Mandya:ಚೆಲುವನಾರಾಯಣಸ್ವಾಮಿಗೆ ವಿಶೇಷ ವಸ್ತ್ರ ಮಾರ್ಯಾದೆ

ಮೇಲುಕೋಟೆಯಲ್ಲಿ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧ

Team Udayavani, Nov 21, 2023, 1:35 PM IST

Mandya:ಚೆಲುವನಾರಾಯಣಸ್ವಾಮಿಗೆ ವಿಶೇಷ ವಸ್ತ್ರ ಮಾರ್ಯಾದೆ

ಮೇಲುಕೋಟೆ: ತಮಿಳುನಾಡು ಸರ್ಕಾರದ ವಿಶೇಷ ಆದೇಶದಂತೆ ಅಲ್ಲಿನ ಮುಜರಾಯಿ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಅರ್ಚಕರ ತಂಡ ರಾಜಮುಡಿ ಉತ್ಸವದಂದು ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಗೆ ವಿಶೇಷ ವಸ್ತ್ರ ಮರ್ಯಾದೆ ಸಮರ್ಪಿಸಿದರು.

ರಾಮಾನುಜರ ತಿರುತ್ತಂಬಿ ಎಂದೇ ಹೆಸರಾದ ಕಾಂಚೀಪುರಂ ಜಿಲ್ಲೆಯ ಮದುರಮಂಗಲಮ್‌ನ ಅರುಲ್‌ಮಿಗು ಶ್ರೀವೈಕುಂಠ ಪೆರುಮಾಳ್‌, ಎಂಬಾರ್‌ ದೇವಾಲಯದಿಂದ ಎರಡನೇ ವರ್ಷದ ಪರಂಪರೆಯ ಸಮ್ಮಿಲನದ ಉದ್ದೇಶದಿಂದ ಕಾಂಚೀಪುರಂ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಮುಜರಾಯಿ ಇಲಾಖೆ ಜಂಟಿ ಆಯುಕ್ತೆ ಆರ್‌.ವಾಗ್ಮತಿ ನೇತೃತ್ವದ ಅಧಿ ಕಾರಿಗಳ ತಂಡದೊಂದಿಗೆ ಆಗಮಿಸಿ ವಿಶೇಷವಾಗಿ ತಂದಿದ್ದ ರೇಷ್ಮೆ ವಸ್ತ್ರಗಳನ್ನು ಮೇಲುಕೋಟೆಯಲ್ಲಿ ಛತ್ರಿಚಾಮರ
ದೀವಟಿಗೆಗಳೊಂದಿಗೆ ದೇವಾಲಯದ ಸುತ್ತ ಮೆರವಣಿಗೆ ಮಾಡಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಚಾರ್ಯರಿಗೆ ಸಮರ್ಪಿಸಿದರು.

ಜಂಟಿ ಆಯುಕ್ತೆ ಆರ್‌.ವಾಗ¾ತಿ ಮಾತನಾಡಿ, ಮೇಲುಕೋಟೆ ಭಾರತದ ಶ್ರೀಮಂತಿಕೆಯ ಭವ್ಯ ಪರಂಪರೆಯ ತಾಣವಾಗಿದೆ. ತಮಿಳುನಾಡಿಗೂ ಕ್ಷೇತ್ರಕ್ಕೂ ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಪಾರ ಬಾಂಧವ್ಯವಿದೆ. ತಮಿಳುನಾಡಿನಿಂದ ಸಾಕಷ್ಟು ಭಕ್ತರು ಮೇಲುಕೋಟೆಗೆ ಭೇಟಿ ನೀಡುತ್ತಾರೆ.

ರಾಮಾನುಜರೂ ಸಹ ತಮಿಳುನಾಡಿನಿಂದ ಬಂದು ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿ ಭಾರತದ ಸಂಸ್ಕೃತಿ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು. ಸಾಂಸ್ಕೃತಿಕ ಪರಂಪರೆಯ ಮುಂದುವರೆಸುವ ದೃಷ್ಟಿಯಿಂದ ತಮಿಳುನಾಡು ಸರ್ಕಾರ ರಾಜಮುಡಿ ಉತ್ಸವದಂದು ಚೆಲುವನಾರಾಯಣನಿಗೆ ವಿಶೇಷ ವಸ್ತ್ರ ಸಮರ್ಪಣೆ ಮಾಡುತ್ತಾ ಬಂದಿದೆ.

ತಮಿಳುನಾಡು ಸರ್ಕಾರ ಮೇಲುಕೋಟೆಯಲ್ಲಿ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧವಾಗಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರ ಸಹಮತ ನೀಡಿದರೆ ಮುಂದಿನ ಯೋಜನೆಯ ರೂಪುರೇಷೆ ಸಿದ್ಧ ಮಾಡಲು ಶ್ರಮಿಸುತ್ತೇವೆಂದು ತಿಳಿಸಿದರು.

ಮೇಲುಕೋಟೆಯ ಕಲ್ಯಾಣಿ ಸಮುಚ್ಛ ಯ, ಯೋಗ ನರಸಿಂಹಸ್ವಾಮಿಬೆಟ್ಟ, ಇಲ್ಲಿನ ಭವ್ಯ ಸ್ಮಾರಕಗಳು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ತಮ್ಮದೇ ಕೊಡುಗೆ ನೀಡಿವೆ. ಇಂತಹ ಶ್ರೀಮಂತಿಕೆಯ ಮಹತ್ವವನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.

ಶ್ರೀಪೆರಂಬೂದೂರಿನ ಚಕ್ರಪಾಣಿಯವರ ಸಂಘಟನೆಯಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮದ ವಸ್ತ್ರ ಸಮರ್ಪಣೆಯ
ಮೆರವಣಿಗೆಯಲ್ಲಿ ಮೇಲುಕೋಟೆ ದೇವಾಲಯದ ಸಿಇಒ ಮಹೇಶ್‌, ಪಾರುಪತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸ ನರಸಿಂಹನ್‌ ಗುರೂಜಿ, ಪರಿಚಾರಕ ಎಂ.ಎನ್‌.ಪಾರ್ಥಸಾರಥಿ, ಶ್ರೀಪೆರಂಬೂದೂರು ವೈಕುಂಠ ಪೆರುಮಾಳ್‌ ಎಂಬಾರ್‌ ದೇವಾಲಯದ ಇಒ ರಾಜಾ ಎಸ್‌.ಇರುಂಪೆರುವಳದಿ, ಟ್ರಸ್ಟಿ ಪಿ.ನರಸಿಂಹನ್‌, ಲಕ್ಷ್ಮಣರಾವ್‌, ವೆಂಕಟೇಶನ್‌, ಕಾಂಚೀಪುರಂ ವರದರಾಜಸ್ವಾಮಿ ದೇವಾಲಯದ ಸಿಇಒಗಳಾದ ಎಸ್‌. ಶ್ರೀನಿವಾಸನ್‌, ಮುತ್ತುಲಕ್ಷ್ಮೀ, ಎಚ್‌ಆರ್‌ಎಂಸಿ ಇನ್ಸ್‌ಪೆಕ್ಟರ್‌ ಜೆ.ಸುರೇಶಕುಮಾರ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ

ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ

Maharashtra Poll: ಹೃದಯಾಘಾತದಿಂದ ಮತಗಟ್ಟೆಯಲ್ಲೇ ಮೃತಪಟ್ಟ ಸ್ವತಂತ್ರ ಅಭ್ಯರ್ಥಿ

Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ

Minister-Madhu

Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

13

Kollywood: ಯೂಟ್ಯೂಬ್‌ ವಿಮರ್ಶೆ ಬ್ಯಾನ್‌ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು

Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು

ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ

ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ

Maharashtra Poll: ಹೃದಯಾಘಾತದಿಂದ ಮತಗಟ್ಟೆಯಲ್ಲೇ ಮೃತಪಟ್ಟ ಸ್ವತಂತ್ರ ಅಭ್ಯರ್ಥಿ

Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ

Minister-Madhu

Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ

15

Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ… ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.