Punjalkatte ಮೊಡಂಕಾಪು: ವಿವಾಹಿತ ಮಹಿಳೆ ಸಂಶಯಾಸ್ಪದ ಸಾವು
Team Udayavani, Nov 23, 2023, 12:22 AM IST
ಪುಂಜಾಲಕಟ್ಟೆ: ಅನಾರೋಗ್ಯದಿಂದ ಮಹಿಳೆಯೋರ್ವರು ಮೃತಪಟ್ಟಿದ್ದು, ಇದು ಸಂಶಯಾಸ್ಪದ ಸಾವು ಎಂದು ಮಹಿಳೆಯ ಸಹೋದರ ಪದ್ಮನಾಭ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಬುಧವಾರ ಸಂಭವಿಸಿದೆ.
ಬಂಟ್ವಾಳ ಮೂಡ ಗ್ರಾಮದ ಮೊಡಂಕಾಪು ರಾಜುಪಲ್ಕೆ ನಿವಾಸಿ ಯೋಗೀಶ್ ಅವರ ಪತ್ನಿ ಬೇಬಿ ಮೃತಪಟ್ಟವರು.
ಬೇಬಿ ಅವರಿಗೆ ಮೊಡಂಕಾಪು ನಿವಾಸಿ ಮೇಸ್ತ್ರಿ ವೃತ್ತಿಯ ಯೋಗೀಶ್ ಅವರೊಂದಿಗೆ ನಾಲ್ಕು ವರ್ಷಗಳ ಹಿಂದೆ ವಿವಾಹ ನಡೆದಿತ್ತು. ಪತಿ, ಪತ್ನಿಗೆ ಆಗಾಗ ಮನಸ್ತಾಪವಾಗುತ್ತಿದ್ದು, ಕೌಟುಂಬಿಕ ಮಾತುಕತೆ ಬಳಿಕ ರಾಜಿಯಾಗುತ್ತಿತ್ತು. ಆದರೆ ಮಂಗಳವಾರ ಬೇಬಿ ತನ್ನ ಅಕ್ಕನಲ್ಲಿ ದೂರವಾಣಿ ಮೂಲಕ ಮಾತನಾಡಿ ಗಂಡನ ಮನೆಯವರಿಂದ ಕಿರುಕುಳ ಹೆಚ್ಚಾಗುತ್ತಿದ್ದು, ತಾಯಿ ಮನೆಗೆ ಬರುವುದಾಗಿ ತಿಳಿಸಿದ್ದರು.
ಆದರೆ ಬುಧವಾರ ಮುಂಜಾನೆ ಯೋಗೀಶ್ ಕರೆ ಮಾಡಿ ಬೇಬಿ ಅಸ್ತಮಾದಿಂದ ಗಂಭೀರ ಸ್ಥಿತಿಗೆ ತಲುಪಿ ಆಸ್ಪತ್ರೆಗೆ ದಾಖಲು ಪಡಿಸಿದ್ದಾಗಿಯೂ, ಬಳಿಕ ಆಕೆ ಮೃತ ಪಟ್ಟಿರುವುದಾಗಿಯೂ ತಿಳಿಸಿದ್ದರು. ಬೇಬಿ ಅವರು ಆಸ್ಪತ್ರೆಗೆ ಬರುವಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಈ ಸಾವಿನ ಬಗ್ಗೆ ಸಂಶಯವಿದೆ. ಹಾಗಾಗಿ ಸೂಕ್ತವಾದ ತನಿಖೆ ನಡೆಸಬೇಕು ಎಂದು ಪದ್ಮನಾಭ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದೇರಳಕಟ್ಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಸಹಜ ಮರಣವೆಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.