![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Nov 22, 2023, 3:22 PM IST
ನವದೆಹಲಿ: ಎರಡು ತಿಂಗಳ ವಿರಾಮದ ನಂತರ ಕೆನಡಿಯನ್ನರಿಗೆ ಇ-ವೀಸಾ ಸೇವೆಗಳನ್ನು ಪುನರಾರಂಭಿಸಲು ಭಾರತ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದೆ.
ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ, ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಾಗಿತ್ತು. ಅದರ ನಂತರ ಭಾರತವು ಕೆನಡಿಯನ್ನರಿಗೆ ಇ-ವೀಸಾ ಸೇವೆಯನ್ನು ಸ್ಥಗಿತಗೊಳಿಸಿತು. ಆದರೆ ರಾಜತಾಂತ್ರಿಕ ವಿವಾದದ ನಡುವೆ ಎರಡು ತಿಂಗಳ ಬಳಿಕ ಭಾರತವು ಕೆನಡಿಯನ್ನರಿಗೆ ಇ-ವೀಸಾ ಸೇವೆಗಳನ್ನು ಮತ್ತೆ ಪುನರಾರಂಭಿಸಿದೆ.
ಭಾರತ ಕೆನಡಾ ರಾಜತಾಂತ್ರಿಕ ವಿವಾದದ ನಡುವೆ ಸೆಪ್ಟೆಂಬರ್ 21 ರಂದು ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಜೂನ್‌ನಲ್ಲಿ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ “ಭಾರತ ಸರ್ಕಾರದ ಏಜೆಂಟರು” ಭಾಗಿಯಾಗಿದ್ದಾರೆ ಎಂದು ಕೆನಡಾ ಆರೋಪಿಸಿತ್ತು. ಆದಾಗ್ಯೂ, ಭಾರತ ಸರ್ಕಾರವು ನಿಜ್ಜಾರ್‌ನ ಕೊಲೆಯಲ್ಲಿ ಯಾವುದೇ ಪಾತ್ರವನ್ನು ಬಲವಾಗಿ ನಿರಾಕರಿಸಿತು,
ಟ್ರುಡೊ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಭಾರತ, ಕೆನಡಾದ ಹಿರಿಯ ರಾಜತಾಂತ್ರಿಕರಿಗೆ 5 ದಿನಗಳೊಳಗೆ ದೇಶ ತೊರೆಯುವಂತೆ ಆದೇಶಿಸಿತ್ತು. ನಂತರ ಕೆನಡಾ ತನ್ನ ನಾಗರಿಕರಿಗೆ ಭಾರತದ ಕೆಲವು ಭಾಗಗಳಿಗೆ ಭೇಟಿ ನೀಡದಂತೆ ಸಲಹೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಕೂಡ ಕೆನಡಾಕ್ಕೆ ಇದೇ ರೀತಿಯ ಸಲಹೆಯನ್ನು ಬಿಡುಗಡೆ ಮಾಡಿತ್ತು. ಅದರ ನಂತರ ಭಾರತವು ಕೆನಡಾದಲ್ಲಿರುವ ಭಾರತದ ವೀಸಾ ಅರ್ಜಿ ಕೇಂದ್ರದ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ವಿದೇಶಾಂಗ ವ್ಯವಹಾರಗಳ ಸಚಿವಾಲಯವು, “ಕೆನಡಾ ವೀಸಾ ನೀಡುವಲ್ಲಿ ತಾರತಮ್ಯ ಮಾಡುತ್ತದೆ. ವೀಸಾ ಸೇವೆಯನ್ನು ನಿಲ್ಲಿಸುವ ಹಿಂದಿನ ಉದ್ದೇಶ ಕೆನಡಾದ ನಾಗರಿಕರು ಭಾರತಕ್ಕೆ ಬರುವುದನ್ನು ತಡೆಯುವುದು ಅಲ್ಲ. ವೀಸಾ ಹೊಂದಿರುವವರು ಬರಬಹುದು, ಆದರೆ ಭದ್ರತಾ ಕಾರಣಗಳಿಂದ ಅದನ್ನು ಅಮಾನತುಗೊಳಿಸಲಾಗಿದೆ. ನಮ್ಮ ರಾಜತಾಂತ್ರಿಕರು “ವಿಯೆನ್ನಾ ಒಪ್ಪಂದದ ಪ್ರಕಾರ, ಭಾರತವು ಪ್ರತಿಯೊಬ್ಬ ರಾಜತಾಂತ್ರಿಕರಿಗೆ ಸಾಕಷ್ಟು ಭದ್ರತೆಯನ್ನು ಒದಗಿಸುತ್ತದೆ.” ಈ ಘಟನೆಯ ನಂತರ, ಕೆನಡಾದ ನಾಗರಿಕರಿಗೆ ಇ-ವೀಸಾ ಸೇವೆಗಳನ್ನು ಎರಡು ತಿಂಗಳವರೆಗೆ ಸ್ಥಗಿತಗೊಳಿಸಲಾಯಿತು. ಇದೀಗ ಭಾರತ ಮತ್ತೊಮ್ಮೆ ವೀಸಾ ಸೇವೆಯನ್ನು ಆರಂಭಿಸಿದೆ.
ಇದನ್ನೂ ಓದಿ: Nejaru: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಡಿ.5 ರವೆರೆಗೆ ಆರೋಪಿ ನ್ಯಾಯಾಂಗ ಬಂಧನ
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.