Airport ಮುಂದುವರೆದ ಕಾಮಗಾರಿಗೆ ಅಡ್ಡಿ: ಪೊಲೀಸರು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ
ಅಧಿಕಾರಿಗಳು, ಪೊಲೀಸರಿಂದ ಸ್ಥಳೀಯರಿಗೆ ಭದ್ರತೆಯ ಭರವಸೆ
Team Udayavani, Nov 22, 2023, 12:47 PM IST
ಶಿವಮೊಗ್ಗ: ಏರ್‌ಪೋರ್ಟ್ ಮುಂದುವರೆದ ಕಾಮಗಾರಿಗೆ ಸ್ಥಳೀಯ ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಬುಧವಾರ ನಡೆಯಿತು. ಪೊಲೀಸರು, ಗ್ರಾಮಸ್ಥರು ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗದ್ದಲ ಏರ್ಪಟ್ಟಿತ್ತು.
ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ, ರನ್ ವೇ ವಿಸ್ತರಣೆ ಸಂಬಂಧ ಅಂದಾಜು 500 ಮೀಟರ್‌ನಷ್ಟು ಜಾಗವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಬಳಸಿಕೊಂಡಿದ್ದು ಅದಕ್ಕೆ ಕಾಂಪೌಂಡ್ ಹಾಕುವ ಕೆಲಸ ನಡೆಯುತ್ತಿದೆ. ವಿಮಾನ ನಿಲ್ದಾಣದ ಕಾಂಪೌಂಡ್ ಪಕ್ಕದಿಂದಲೇ ಈಗ ಹೊಸ ಜೈಲು, ಸಿದ್ಧರಹಟ್ಟಿ ಗ್ರಾಮಕ್ಕೆ ಹೋಗಬೇಕು. ಈಗ ಕಾಂಪೌಂಡ್ ನಿರ್ಮಾಣದಿಂದ 1 ಕಿ.ಮೀ ಸುತ್ತುವರಿದು ಬರಬೇಕು. ಇದು ಅರಣ್ಯ ಪ್ರದೇಶವಾಗಿದ್ದು ಜನರು ಓಡಾಡುವುದು ವಿರಳ. ರಾತ್ರಿ ವೇಳೆ ಇಲ್ಲಿ ಪುಂಡ ಪೋಕರಿಗಳು ಮದ್ಯ ಸೇವನೆ ಮಾಡುತ್ತಾ ಗಲಾಟೆ ಮಾಡುತ್ತಾ ನಿಂತಿರುತ್ತಾರೆ.
ಗಾರ್ಮೆಂಟ್ಸ್ ಹೋಗಿಬರುವ ಹೆಣ್ಣು ಮಕ್ಕಳಿಗೆ ಇರಿಸುಮುರಿಸು ಆಗುತ್ತಿದೆ. ಏರ್‌ಪೋರ್ಟ್ ಗೆ ಮುಂದುವರೆದ ಕಾಮಗಾರಿಗೆ ಕಾಂಪೌಂಡ್ ನಿರ್ಮಾಣಕ್ಕೆ ನಮಗೆ ಅಡ್ಡಿ ಇಲ್ಲ. ನಮಗೆ ಹೊಸದಾಗಿ ಮಾಡಿರುವ ರಸ್ತೆಗೆ ಬೀದಿ ದೀಪ ವ್ಯವಸ್ಥೆ, ಪೊಲೀಸ್ ಬೀಟ್ ವ್ಯವಸ್ಥೆ, ಈ ದಾರಿಯಲ್ಲಿ ಹೋಗುತ್ತಿರುವ ಸರಕಾರಿ ಬಸ್ಸನ್ನು ಗ್ರಾಮದವರೆಗೆ ಬರುವಂತೆ ಮಾಡಬೇಕು. ಅಲ್ಲಿವರೆಗೂ ಕೆಲಸ ನಡೆಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಮುಂದುವರೆಸಲು ಹೋದಾಗ ಗ್ರಾಮಸ್ಥರು ಅದಕ್ಕೆ ಅಡ್ಡಿಪಡಿಸಿದರು. ಈ ಹಿಂದೆ ಜಿಲ್ಲಾಧಿಕಾರಿಗಳು ಅಂಡರ್‌ಪಾಸ್ ಮಾಡಿಕೊಡುವ ಭರವಸೆ ನೀಡಿದ್ದರು. ಅದು ಸಹ ಆಗಿಲ್ಲ. ತಹಸೀಲ್ದಾರ್ ಬಂದು ಭರವಸೆ ನೀಡುವರೆಗೂ ಕೆಲಸ ನಡೆಸಲು ಬಿಡುವುದಿಲ್ಲ ಎಂದು ಆಗ್ರಹಿಸಿದರು. ಕೆಲಕಾಲ ಪೊಲೀಸರು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
ತಹಸೀಲ್ದಾರ್ ಎನ್.ಜೆ.ನಾಗರಾಜ್ ಸ್ಥಳಕ್ಕೆ ಆಗಮಿಸಿ ಬೀದಿ ದೀಪ ವ್ಯವಸ್ಥೆ, ಬಸ್ ಸೇವೆ ವಿಸ್ತರಿಸುವ ಭರವಸೆ ನೀಡಿದರು. ಅಂತಿಮವಾಗಿ ಗ್ರಾಮದ ಮುಖಂಡರು ಪ್ರತಿಭಟನೆ ಹಿಂಪಡೆದರು. ನಂತರ ಕಾಂಪೌಂಡ್ ಕಾಮಗಾರಿ ಆರಂಭಗೊಂಡಿತು.
ತುಂಗಾನಗರ ಠಾಣೆ ಪಿಐ ಮಂಜುನಾಥ್, ಪಿಎಸ್‌ಐ ಮಂಜುನಾಥ್, ಕುಮಾರ್, ೩೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು.
ಇದನ್ನೂ ಓದಿ: Jammu – Kashmir: ಉಗ್ರರ ಜೊತೆ ನಂಟು: ವೈದ್ಯ, ಪೊಲೀಸ್ ಸೇರಿ ನಾಲ್ವರು ಸರ್ಕಾರಿ ನೌಕರರು ವಜಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.