Bangalore kambala: ಕಂಬಳದ ಕಣದಲ್ಲಿ ವಿದೇಶಿ ಪ್ರಜೆಗಳ ಓಡಾಟ
Team Udayavani, Nov 26, 2023, 9:38 AM IST
ಬೆಂಗಳೂರು: ಬೆಂಗಳೂರು ಕಂಬಳ-ನಮ್ಮ ಕಂಬಳ ಕೇವಲ ಬೆಂಗಳೂರಿಗೆ ಸೀಮಿತವಾಗದೇ, ವಿದೇಶಕ್ಕೆ ತಲುಪಿರುವುದಕ್ಕೆ ಅರಮನೆ ಮೈದಾನದಲ್ಲಿ ವಿದೇಶಿ ಪ್ರಜೆಗಳು ಕೈಯಲ್ಲಿ ಕ್ಯಾಮೆರಾ ಹಿಡಿದು ಓಡಾಟ ನಡೆಸಿರುವ ದೃಶ್ಯಗಳು ಸಾಕ್ಷಿಯಾಗಿದ್ದವು.
50ಕ್ಕೂ ಅಧಿಕ ವಿದೇಶಿಗರು: ಕಂಬಳದಲ್ಲಿ 50ಕ್ಕೂ ಅಧಿಕ ವಿದೇಶಿ ಪ್ರಜೆಗಳು ಶನಿವಾರ ಮುಂಜಾನೆ ವೇಳೆ ಕಾಣ ಸಿಕ್ಕಿದ್ದರು. ಅವರಲ್ಲಿ ಶೇ.90ರಷ್ಟು ಜನರ ಕೈಯಲ್ಲಿ ಪ್ರೋಫೇಶನಲ್ ಕ್ಯಾಮೆರಾದ ಮೂಲಕ ಫೋಟೋಗಳನ್ನು ತೆಗೆಯುತ್ತಿರುವ ದೃಶ್ಯಗಳು ಕಂಡು ಬಂತು. ಇವರಲ್ಲಿ ಅನೇಕರು ಕಳೆದ ಬಾರಿ ನಡೆದ ಕರಾವಳಿಯಲ್ಲಿ ಆಯೋಜಿಸಿದ್ದ ಕಂಬಳದಲ್ಲಿ ಪಾಲ್ಗೊಂಡವರೇ, ಬೆಂಗ ಳೂರು ಕಂಬಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇನ್ನೂ ಕೆಲವರು ಬೆಂಗಳೂರು ಪ್ರವಾಸದಲ್ಲಿರುವವರು ಸಾಮಾಜಿಕ ಜಾಲತಾಣದಲ್ಲಿನ ಮಾಹಿತಿ ನೋಡಿಕೊಂಡು ಕಂಬಳಕ್ಕೆ ಬಂದಿದ್ದಾರೆ.
ಫೋಟೋಗ್ರಾಫಿ ಕ್ರೇಜ್: ವಿದೇಶಿ ಫೋಟೋಗ್ರಾಫರ್ ಕಂಬಳ ಕ್ರೀಡಾಕೂಟದಲ್ಲಿ ಕೋಣಗಳು ಹಾಗೂ ಕೋಣದ ಜಾಕಿಗಳ ವಿವಿಧ ಭಂಗಿಯಲ್ಲಿ ಚಿತ್ರಗಳನ್ನು ಸೆರೆ ಹಿಡಿದರು. ಇಲ್ಲಿ ಸೆರೆ ಹಿಡಿದ ಚಿತ್ರಗಳನ್ನು ಅಂತಾ ರಾಷ್ಟ್ರೀಯ ಫೋಟೋಗ್ರಾಫಿಕ್ ಸ್ಪರ್ಧೆಗೆ ಕಳುಹಿಸುವ ಇರಾದೆಯಾಗಿದೆ. ಬೆಳಗ್ಗೆ ಉತ್ತಮ ಬೆಳಕಿನ ವ್ಯವಸ್ಥೆ ಹಿನ್ನೆಲೆಯಲ್ಲಿ ಮುಗಿ ಬಿದ್ದು ಫೋಟೋ ತೆಗೆಯುತ್ತಿ ರುವುದು ಕಂಡು ಬಂತು.
ಪುತ್ತೂರು ಭಾಗದಲ್ಲಿ ಕಂಬಳ ನಡೆಯುವ ಸಂದರ್ಭ ದಲ್ಲಿ ಅನೇಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಫೋಟೋಗ್ರಾಫರ್‌ಗಳು ನಮ್ಮನ್ನು ಸಂಪರ್ಕಿಸಿ, ಕಂಬಳ ಆಯೋಜನೆ ಮಾಹಿತಿ ಪಡೆದು ಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದರು. ಈ ಬಾರಿಯೂ ಸುಮಾರು 20 ಅಂತಾರಾಷ್ಟ್ರೀಯ ಫೋಟೋಗ್ರಾಫರ್‌ಗಳು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಪೂತ್ತೂರು ತಿಳಿಸಿದರು.
ಕಂಬಳವನ್ನು ಇದೇ ಮೊದಲ ಬಾರಿ ವೀಕ್ಷಿಸುತ್ತಿರುವುದು. ಗ್ರಾಮೀಣದ ಭಾಗದ ಸಂಸ್ಕೃತಿ ಪ್ರತೀಕವಾಗಿರುವ ಕಂಬಳ ನೋಡುವುದೇ ಒಂದು ಹಬ್ಬ. ಕಾನ್ಫೆರೆನ್ಸ್ ನಿಮಿತ್ತ ಬೆಂಗಳೂರಿಗೆ ಆಗಮಿಸಿದೆ. ಕಂಬಳದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾಗವಹಿಸಿದ್ದೇನೆ. ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. –ಫ್ಲೋರಿಡಾ, ಫ್ರಾನ್ಸ್ ಪ್ರಜೆ
ಕಂಬಳ ಬೆಂಗಳೂರಿನಲ್ಲಿ ಆಯೋಜಿಸಿ ರುವುದು ಅಂತಾರಾಷ್ಟ್ರೀಯ ಫೋಟೋ ಗ್ರಾಫರ್‌ಗೆ ಅನುಕೂಲವಾಗಿದೆ. ಕ್ರೀಡಾಕೂಟ ದಲ್ಲಿ ತೆಗೆಯುವ ಫೋಟೋಗಳು ಸುಂದರ ವಾಗಿ ಮೂಡಿ ಬರುತ್ತದೆ. ನಮ್ಮ ಅಸೋಸಿಯೇ ಷನ್‌ನ ಅನೇಕರು ಈಗಾಗಲೇ ತೆಗೆದಿರುವ ಫೋಟೋಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಗಳಿಸಿದ್ದು ಇದೆ. – ರಾವನ್ ಹಾಗೂ ಮಾರ್ಗೋ, ಫೋಟೋಗ್ರಾಫರ್, ಇಂಗ್ಲೆಂಡ್
ಬೆಂಗಳೂರು ಕಂಬಳ ಮೂಲಕ ದೊಡ್ಡ ಸಾಧನೆ ಮಾಡಿದ್ದೇವೆ. ಕೋಣದ ಎಲ್ಲ ಯಜಮಾನರು ಕೋಣಗಳನ್ನು ಕರೆದುಕೊಂಡು ಬಂದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೆಂಗಳೂರು ಕಂಬಳ ಯಶಸ್ವಿಯಾಗಿದೆ. – ಪ್ರಕಾಶ್ ಶೆಟ್ಟಿ, ಬೆಂಗಳೂರು ಕಂಬಳ ಸಮಿತಿ ಗೌರವ ಅಧ್ಯಕ್ಷ.
ಕಂಬಳಕ್ಕೆ ಮಳೆ ಸಾಥ್, ಶುಭ ಸಂಕೇತ!: ಕರಾವಳಿಯಲ್ಲಿ ಸಾಂಪ್ರದಾಯಿಕ ಕಂಬಳಗಳನ್ನು ಆಯೋಜಿಸುವಾಗ ಮಳೆ ಬರುವುದು ಸಹಜ. ದೇವರ ಕೃಪೆಯಿಂದ ಮಳೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಶನಿವಾರ ಮಧ್ಯಾಹ್ನದಿಂದಲೇ ಬೆಂಗಳೂರು ಅರಮನೆ ಮೈದಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಮಳೆಯಾಗಿತ್ತು. ಇಂದು ಸರಿದ ಮಳೆ ಕಾಕತಾಳಿಯವೋ ಅಥವಾ ಬೆಂಗಳೂರು ಕಂಬಳದ ಶುಭ ಮುನ್ಸೂಚನೆ ಸಂಕೇತವೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.