೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಾರಂಭವಾಗಿತ್ತು. ಜೂನ್ ನಿಂದ ಡಿಸೆಂಬರ್ ತನಕ ಪ್ರತಿ ತಿಂಗಳು ಜಿಲ್ಲೆಯ ಆರು ಸಾವಿರ ಸಿದ್ದಿ ಬುಡಕಟ್ಟು ಜನಾಂಗಕ್ಕೆ ಪೌಷ್ಟಿಕ ಆಹಾರ ತಲುಪುತ್ತಿತ್ತು. ಆದರೆ 2023 ಜೂನ್ ಜುಲೈ ತಿಂಗಳಿಂದ ಪೌಷ್ಟಿಕ ಆಹಾರ ಸರಬರಾಜಾಗಿಲ್ಲ. ಅಧಿಕಾರಿಗಳು ಆಹಾರ ಸರಬರಾಜಿಗೆ ಟೆಂಡರ್ ಆಗಿಲ್ಲ ಎನ್ನುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಸಮಸ್ಯೆ ಉಂಟಾಗಿದೆ ಎಂದು ಬೆನತ್ ಸಿದ್ದಿ ಹೇಳಿದರು.
ಪೌಷ್ಟಿಕ ಆಹಾರ ಬಾರದೆ ಆರು ತಿಂಗಳು ತಡವಾಗಿದೆ. ಈ ಸಲ ಮಳೆ ಸರಿಯಾಗಿ ಬಂದಿಲ್ಲ. ಕಾಡಿನ ವಾಸಿಗಳಾದ ನಮಗೆ ಕೂಲಿ ಸಹ ಸಿಕ್ಕಿಲ್ಲ ಎಂದರು.
ಮಳೆಗಾಲದಲ್ಲಿ ಪೌಷ್ಟಿಕ ಆಹಾರದ ಅವಶ್ಯಕತೆ ಇದೆ. ಈ ಸಲ ನಮ್ಮ ಬುಡಕಟ್ಟು ಜನರು ಉಪವಾಸ ಇರುವಂತಾಗಿದೆ. ಈ ಸಲ ಪೌಷ್ಟಿಕ ಆಹಾರ ಸಿಗದಿದ್ದರೆ, ಡಿಸೆಂಬರ್ ನಲ್ಲಿ ಬೃಹತ್ ಪ್ರತಿಭಟನೆ ಮಾಡ್ತಿವಿ ಎಂದು ಸಿದ್ದಿ ಸಮುದಾಯದ ಗೌರವಾಧ್ಯಕ್ಷ ಜಾನ್ ಕೆ. ಸಿದ್ದಿ ಎಂದರು.
ಕಾಡಿನಲ್ಲಿ ವಾಸವಿರುವದ ಸಿದ್ದಿಗಳಿಗೆ ಸಮಾಜ ಕಲ್ಯಾಣ ಇಲಾಖೆಯವರು ಪೌಷ್ಟಿಕ ಆಹಾರ ಕೊಡುತ್ತಾರೆ. ಈ ಯೋಜನೆ ಕಳೆದ 13 ವರ್ಷದಿಂದ ನಡಿಯುತ್ತಿದೆ. ಸಿದ್ದಿಗಳು ಕಾಡಿನ ಕಿರು ಉತ್ಪನ್ನ ಸಂಗ್ರಹಿಸಿ, ಮಾರಾಟ ಮಾಡಿ ಬದುಕುತ್ತೇವೆ. ಈಗ ಕಾಡಿನ ಉತ್ಪನ್ನ ಸಿಗುತ್ತಿಲ್ಲ. ಪೌಷ್ಟಿಕ ಆಹಾರ ಮೊದಲ ಸಾರಿ ಕಳೆದ ಆರು ತಿಂಗಳಿಂದ ಸಿಕ್ಕಿಲ್ಲ ಎಂದರು.
ಇದನ್ನೂ ಓದಿ:BJP Karnataka; ನಮ್ಮ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ: ಬಿ.ವೈ ವಿಜಯೇಂದ್ರ
ಗಿರಿಜನ ಯೋಜನೆ ಅಡಿ, 6000 ಸಿದ್ದಿ ಕುಟುಂಬಗಳಿಗೆ 8 ಕೆಜಿ ಅಕ್ಕಿ, 30 ಕೊಳಿ ಮೊಟ್ಟೆ, 6 ಕೆಜಿ ಬೇಳೆ ಕಾಳು, ಒಂದು ಲೀಟರ್ ನ ಎರಡು ಪ್ಯಾಕೆಟ್ ಅಡುಗೆ ಎಣ್ಣೆ, ಅರ್ಧ ಕೆ.ಜಿ. ತುಪ್ಪ ವಿತರಿಸುತ್ತಿದ್ದರು. ಈ ಸಲ ಟೆಂಡರ್ ಆಗಿಲ್ಲ ಎಂಬ ನೆಪ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಬುಡಕಟ್ಟು ಜನಾಂಗಕ್ಕೆ ತೊಂದರೆಯಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿಗೆ ಸೋಮವಾರ ಮನವಿ ನೀಡಿದ್ದೇವೆ ಎಂದು ಬೆನೆತ್ ಸಿದ್ದಿ ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಸಹ ಈ ಸಮಸ್ಯೆ ತರಲಾಗಿದೆ. ಸಮಸ್ಯೆ ಬಗೆ ಹರಿಯುವ ವಿಶ್ವಾಸ ಇದೆ ಎಂದು ಸಿದ್ದಿ ಬುಡಕಟ್ಟು ಸಮುದಾಯದ ಮುಖಂಡರು ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಿಗಳು ಎಸ್ ಟಿ ಜನಾಂಗದಡಿ ಬರುತ್ತಾರೆ. ಗಿರಿಜನ ಪೌಷ್ಟಿಕ ಆಹಾರ ಸೌಲಭ್ಯದ ಯೋಜನೆ ಬೆಳಗಾವಿ, ಧಾರವಾಡ ಜಿಲ್ಲೆಯ ಸಿದ್ದಿ ಕುಟುಂಬಗಳಿಗೆ ಸಿಗುತ್ತಿಲ್ಲ ಎಂದು ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನೆತ್ ಸಿದ್ದಿ ಹೇಳಿದರು.
ಥೆರೇಜಾ, ಫಾತಿಮಾ, ಬಸ್ಯ್ಯಾವ್ ಸಿದ್ದಿ ಮುಂತಾದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.