Mysore: ಸರಕಾರ ಯಾರನ್ನು ರಕ್ಷಣೆ ಮಾಡುವ ಪ್ರಶ್ನೇಯೇ ಇಲ್ಲ… : ಸಚಿವ ಮಹದೇವಪ್ಪ
Team Udayavani, Nov 24, 2023, 12:18 PM IST
ಮೈಸೂರು: ಸರಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ ಆ ರೀತಿಯ ಪ್ರಶ್ನೆಯೇ ಇಲ್ಲ ಎಂದು ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಪ್ರಕರಣವನ್ನ ಸಿಬಿಐನಿಂದ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಚಿವರು ಇದೊಂದು ರಾಜಕೀಯ ಸೇಡಿನಿಂದ ಮಾಡಿದ ಪ್ರಕರಣವಾಗಿದೆ ಹಾಗಾಗಿ ಪ್ರಕರಣ ಹಿಂಪಡೆಯಲಾಗಿದೆ ಎಂದು ಹೇಳಿದರು.
ಎಲ್ಲರ ಒಮ್ಮತದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಕಾನೂನಾತ್ಮಕವಾದ ವಿಚಾರ. ಅಂದಿನ ಸಿಎಂ ಓರಲ್ ಇನ್ ಸ್ಟ್ರಕ್ಷನ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿದ್ದಾರೆ. ಅಂದಿನ ಅಡ್ವಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯುವುದಕ್ಕೂ ಮುನ್ನ ಸರ್ಕಾರ ಪ್ರಕರಣವನ್ನ ಸಿಬಿಐಗೆ ವಹಿಸಿದೆ. ಅಂದಿನ ಸಂದರ್ಭದಲ್ಲಿ ಡಿ.ಕೆ.ಶಿ ಶಾಸಕರಾಗಿದ್ರು. ಶಾಸಕರ ಮೇಲೆ ತನಿಖೆ ನಡೆಯಬೇಕಾದ್ರೆ ಸ್ಪೀಕರ್ ಅನುಮತಿ ಪಡೆಯಬೇಕು. ಅಡ್ವಕೇಟ್ ಜನರಲ್ ವರದಿ ಕೈ ಸೇರುವ ಮುನ್ನ ಮುಖ್ಯಕಾರ್ಯದರ್ಶಿ ತನಿಖೆಗೆ ಅನುಮತಿ ನೀಡಿದ್ದಾರೆ. ಈಗಿನ ಅಡ್ವಕೇಟ್ ಜನರಲ್ ಅಭಿಪ್ರಾಯ ಪಡೆದು ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಎಲ್ಲವನ್ನೂ ಲೀಗಲ್ ವ್ಯಾಪ್ತಿಯಲ್ಲಿ ನೋಡಿಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ ಅದು ರಾಜಕೀಯವಾದಂತಹ ಮತ್ತು ಕಾನೂನಿನ ಯಾವ ಅಂಶಗಳನ್ನ ಗಮನದಲ್ಲಿ ಇಲ್ಲದೆಯೇ ಮಾಡಿರುವಂತಹ ನಿರ್ಧಾರ ಎಂದು ಹೇಳಿದರು.
ವಿರೋಧ ಪಕ್ಷಗಳು ಇರುವುದೇ ಟೀಕೆ ಮಾಡಲು. ಕಾನೂನುಬಾಹಿರವಾಗಿ ಮಾಡಿರುವ ನಿರ್ಧಾರವನ್ನ ನಾವು ವಿತ್ ಡ್ರಾ ಮಾಡಿದ್ದೇವೆ. ಇಲ್ಲಿ ಸರ್ಕಾರ ಯಾರನ್ನು ರಕ್ಷಣೆ ಮಾಡುವ ಪ್ರಶ್ನೇಯೇ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: Embassy: ದೆಹಲಿಯಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚಿದ ಅಫ್ಘಾನಿಸ್ತಾನ… ಇಲ್ಲಿದೆ ಕಾರಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.