Vijay Hazare Trophy: ಪಡಿಕ್ಕಲ್ ಶತಕ; ಕರ್ನಾಟಕ ವಿಜಯ
ಉತ್ತರಾಖಂಡ ವಿರುದ್ಧ 52 ರನ್ ಗೆಲುವು
Team Udayavani, Nov 25, 2023, 11:52 PM IST
ಅಹ್ಮದಾಬಾದ್: ದೇವದತ್ತ ಪಡಿಕ್ಕಲ್ ಅವರ ಶತಕ ಪರಾಕ್ರಮ ಹಾಗೂ ವಾಸುಕಿ ಕೌಶಿಕ್ ಅವರ ಘಾತಕ ಬೌಲಿಂಗ್ ನೆರವಿನಿಂದ “ವಿಜಯ್ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಶನಿವಾರ ಇಲ್ಲಿನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ರಾಜ್ಯ ತಂಡ ಉತ್ತರಾಖಂಡವನ್ನು 52 ರನ್ನುಗಳಿಂದ ಮಣಿಸಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ 7 ವಿಕೆಟಿಗೆ 284 ರನ್ ಪೇರಿಸಿದರೆ, ಇದಕ್ಕೆ ದಿಟ್ಟ ಉತ್ತರ ನೀಡುವಲ್ಲಿ ವಿಫಲವಾದ ಉತ್ತರಾಖಂಡ 9 ವಿಕೆಟ್ ನಷ್ಟಕ್ಕೆ 232 ರನ್ ಬಾರಿಸಿ ಶರಣಾಯಿತು.
“ಸಿ’ ವಿಭಾಗದ ಮೊದಲ ಪಂದ್ಯದಲ್ಲಿ ಕರ್ನಾಟಕ 222 ರನ್ನುಗಳ ಬೃಹತ್ ಅಂತರದಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿತ್ತು. ಇನ್ನೊಂದೆಡೆ ಉತ್ತರಾಖಂಡ ಮೊದಲ ಲೀಗ್ ಪಂದ್ಯದಲ್ಲಿ ಹರ್ಯಾಣಕ್ಕೆ 6 ವಿಕೆಟ್‌ಗಳಿಂದ ಶರಣಾಗಿತ್ತು.
ಪಡಿಕ್ಕಲ್ ಶತಕ ಪರಾಕ್ರಮ
ವನ್‌ಡೌನ್ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರ 117 ರನ್ ಸಾಹಸ ಕರ್ನಾಟಕ ಸರದಿಯ ಆಕರ್ಷಣೆ ಆಗಿತ್ತು. ನಿಕಿನ್ ಜೋಸ್ (72) ಮತ್ತು ಮನೀಷ್ ಪಾಂಡೆ (56) ಅರ್ಧ ಶತಕದ ಕೊಡುಗೆ ಸಲ್ಲಿಸಿದರು.
ಜಮ್ಮು ಮತ್ತು ಕಾಶ್ಮೀರ ವಿರುದ್ಧ ಅಮೋಘ ಶತಕ ಬಾರಿಸಿ ಮೊದಲ ವಿಕೆಟಿಗೆ 267 ರನ್ ಪೇರಿಸಿದ್ದ ಆರ್. ಸಮರ್ಥ್ (11) ಮತ್ತು ನಾಯಕ ಮಾಯಾಂಕ್ ಅಗರ್ವಾಲ್ (0) ಇಲ್ಲಿ ವಿಫಲರಾದರು. ಹೀಗಾಗಿ ಪಡಿ ಕ್ಕಲ್ ಮೊದಲ ಓವರ್‌ನಲ್ಲೇ ಕ್ರೀಸ್ ಇಳಿಯಬೇಕಾಯಿತು. 38ನೇ ಓವರ್ ತನಕ ಬ್ಯಾಟಿಂಗ್ ವಿಸ್ತರಿಸಿದ ಅವರು 122 ಎಸೆತಗಳಿಂದ 117 ರನ್ ಬಾರಿಸಿ ದರು. ಈ ಪ್ರಚಂಡ ಬ್ಯಾಟಿಂಗ್ ವೇಳೆ 13 ಬೌಂಡರಿ, 5 ಸಿಕ್ಸರ್ ಸಿಡಿದವು.
ನಿಕಿನ್ ಜೋಸ್ ಅವರ 72 ರನ್ 82 ಎಸೆತಗಳಿಂದ ಬಂತು. ಸಿಡಿಸಿದ್ದು 3 ಫೋರ್, 3 ಸಿಕ್ಸರ್. ಪಡಿಕ್ಕಲ್-ಜೋಸ್ ಜತೆಯಾಟದಲ್ಲಿ 131 ರನ್ ಒಟ್ಟು ಗೂಡಿತು. ಮನೀಷ್ ಪಾಂಡೆ ಕೂಡ ಆಕ್ರಮಣಕಾರಿ ಆಟವಾಡಿದರು. 40 ಎಸೆತಗಳಿಂದ 56 ರನ್ ಬಂತು. 4 ಬೌಂಡರಿ, 3 ಸಿಕ್ಸರ್ ಬಾರಿಸಿ ಅಪಾಯ ಕಾರಿಯಾಗಿ ಗೋಚರಿಸಿದರು.
ಚೇಸಿಂಗ್ ವೇಳೆ ಉತ್ತರಾಖಂಡಕ್ಕೆ ದೊಡ್ಡ ಮಟ್ಟದ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಆದರೆ 8ನೇ ಕ್ರಮಾಂಕದಲ್ಲಿ ಆಡಲು ಬಂದ ಕುಣಾಲ್ ಚಂದೇಲಾ ಪ್ರಚಂಡ ಆಟವಾಡಿ 98 ರನ್ ಬಾರಿಸುವಲ್ಲಿ ಯಶಸ್ವಿಯಾದರು. ಕರ್ನಾಟಕದ ಮುಂದಿನ ಎದುರಾಳಿ ದಿಲ್ಲಿ. ಈ ಪಂದ್ಯ ಸೋಮವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.