Panchamasali ಬನಹಟ್ಟಿ ಸಮಾವೇಶ ಚುನಾವಣೆ ಗಿಮಿಕ್: ಪರ್ಯಾಯ ಸಮಾವೇಶ
Team Udayavani, Nov 22, 2023, 11:40 PM IST
ರಬಕವಿ-ಬನಹಟ್ಟಿ: ಇದೇ 26 ರಂದು ಬನಹಟ್ಟಿಯಲ್ಲಿ ನಡೆಯವ ಪಂಚಮಸಾಲಿ ಸಮಾವೇಶವು ರಾಜಕೀಯ ಪ್ರೇರಣೆಯಿಂದ ಕೂಡಿದ್ದು, ಮುಂಬರುವ ಲೋಕಸಭೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶವನ್ನು ರಬಕವಿ ಬನಹಟ್ಟಿ, ತೇರದಾಳ, ಜಮಖಂಡಿ ಹಾಗೂ ಮುಧೋಳದ ಪಂಚಮಸಾಲಿ ಸಮಾಜ ಬಾಂಧವರು ಬಹಿಷ್ಕರಿಸಲಿದ್ದಾರೆ. ಡಿಸೆಂಬರ್ 2 ನೇ ವಾರದಲ್ಲಿ ಪರ್ಯಾಯ ಪಂಚಮಸಾಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಪಂಚಮಸಾಲಿ ಸಮಾಜದ ಮುಖಂಡ ಭೀಮಶಿ ಮಗದುಮ್ ತಿಳಿಸಿದರು.
ಬುಧವಾರ ಬನಹಟ್ಟಿಯಲ್ಲಿ ನಡೆದ ತಾಲ್ಲೂಕು ಪಂಚಮಸಾಲಿ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಈಗಾಗಲೇ ನಾವಲಗಿ ಗ್ರಾಮದಲ್ಲಿ ರಾಣಿ ಚನ್ನಮ್ಮ ಜಯಂತ್ಯುತ್ಸವ, ವಿಜಯೋತ್ಸವ ಮತ್ತು ಪಂಚಮಸಾಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ 25 ರಂದು ಸಸಾಲಟ್ಟಿಯಲ್ಲಿಯೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಸ್ಥಳೀಯ ಶಾಸಕ ಸಿದ್ದು ಸವದಿ ಸ್ಥಳೀಯ ಪಂಚಮಸಾಲಿ ಸಮಾಜ ಬಾಂಧವರನ್ನು ಕಡೆಗಣಿಸಿ ಹೊರಗಿನ ಮುಖಂಡರನ್ನು ಸಮಾವೇಶಕ್ಕೆ ಕರೆಯಿಸಿ ಇಲ್ಲಿಯ ನಾಯಕರನ್ನು ಟೀಕಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದು ಕೇವಲ ಭಾರತೀಯ ಜನತಾ ಪಕ್ಷದ ಕಾರ್ಯಕ್ರಮವಾಗಲಿದೆ.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಸಿದ್ದು ಸವದಿ ಪಂಚಮಸಾಲಿ ಸಮಾಜಕ್ಕೆ ಒಂದು ಅಡಿಯಷ್ಟು ಸ್ಥಳವನ್ನು ಸರ್ಕಾರದಿಂದ ಕೊಡಿಸಲಿಲ್ಲ. ಈಗ ಏಕ ಪಕ್ಷೀಯವಾಗಿ ತಮ್ಮ ಪಕ್ಷದ ಜನರನ್ನು ಕರೆದುಕೊಂಡು ಸಮಾಜದ ಬಗ್ಗೆ ಮೊಸಳೆ ಕಣ್ಣೀರನ್ನು ಸುರಿಸುತ್ತಿದ್ದಾರೆ.
ಡಿಸೆಂಬರ್ 2 ನೇ ವಾರದಲ್ಲಿ ಪಂಚಮಸಾಲಿ ಪೀಠದ ಮೂವರು ಜಗದ್ಗುರುಗಳನ್ನು, ಸಮಾಜದ ಮುಖಂಡರಾದ ಸಿದ್ದು ಕೊಣ‍್ಣೂರ, ಸಂಗಮೇಶ ನಿರಾಣಿಯವರ ಹಾಗೂ ಇನ್ನೀತರ ಮುಖಂಡರ ನೇತೃತ್ವದಲ್ಲಿ ಪಕ್ಷಾತೀತವಾಗಿ ಪರ್ಯಾಯ ಸಮಾವೇಶವನ್ನು ನಡೆಸಿ ಸರ್ಕಾರದಿಂದ ಪಂಚಮಸಾಲಿ ಸಮಾಜಕ್ಕೆ ದೊರೆಯಬೇಕಾದ ಸೌಕರ್ಯಗಳನ್ನು ಪಡೆದುಕೊಳ್ಳಲು ಸರ್ಕಾರದ ಮೇಲೆ ಒತ್ತಡವನ್ನು ಕೂಡಾ ಹಾಕಲಾಗುವುದು. ಈ ಸಮಾವೇಶಕ್ಕೆ ಸಮಾಜದ ಪ್ರಮುಖರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಭೀಮಶಿ ಮಗದುಮ್ ತಿಳಿಸಿದರು.
ಇದೇ 26 ರಂದು ನಡೆಯುವ ಸಮಾವೇಶವನ್ನು ರಬಕವಿ, ಬನಹಟ್ಟಿ, ತೇರದಾಳ, ಮುಧೋಳ ಹಾಗೂ ಜಮಖಂಡಿ ತಾಲ್ಲೂಕಿನ ಪಂಚಮಸಾಲಿ ಸಮಾಜ ಬಾಂಧವರು ಒಕ್ಕೊರಲಿನಿಂದ ಬಹಿಷ್ಕರಿಸುತ್ತೇವೆ ಎಂದು ಮಗದುಮ್ ತಿಳಿಸಿದರು.
ಮಾರುತಿ ಗಣಿ, ಬಸವರಾಜ ದಲಾಲ, ತುಕ್ಕಪ್ಪ ಗುರುಲಿಂಗ, ಶಂಕರ ಧರಿಗೌಡರ, ಹನಮಂತ ಉಳ್ಳಾಗಡ್ಡಿ, ಪರಪ್ಪ ಉರಭಿನವರ, ಗುರುಲಿಂಗಪ್ಪ ಮುಗಳಖೋಡ, ಮಲ್ಲಪ್ಪ ಹೆಗ್ಗಳಗಿ, ಧರೆಪ್ಪ ಪಾಟೀಲ, ದುಂಡಪ್ಪ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.