Doctor: ವೈದ್ಯರಾಗ ಬಯಸುವವರಿಗೆ NMC ಸಂತಸದ ಸುದ್ದಿ
Team Udayavani, Nov 24, 2023, 1:25 AM IST
ಹೊಸದಿಲ್ಲಿ: ಪದವಿಪೂರ್ವ ಹಂತ ದಲ್ಲಿ ಜೀವಶಾಸ್ತ್ರವನ್ನು “ರೆಗ್ಯುಲರ್’ ತರಗತಿ ಯಲ್ಲಿ ಕಲಿಯದ ವಿಜ್ಞಾನ ವಿದ್ಯಾರ್ಥಿಗಳಿಗೂ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಸೇರ್ಪಡೆ
ಯಾಗುವ ಅವಕಾಶ ಒದಗಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಿರ್ಧ ರಿಸಿದೆ. ಈ ಸಂಬಂಧ ಅದು ವೈದ್ಯಕೀಯ ಪ್ರವೇಶ ನಿಯಮಗಳಲ್ಲಿ ಮಾರ್ಪಾಟು ಮಾಡಿದೆ.
ಇದುವರೆಗೆ ಪಿಯುಸಿಯಲ್ಲಿ ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಜೀವಶಾಸ್ತ್ರ /ಬಯೋಟೆಕ್ನಾಲಜಿ ಮತ್ತು ಇಂಗ್ಲಿಷ್‌ಗಳನ್ನು ನೇರವಾಗಿ ತರಗತಿಗಳಿಗೆ ಹೋಗಿ ಅಭ್ಯಸಿಸಿ ದ್ದರೆ ಮಾತ್ರ ಎಂಬಿಬಿಎಸ್, ಬಿಡಿಎಸ್‌ಗೆ ಪ್ರವೇಶ ಪಡೆಯಬಹುದಾಗಿತ್ತು. ಇನ್ನು ಮುಂದೆ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾ ಯನ ಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ಕಲಿತು, ಅನಂತರ ಮಾನ್ಯತೆ ಪಡೆದ ಯಾವುದೇ ಪರೀಕ್ಷಾ ಮಂಡಳಿಯಡಿ ಜೀವಶಾಸ್ತ್ರ /ಬಯೋ ಟೆಕ್ನಾಲಜಿಗಳನ್ನು ಮುಕ್ತ ಮಾದರಿಯಲ್ಲಿ ಅಥವಾ ಅಂಚೆ ಶಿಕ್ಷಣದ ಮೂಲಕ ಹೆಚ್ಚುವರಿಯಾಗಿ ಅಭ್ಯಸಿಸಿದ ವಿದ್ಯಾರ್ಥಿಗಳು ಕೂಡ ವೈದ್ಯಕೀಯ ಪದವಿಗೆ ಪ್ರವೇಶ ಪಡೆಯಬಹುದು. ಜತೆಗೆ ಇಂತಹ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲೂ ವೈದ್ಯಕೀಯ ತರಗತಿಗಳಿಗೆ ಸೇರಿಕೊಳ್ಳಲು ಎನ್‌ಎಂಸಿಯ ಅರ್ಹತ ಪ್ರಮಾಣಪತ್ರ ಸಿಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.