Bangalore kambala: ಹೊನಲು ಬೆಳಕಿನ ಕಂಬಳ ವೀಕ್ಷಿಸಿ ಪುಳಕಕೊಂಡ ಜನ


Team Udayavani, Nov 26, 2023, 9:14 AM IST

Bangalore kambala: ಹೊನಲು ಬೆಳಕಿನ ಕಂಬಳ ವೀಕ್ಷಿಸಿ ಪುಳಕಕೊಂಡ ಜನ

ಬೆಂಗಳೂರು: ಎಲ್ಲಿ ನೋಡಿದರೂ ಬಣ್ಣ-ಬಣ್ಣದ ಜಗಮಗಿಸುವ ವಿದ್ಯುತ್‌ ದೀಪಗಳು, ಪೆಡ್‌ಲೈಟ್‌ ಗಳಿಂದ ಅಲಂಕೃತಗೊಂಡ ಕರೆಗಳು, ಕರೆಗಳ ಸುತ್ತಲೂ ಹಳದಿ ಲುಂಗಿ ತೊಟ್ಟು ಕೋಣಗಳ ಜತೆಗೆ ಕೈಯಲ್ಲಿ ಬೆತ್ತ ಹಿಡಿದುಕೊಂಡು ತಿರುಗಾಡುತ್ತಿರುವ ಸಿಬ್ಬಂದಿ, ಕೋಣಗಳ ಓಟದ ಆರ್ಭಟಕ್ಕೆ ನೀರುಗಳು ಚಿಮ್ಮುವ ದೃಶ್ಯ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರ ನೂಕು ನುಗ್ಗಲು…

ಇದು ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಸಮಿತಿ ಆಯೋಜಿಸಿರುವ ನಮ್ಮ ಬೆಂಗಳೂರು ಕಂಬಳದಲ್ಲಿ ಕಂಡು ಬಂದ ದೃಶ್ಯಾವಳಿ. ಹೊನಲು ಬೆಳಕಿನಲ್ಲಿ ಸಂಪನ್ನಗೊಂಡ ಪ್ರಥಮ ಕಂಬಳ ಎಂಬ ಇತಿಹಾಸಕ್ಕೆ ಶನಿವಾರ ನಮ್ಮ ಬೆಂಗ ಳೂರು ಕಂಬಳ ಸೇರ್ಪಡೆಗೊಂಡಿದೆ. 70 ಎಕರೆ ವಿಶಾಲವಾದ ಜಾಗವು ಹೂವು, ವಿದ್ಯುತ್‌ ದೀಪ ಗಳಿಂದ ಮದುವಣಗಿತ್ತಿಯಂತೆ ಅಲಂಕಾರಗೊಂಡು ನೋಡುಗರನ್ನು ಆಕರ್ಷಿಸುತ್ತಿದ್ದು, ಒಂದು ತೆರನಾದ ಸಂಭ್ರಮ ಮನೆ ಮಾಡಿತ್ತು.

ರಾತ್ರಿ ಕೋಣಗಳು ಉತ್ಸಾಹದೊಂದಿಗೆ ಕಂಬಳ ಗದ್ದೆಯಲ್ಲಿ ಓಡಾಟ ನಡೆಸುತ್ತಿದ್ದರೆ, ಕಂಬಳದ ಯುವ ಗುರಿಕಾರರ ಉತ್ಸಾಹ ಇಮ್ಮಡಿಗೊಂಡಿತು. 44ಕ್ಕೂ ಹೆಚ್ಚಿನ ಜೋಡಿಗಳು ಹೊನಲು ಬೆಳಕಿನಲ್ಲಿ ಓಡುತ್ತ ಪುಳಕ ಸೃಷ್ಟಿಸಿದವು. ಓಟಗಾರರು ಒಂದೊಂದೇ ಜೊತೆ ಕೋಣಗಳನ್ನು ಓಡಿಸುತ್ತಿದ್ದರೆ ಇತ್ತ ಜನರ ಹರ್ಷೋದ್ಗಾರ ಮುಗಿಲು ಮುಟ್ಟುವಂತಿದ್ದವು. ಪ್ರಕಾಶಮಾನವಾದ ಪೆಡ್‌ಲೈಟ್‌ಗಳ ಸುತ್ತಲೂ ಕಂಬಳ ಪ್ರಿಯರು ಕೋಣದ ಓಟ ಕಂಡು ರೋಮಾಂಚನಗೊಂಡರು.

ಕಾವಿ ಬಟ್ಟೆ ತೊಟ್ಟ ಓಟಗಾರರು ನಾಗರ ಬೆತ್ತದ ಕೋಲಿನಲ್ಲಿ ಕೋಣಗಳ ಬೆನ್ನಿಗೆ ಬಾರಿಸುತ್ತಾ ಇನ್ನಷ್ಟು ವೇಗವಾಗಿ ಓಡುವಂತೆ ಅವುಗಳನ್ನು ಮುನ್ನುಗ್ಗಿಸುವ ವೇಳೆ ಶಿಳ್ಳೆ, ಚಪ್ಪಾಳೆ, ಕಹಳೆ ಬಾರಿಸುವ ಮೂಲಕ ಪ್ರೇಕ್ಷಕರು ಹುರಿದುಂಬಿ ಸಿದರು. ಮತ್ತೂಂದೆಡೆ ಕಂಬಳ ತಜ್ಞರು ಕಮೆಂಟ್ರಿ ಹೇಳುವವರು ಕೋಣಗಳು ಓಡುತ್ತಿದ್ದಂತೆ ಅದರ ಮಾಲೀಕರು, ಅವರ ಮನೆತನದ ಹೆಸರು, ಕೋಣಗಳ ಹೆಸರು, ಓಟಗಾರರ ಹೆಸರನ್ನು ರಾಗವಾಗಿ ಹೇಳಿ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು. ಕೋಣಗಳು ದಡ ಸೇರುತ್ತಿದ್ದಂತೆ ಹತ್ತಾರು ಮಂದಿ ಅವುಗಳ ಮೇಲೆ ನೀರು ಚೆಲ್ಲಿ ಕರೆದುಕೊಂಡು ಹೋದರು. ಭಾನುವಾರ ಮುಂಜಾನೆವರೆಗೂ ಕೋಣಗಳು ಕರೆಯಲ್ಲಿ ಓಟ ಮುಂದುವರಿಸುತ್ತಿದ್ದರೆ, ಇದನ್ನು ವೀಕ್ಷಿಸಲು ತಂಡೋಪ ತಂಡವಾಗಿ ಲಕ್ಷಾಂತರ ಜನ ಬರುತ್ತಲೇ ಇದ್ದಾರೆ.

ರಾಜ-ಮಹಾರಾಜ ಕರೆಗಳ ಎರಡೂ ಬದಿ ಗಳಲ್ಲಿ ಕೋಣಗಳು ಓಡುತ್ತಿದ್ದಂತೆ ಕೆಸರು ನೀರು ಚಿಮ್ಮುತ್ತಿರುವ ರೋಮಾಂಚನಕಾರಿ ದೃಶ್ಯವನ್ನು ಸಾವಿ ರಾರು ಮಂದಿ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು: ಕೃಷ್ಣರಾಜ ಒಡೆಯರ್‌ ವೇದಿಕೆಯಲ್ಲಿ ರಾತ್ರಿ ನಡೆದ ಮಜಾ ಭಾರತ ತಂಡ ಹಾಗೂ ಉಮೇಶ್‌ ಮಿಜಾರು ತಂಡದಿಂದ ಕಾಮಿಡಿ ಶೋಗೆ ಜನ ಹೊಟ್ಟೆ ತುಂಬಾ ನಕ್ಕು ಸುಸ್ತಾದರು.”ಗುರುಕಿರಣ್‌ ನೈಟ್‌’ ವಿಶೇಷ ಕಾರ್ಯಕ್ರಮದಲ್ಲಿ ಗುರು ಕಿರಣ್‌ ವಿವಿಧ ಪ್ರಸಿದ್ದ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಯಕ್ಷಗಾನ ಪ್ರದರ್ಶನವು ಕರಾವಳಿಗರನ್ನು ಕೆಲ ಕಾಲ ಹಿಡಿದಿಟ್ಟುಕೊಳ್ಳುವಂತೆ ಮಾಡಿತು.

 ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

BJP 2

CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು

1-mali

Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ

Sunita williams

Sunita Williams;ಬಾಹ್ಯಾಕಾಶದಿಂದ ಕರೆ ತರುವ ಕಾರ್ಯ ಆರಂಭ

naksal (2)

Karnataka; ರಾಜ್ಯದ ಆರು ನಕ್ಸಲರಿಂದ ಶರಣಾಗತಿಗೆ ಒಲವು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ

Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

11-bng

Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ

10-bng

Bengaluru: ಇಬ್ಬರು ಡ್ರಗ್ಸ್‌ ಪೆಡ್ಲರ್ ಸೆರೆ: 51 ಕೆ.ಜಿ. ಗಾಂಜಾ ಜಪ್ತಿ

9–bng

Bengaluru: ಮೋಜಿನ ಜೀವನಕ್ಕೆ ಸರ ಕದೀತಿದ್ದ ಯುವಕನ ಸೆರೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

028

IPL players: ಐಪಿಎಲ್‌ ಆಟಗಾರರಿಗೆ ಬಂಪರ್‌ ಸಂಭಾವನೆ

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

085

Puttur: ಕಾಂಗ್ರೆಸ್‌ ಕಾರ್ಯಕರ್ತನದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.