Puttur ಬೆಂಗಳೂರಿನತ್ತ ನಾಳೆ ಕಂಬಳ ಕೋಣಗಳು: ಅಶೋಕ್ ರೈ
Team Udayavani, Nov 22, 2023, 12:00 AM IST
ಪುತ್ತೂರು: ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ನ. 24, 25 ಮತ್ತು 26ರಂದು ಕಂಬಳ ಕೂಟ ನಡೆಯಲಿದೆ. ಈ ಮೂಲಕ ಕರಾವಳಿಯ ಜನಪದ ಕ್ರೀಡೆ ವಿಶ್ವಕ್ಕೆ ಪರಿಚಯವಾಗಲಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರೂ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಕಂಬಳ ಕೂಟಕ್ಕೆ ಲಾರಿ ಮೂಲಕ ಕೋಣಗಳು ತೆರಳಲಿದ್ದು ನ. 23ರಂದುಬೆಳಗ್ಗೆ 9ಕ್ಕೆ ಪ್ರಯಾಣಕ್ಕೆ ಉಪ್ಪಿನಂಗಡಿ ಯಿಂದ ಚಾಲನೆ ನೀಡಲಾಗುತ್ತದೆ.
150ಕ್ಕೂ ಅಧಿಕ ಜೋಡಿ ಕೋಣಗಳು ಲಾರಿಗಳಲ್ಲಿ ತೆರಳಲಿವೆ. ಕೋಣಗಳನ್ನು ಲಾರಿಯಲ್ಲಿ ಹಾಗೇ ಕೊಂಡು ಹೋಗುವುದಿಲ್ಲ. ಬ್ಯಾಂಡ್, ವಾದ್ಯಗಳ ಮೂಲಕ ತೆರಳುತ್ತೇವೆ. ಕೋಣಗಳ ಬಳಕೆಗಿರುವ ನೀರು, ಆಹಾರ ಸಾಮಗ್ರಿಗಳನ್ನು ಊರಿನಿಂದಲೇ ಕೊಂಡೊಯ್ಯಲಾಗುತ್ತದೆ. ಪಶು ವೈದ್ಯರ ತಂಡವೂ ವಾಹನವು ಇರಲಿದೆ. ಆಯಾ ತಾಲೂಕಿನಲ್ಲಿ ಸ್ವಾಗತ ಕಾರ್ಯಕ್ರಮ, ವಿಶ್ರಾಂತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಹಾಸನದಿಂದ ನೆಲಮಂಗಲದ ತನಕ ಭವ್ಯ ಮೆರವಣಿಗೆಯಲ್ಲಿ ಕೋಣಗಳನ್ನು ಕರೆದೊಯ್ಯಲಾಗುತ್ತದೆ. ನ. 24ರಂದು ಅರಮನೆ ಮೈದಾನಕ್ಕೆ ಪ್ರವೇಶ ಅಲ್ಲಿ ಭವ್ಯ ಸ್ವಾಗತ ನೀಡಲಾಗುತ್ತದೆ. ಆ ದಿನ ವಿರಾಮದ ದಿನವಾಗಿದ್ದು ಅದೇ ದಿನ ಅರಮನೆ ಮೈದಾನದಲ್ಲಿ ತುಳು ಕಾರ್ಯಕ್ರಮಗಳು ನಡೆಯಲಿದೆ. ನ. 25ರ ಬೆಳಗ್ಗೆ ಕಂಬಳ ಆರಂಭವಾಗಲಿದೆ.
8 ಲಕ್ಷ ಮಂದಿ ನಿರೀಕ್ಷೆ
ಸುಮಾರು 8ರಿಂದ 10 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಮೈದಾನಕ್ಕೆ ಕೊರಿಯನ್ ಟೆಂಟ್ ಹಾಕಲಾಗಿದೆ. 150 ಸ್ಟಾಲ್‌ಗಳು ಬರಲಿದ್ದು ಕ್ಯಾಂಟೀನ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಇರುತ್ತವೆ ಎಂದು ಅಶೋಕ್ ರೈ ತಿಳಿಸಿದ್ದಾರೆ.
90 ಲಕ್ಷ ರೂ. ಬಾಡಿಗೆ ಹೇಳಿ ಉಚಿತವಾಗಿ ಕೊಟ್ಟರು!
ಕಂಬಳಕ್ಕೆ ಅರಮನೆ ಮೈದಾನವೇ ಬೇಕಾಗಿತ್ತು. ಈ ಬಗ್ಗೆ ರಾಣಿಯವರಲ್ಲಿ ಕೇಳಿದಾಗ ಮೊದಲಿಗೆ ಒಪ್ಪಲಿಲ್ಲ. ಬಳಿಕ ರಾಜಮನೆತನದ ಪುರೋಹಿತರ ಸಲಹೆ ಯಂತೆ ಒಪ್ಪಿಗೆ ನೀಡಿದ್ದರು. ಅರಮನೆ ಮೈದಾನದ ಒಂದು ಭಾಗ ರಾಜಮನೆತನದ ಬೇರೊಬ್ಬರು ವ್ಯಕ್ತಿಗೆ ಸೇರಿದ್ದು. ಆ ಜಾಗಕ್ಕೆ 90 ಲಕ್ಷ ರೂ. ಬಾಡಿಗೆ ಕೊಟ್ಟರೆ ಮಾತ್ರ ಅವಕಾಶ ಕೊಡುವುದಾಗಿ ಹೇಳಿದ್ದ ಅದರ ಮಾಲಕರು ಕಂಬಳದ ಮಹತ್ವವನ್ನು ಅರಿತ ಬಳಿಕ ಉಚಿತವಾಗಿ ಸ್ಥಳಾವಕಾಶ ನೀಡಿದ್ದಾರೆ ಎಂದು ಅಶೋಕ್ ರೈ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.