Stock Market: ಹೂಡಿಕೆ ಹೆಸರಿನಲ್ಲಿ 21.50 ಲ.ರೂ. ವಂಚನೆ
Team Udayavani, Nov 24, 2023, 12:55 AM IST
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದ್ವಿಗುಣಗೊಳಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 21.50 ಲಕ್ಷ ರೂ. ಪಡೆದು ವಂಚಿಸಲಾಗಿದೆ.
ತಮಿಳುನಾಡಿನ ಕಣ್ಣನ್ (45) ಹಣ ಕಳೆದುಕೊಂಡವರು. ಅ. 3ರಂದು ಅವರ ಫೇಸ್ಬುಕ್ ಖಾತೆಗೆ ಬಂದ ಲಿಂಕ್ ತೆರೆದಾಗ ಅದರಲ್ಲಿದ್ದ ಮಾಹಿತಿಯನ್ನು ನಂಬಿ ಟ್ರೇಡಿಂಗ್ ಖಾತೆ ತೆರೆದಿದ್ದರು. ಅವರ ಖಾತೆಯಿಂದ ಮೂರು ಬಾರಿ ಹಣ ವರ್ಗಾಯಿಸಿಕೊಳ್ಳಲಾಗಿದೆ. ಆದರೆ ಯಾವುದೇ ಮೊತ್ತ ವಾಪಸ್ ನೀಡಿಲ್ಲ. ಕಣ್ಣನ್ ಅವರು ಮಂಗಳೂರು ನಗರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.