Team India ಸತತ 11 ಜಯದ ದಾಖಲೆ ತಪ್ಪಿ ಹೋಯಿತು

ಉಳಿದ ಅಜೇಯ ತಂಡಗಳ ಕಿರು ನೋಟವೊಂದು ಇಲ್ಲಿದೆ...

Team Udayavani, Nov 22, 2023, 11:53 PM IST

1-a-asa

ವಿಶ್ವಕಪ್‌ ಇತಿಹಾಸದಲ್ಲಿ ತಂಡ ವೊಂದು ಸೋಲನ್ನೇ ಕಾಣದೆ ಚಾಂಪಿಯನ್‌ ಎನಿಸಿಕೊಳ್ಳುವ ಅಪೂರ್ವ ಅವಕಾಶದಿಂದ ಭಾರತ ವಂಚಿತ ವಾಯಿತು. ಆಸ್ಟ್ರೇಲಿಯ ದೆದುರಿನ ಫೈನಲ್‌ ಪಂದ್ಯವನ್ನೂ ಜಯಿಸಿದ್ದರೆ ವಿಶ್ವಕಪ್‌ನ 6ನೇ ಅಜೇಯ ಓಟ ಇದಾಗುತ್ತಿತ್ತು. ನಮ್ಮವರು ಈ ಯಾದಿಯಲ್ಲಿ ಮೊದಲ ಸಲ ಕಾಣಿಸಿ ಕೊಳ್ಳುತ್ತಿದ್ದರು. ಆದರೆ ಭಾರತಕ್ಕೆ ಈ ಭಾಗ್ಯ ಇಲ್ಲದೇ ಹೋಯಿತು. ಉಳಿದ ಅಜೇಯ ತಂಡಗಳ ಕಿರು ನೋಟವೊಂದು ಇಲ್ಲಿದೆ.

ವೆಸ್ಟ್‌ ಇಂಡೀಸ್‌ ಅಜೇಯ ಓಟ
ವೆಸ್ಟ್‌ ಇಂಡೀಸ್‌ ಮೊದಲೆರಡು ವಿಶ್ವಕಪ್‌ ಎತ್ತಿ ಹಿಡಿದಾಗ ಯಾವ ಪಂದ್ಯವನ್ನೂ ಸೋತಿರಲಿಲ್ಲ. ಕ್ಲೈವ್‌ ಲಾಯ್ಡ ಪಡೆಯದ್ದು ಅಜೇಯ ಅಭಿಯಾನವಾಗಿತ್ತು. ಲೀಗ್‌ ಹಂತದಲ್ಲಿ ಒಟ್ಟು 6, ಬಳಿಕ ಸೆಮಿಫೈನಲ್‌ ಹಾಗೂ ಫೈನಲ್‌… ಹೀಗೆ ಸತತ 8 ಪಂದ್ಯಗಳನ್ನು ಗೆದ್ದು ವಿಂಡೀಸ್‌ ಚಾಂಪಿಯನ್‌ ಆಗಿ ಮೆರೆದಿತ್ತು.

ಲಂಕಾ ಅಸಾಮಾನ್ಯ ಸಾಧನೆ
1975 ಮತ್ತು 1979ರಲ್ಲಿ ವೆಸ್ಟ್‌ ಇಂಡೀಸ್‌ನ ಅಜೇಯ ಅಭಿಯಾನದ ಬಳಿಕ ಶ್ರೀಲಂಕಾದ ಸರದಿ. ಅರ್ಜುನ ರಣತುಂಗ ಸಾರಥ್ಯದ ಲಂಕಾ ಪಡೆ 1996ರಲ್ಲಿ ಚಾಂಪಿಯನ್‌ ಆಗಿ ಮೂಡಿಬರುವ ಹಾದಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ. ಲೀಗ್‌ ಹಂತದ ಎಲ್ಲ 5 ಪಂದ್ಯಗಳಲ್ಲೂ ಲಂಕಾ ಅಜೇಯವಾಗಿತ್ತು. ಇಲ್ಲಿ ಆಸ್ಟ್ರೇಲಿಯ ಮತ್ತು ವೆಸ್ಟ್‌ ಇಂಡೀಸ್‌ ಲಂಕೆಗೆ ಹೋಗದೆ ಪಂದ್ಯವನ್ನು ಬಿಟ್ಟು ಕೊಟ್ಟಿದ್ದನ್ನು ಉಲ್ಲೇಖಿಸಬೇಕು.

ಬಳಿಕ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ ಮತ್ತು ಫೈನಲ್‌ನಲ್ಲೂ ಲಂಕೆಗೆ ಲಗಾಮು ತೊಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅದು ಸತತ 8 ಪಂದ್ಯ ಗೆದ್ದು ವಿಶ್ವ ಚಾಂಪಿಯನ್‌ ಎನಿಸಿತು.

ಆಸ್ಟ್ರೇಲಿಯ ಸತತ 11 ಗೆಲುವು‌
ಆಸ್ಟ್ರೇಲಿಯದ್ದು ಇವೆಲ್ಲಕ್ಕಿಂತ ಮಿಗಿಲಾದ ಸಾಧನೆ. ಅದು 2003 ಮತ್ತು 2007ರಲ್ಲಿ, ಸತತ 11 ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿ ಟ್ರೋಫಿ ಎತ್ತಿ¤ತ್ತು. ಇದು ಇಂದಿಗೂ ದಾಖಲೆಯಾಗಿ ಉಳಿದಿದೆ. ಈ ಎರಡೂ ಸಂದರ್ಭಗಳಲ್ಲಿ ರಿಕಿ ಪಾಂಟಿಂಗ್‌ ಆಸೀಸ್‌ ನಾಯಕರಾಗಿದ್ದರು.
2003ರ ಗ್ರೂಪ್‌ ಹಂತದ ಎಲ್ಲ 6 ಪಂದ್ಯಗಳನ್ನೂ ಪಾಂಟಿಂಗ್‌ ಪಡೆ ಜಯಿಸಿತ್ತು. ಬಳಿಕ ಸೂಪರ್‌ ಸಿಕ್ಸ್‌ ಹಂತದ ಮೂರರಲ್ಲೂ ಎದುರಾಳಿಗೆ ಸೋಲಿನ ರುಚಿ ತೋರಿಸಿತು. ಅನಂತರ ಸೆಮಿಫೈನಲ್‌ ಮತ್ತು ಫೈನಲ್‌ ಜಯಭೇರಿ.

2007ರಲ್ಲಿ ಮತ್ತೆ ಪಾಂಟಿಂಗ್‌ ಪಡೆ ಯದ್ದು ಸೋಲರಿಯದ ಸಾಧನೆ. ಗ್ರೂಪ್‌ ಹಂತದಲ್ಲಿ ಮೂರಕ್ಕೆ ಮೂರು, ಸೂಪರ್‌-8 ಹಂತದಲ್ಲಿ ಎಲ್ಲ 6, ಸೆಮಿಫೈನಲ್‌ ಮತ್ತು ಫೈನಲ್‌ ವಿಜಯೋತ್ಸವ.

ಪಾಂಟಿಂಗ್‌ ಅಸಾಮಾನ್ಯ ಸಾಧನೆ
ನಾಯಕನಾಗಿ ರಿಕಿ ಪಾಂಟಿಂಗ್‌ ಅವರದು ಅಸಾಮಾನ್ಯ ಸಾಧನೆ. ತನ್ನ ನಾಯಕತ್ವದ ಮೊದಲೆರಡು ವಿಶ್ವಕಪ್‌ ಕೂಟದಲ್ಲಿ ಸೋಲನ್ನೇ ಕಾಣದೆ, ಸರ್ವಾಧಿಕ 22 ಪಂದ್ಯಗಳನ್ನು ಗೆದ್ದು, ಸತತ 2 ಸಲ ತಂಡವನ್ನು ಚಾಂಪಿ ಯನ್‌ ಪಟ್ಟಕ್ಕೆ ಏರಿಸಿದ ಏಕೈಕ ನಾಯಕನೆಂಬ ಹಿರಿಮೆಗೆ ಭಾಜನ ರಾಗಿದ್ದಾರೆ. 2011ರಲ್ಲಿ ಪಾಂಟಿಂಗ್‌ ವಿಫ‌ಲರಾಗಿರಬಹುದು, ಆದರೆ ಇವರ 22 ಪಂದ್ಯಗಳ ಅಜೇಯ ಗೆಲುವಿನ ದಾಖಲೆಯನ್ನು ಮುರಿಯುವುದು ಸುಲಭವಲ್ಲ.

ಟಾಪ್ ನ್ಯೂಸ್

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.