Daily Horoscope: ಅವಿವಾಹಿತರಿಗೆ ಯೋಗ್ಯ ವಿವಾಹ ಯೋಗ, ಮಿಶ್ರಫ‌ಲಗಳ ದಿನ


Team Udayavani, Nov 25, 2023, 7:14 AM IST

1-Saturday

ಮೇಷ: ಮಿಶ್ರಫ‌ಲಗಳ ದಿನ. ಉದ್ಯೋಗಕ್ಕೆ ಅರ್ಧವಿರಾಮವಾಗಿದ್ದರೂ ಜವಾಬ್ದಾರಿಯಿಂದ ಮುಕ್ತಿ ಇಲ್ಲ. ಸಾಂಸಾರಿಕ ಜೀವನ ತೃಪ್ತಿಕರ. ಪಾಲುದಾರಿಕೆಯ ಉದ್ಯಮದ ವ್ಯವಹಾರ ನಿರಾತಂಕ. ಪಶ್ಚಿಮ ದೇಶದಲ್ಲಿರುವ ಬಂಧುವಿನೊಡನೆ ದೂರವಾಣಿ ಸಂಭಾಷಣೆ. ಹಿರಿಯ ರಾಜಕಾರಣಿಯ ಅಕಸ್ಮಾತ್‌ ಭೇಟಿ.

ವೃಷಭ: ಕೆಲವು ಒಳ್ಳೆಯ ಘಟನೆಗಳು ನಡೆಯುವ ದಿನ.ಉದ್ಯೋಗದಲ್ಲಿ ಪದೋನ್ನತಿಯ ಸೂಚನೆ ಮುಂಚಿತವಾಗಿ ಲಭ್ಯ. ಉದ್ಯಮಕ್ಕೆ ಹೊಸ ಯಂತ್ರಸಾಮಗ್ರಿ ಖರೀದಿ. ನೌಕರರಿಗೆ ಹೊಸ ವಸತಿ ವ್ಯವಸ್ಥೆ. ವಿದೇಶದಲ್ಲಿರುವ ಮಕ್ಕಳೊಡನೆ ಸಂಭಾಷಣೆ. ವೈದ್ಯಕೀಯ ಪರೀಕ್ಷೆಯಿಂದ ಸಮಾಧಾನ.

ಮಿಥುನ: ದೇವರ ಮೇಲಿನ ಅಚಲ ವಿಶ್ವಾಸದಿಂದ ಜಟಿಲ ಸಮಸ್ಯೆಗಳಿಗೆ ಸರಳ ಪರಿಹಾರ. ಉದ್ಯೋಗ ಸ್ಥಾನದಲ್ಲಿ ಸಹಚರರಿಂದ ಪ್ರೋತ್ಸಾಹದ ಮಾತುಗಳು. ಲೇವಾದೇವಿ ವ್ಯವಹಾರದಿಂದ ಪ್ರತಿಕೂಲ ಪರಿಣಾಮ. ಸರಕಾರಿ ಕಚೇರಿಗಳಲ್ಲಿ ಮಂದಗತಿ. ಗುರುಸಮಾನರ ದರ್ಶನದಿಂದ ಮನಶಾಂತಿ.

ಕರ್ಕಾಟಕ: ಸ್ಪಂದನಶೀಲ ವ್ಯಕ್ತಿತ್ವದೊಡನೆ ವ್ಯವಹಾರ ಸುಲಭ ಸಮಾಜದಲ್ಲಿ ಎಲ್ಲರೊಡನೆ ಬೆರೆತುದಕ್ಕೆ ಪ್ರತಿಫ‌ಲ ಪ್ರಾಪ್ತಿ. ಕಟ್ಟಡ ನಿರ್ಮಾಣ ಕಾಮಗಾರಿಗೆ ತಡೆ ನಿವಾರಣೆ. ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿ ಹೂಡಿಕೆಯ ಚಿಂತನೆ. ಲೇವಾದೇವಿ ವ್ಯವಹಾರ ಕೈಹಿಡಿಯದು. ದೇವಸನ್ನಿಧಿಗೆ ಭೇಟಿ.

ಸಿಂಹ: ಹವಾಮಾನದ ಸಣ್ಣ ಏರುಪೇರು ಕೂಡಾ ಮನಸ್ಸು, ದೇಹಗಳ ಮೇಲೆ ಪರಿಣಾಮ ಬೀರುವುದು ಸಹಜ. ಉದ್ಯೋಗದಲ್ಲಿ ಸ್ವಲ್ಪ ಮಂದ ನಡೆಯಾದರೂ ಫ‌ಲ ಕಡಿಮೆಯಾಗದು. ಉದ್ಯಮದಲ್ಲಿ ಮುನ್ನಡೆ. ಲೇವಾದೇವಿ ವ್ಯವಹಾರದಲ್ಲಿ ಸಾಧಾರಣ ಲಾಭ. ಅವಿವಾಹಿತರಿಗೆ ಯೋಗ್ಯ ವಿವಾಹ ಯೋಗ.

ಕನ್ಯಾ: ಜೀವನದ ಮುಖ್ಯ ಘಟ್ಟವೊಂದನ್ನು ದಾಟುತ್ತಿದ್ದೀರಿ. ಉದ್ಯೋಗ ಬದಲಾವಣೆಗೆ ಸಿದ್ಧತೆ.ಅಪರಿಚಿತರೊಂದಿಗೆ ವಾಗ್ವಾದ ಬೇಡ. ಪಶುಪಾಲನೆ, ಹೈನುಗಾರಿಕೆಯಲ್ಲಿ ಆಸಕ್ತಿ. ಕುಟುಂಬದ ಹಿರಿಯ ವ್ಯಕ್ತಿಯಿಂದ ಅನಿರೀಕ್ಷಿತ ಸಹಾಯ. ದಂಪತಿಗಳ ನಡುವೆ ಸಾಮರಸ್ಯ.

ತುಲಾ: ಹಿರಿಯರ ಕಡೆಯಿಂದ ಶುಭ ಸಮಾಚಾರದ ನಿರೀಕ್ಷೆ.ಹೊಸ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಜವಾಬ್ದಾರಿ. ಕುಟುಂಬದಲ್ಲಿ ಶಿಶು ಜನನ. ಗೃಹೋದ್ಯಮದ ಕ್ಷೇತ್ರಕ್ಕೆ ಪದಾರ್ಪಣೆಗೈಯುವ ನಿರ್ಧಾರ. ರೋಗಿಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ. ವಿನಾಯಕನ ಕ್ಷೇತ್ರ ಸಂದರ್ಶನ.

ವೃಶ್ಚಿಕ: ಬದುಕಿನಲ್ಲಿ ಭರವಸೆಯಿಂದ ಮುನ್ನಡೆ. ನೊಂದವರಿಗೆ ಸಾಂತ್ವನ ಹೇಳುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಸೋದರಿಯ ಪುತ್ರನಿಗೆ ವಿವಾಹ ನಿಶ್ಚಯ. ಪಿತ್ರಾರ್ಜಿತ ಕೃಷಿಭೂಮಿಯಿಂದ ಲಾಭ. ಮನೆಯಲ್ಲಿ ದೇವತಾ ಕಾರ್ಯ. ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯ ಭಾಗ್ಯ.

ಧನು: ಕೈಚೆಲ್ಲಿ ಕುಳಿತುಕೊಳ್ಳದೆ ಮುಂದುವರಿದ ಕಾರಣ ಜೀವನಕ್ಕೊಂದು ಮಾರ್ಗ ಗೋಚರ. ಉದ್ಯೋಗದಲ್ಲಿ ಯಥಾರೀತಿ ಭದ್ರ ಸ್ಥಾನ. ಉದ್ಯಮ ಸಣ್ಣದಾದರೂ ಜನಪ್ರಿಯತೆ ದೊಡ್ಡದು.ಆಪ್ತರೊಬ್ಬರ ಒಡೆದ ಸಂಸಾರವನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ಯಶಸ್ಸು. ಮನೆಯಲ್ಲಿ ಇಷ್ಟದೇವರ ವಿಶೇಷ ಪೂಜೆ.

ಮಕರ: ಸಮಸ್ಯೆ ಪರಿಹಾರವಾದಂತೆ ಕಂಡರೂ ಸಂಶಯ ನಾಶವಾಗದೆ ಸಮಾಧಾನ ಇರದು. ಉದ್ಯೋಗದಲ್ಲಿ ಒತ್ತಡ ಕೊಂಚ ಸಡಿಲಿಕೆ. ಹೊಸ ಉದ್ಯೋಗ ಅರಸುವ ಕಾರ್ಯ ಮುಂದುವರಿಕೆ. ಅಂಚೆ ಮೂಲಕ ಶಿಕ್ಷಣ ಮುಂದುವರಿಸಲು ನಿರ್ಧಾರ. ಸಂಸಾರ ನಿರ್ವಹಣೆಗೆ ಹಿರಿಯರ ಸಹಾಯ.

ಕುಂಭ: ಹೊಸದಾಗಿ ಪರಿಚಯವಾದ ವ್ಯಕ್ತಿಯಿಂದ ಹೊಸ ಉದ್ಯಮ ಆರಂಭಿಸುವ ಪ್ರಸ್ತಾವ. ಉದ್ಯೋಗ ಸ್ಥಾನದಲ್ಲಿ ಹೊಸ ಮೇಲಧಿಕಾರಿಯ ಆಗಮನ. ಉದ್ಯಮದಲ್ಲಿ ಹೊಸ ಉತ್ಪನ್ನಗಳ ಪ್ರಚಾರಕ್ಕೆ ಕ್ರಮ. ಬರಬೇಕಾದ ದೊಡ್ಡಮೊತ್ತದ ಬಾಕಿ ವಸೂಲಿಯ ಚಿಂತೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ.

ಮೀನ: ಸಪ್ತಾಹದ ಕೊನೆಯಲ್ಲಿ ಬಾಕಿ ಉಳಿದಿರುವ ಕಾರ್ಯಗಳನ್ನು ಮುಗಿಸುವ ತರಾತುರಿ. ವೃತ್ತಿಬಾಂಧವರ ಸಹಕಾರ. ಸರಕಾರಿ ಇಲಾಖೆಯವರಿಂದ ಅನು ಕೂಲಕರ ಸ್ಪಂದನ. ಸಮಾಜದ ಹಿರಿಯರ ಸಮ್ಮಾನ ಕಾರ್ಯಕ್ರಮದಲ್ಲಿ ಅಗ್ರಸ್ಥಾನ. ಕೃಷಿ ಭೂಮಿಯಲ್ಲಿ ಹೊಸ ಪ್ರಯೋಗಕ್ಕೆ ಪೂರ್ವಸಿದ್ಧತೆ. ನೀರಾವರಿಗೆ ಸ್ವಂತ ವ್ಯವಸ್ಥೆ ಮಾಡುವ ನಿರ್ಧಾರ. ಹತ್ತಿರದ ದೇವಾಲಯಕ್ಕೆ ಭೇಟಿ.

ಟಾಪ್ ನ್ಯೂಸ್

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dina Bhavishya

Horoscope; ಕಳೆದುಹೋದ ಅವಕಾಶ ಮರಳಿ ಬರುವ ಸಾಧ್ಯತೆ,ವ್ಯವಸ್ಥೆ ಪರಿಷ್ಕರಣೆ

Horscope: ಮನೆಯಲ್ಲಿ ಆನಂದದ ವಾತಾವರಣ ಇರಲಿದೆ

Horscope: ಮನೆಯಲ್ಲಿ ಆನಂದದ ವಾತಾವರಣ ಇರಲಿದೆ

016

Horoscope: ಆಲಸ್ಯ ಬಿಟ್ಟು ದುಡಿಯುವುದನ್ನು ಕಲಿಯಿರಿ

1-Horoscope

Daily Horoscope: ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.