Uttar Pradesh: ಹಲಾಲ್ ಪ್ರಮಾಣಿತ ವಸ್ತುಗಳನ್ನು ಹಿಂಪಡೆಯಲು 15 ದಿನ ಗಡುವು
ಉತ್ತರ ಪ್ರದೇಶ ಸರ್ಕಾರದ ಹೊಸ ನಿರ್ದೇಶನ
Team Udayavani, Nov 26, 2023, 9:57 PM IST
ಲಕ್ನೋ: ಉತ್ತರಪ್ರದೇಶದಲ್ಲಿ ಹಲಾಲ್ ಪ್ರಮಾಣಪತ್ರದ ಮೇಲೆ ಮುಗಿಬಿದ್ದಿರುವ ಅಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರ, ಇನ್ನೊಂದು ಪ್ರಮುಖ ಹೆಜ್ಜೆಯನ್ನಿಟ್ಟಿದೆ. ಮುಂದಿನ 15 ದಿನಗಳೊಳಗೆ ಎಲ್ಲ ಮಳಿಗೆಗಳು ಹಲಾಲ್ ಪ್ರಮಾಣಿತ ವಸ್ತುಗಳನ್ನು ಹೊರ ಕಳುಹಿಸಬೇಕು ಎಂದು ಗಡುವು ನೀಡಿದೆ.
ಉತ್ತರಪ್ರದೇಶದಲ್ಲಿರುವ 92 ಉತ್ಪಾದಕ ಸಂಸ್ಥೆಗಳಿಗೆ, ತಮ್ಮ ವಸ್ತುಗಳನ್ನು ಹಿಂಪಡೆದು ಹೊಸತಾಗಿ ಪ್ಯಾಕ್ ಮಾಡಿ ಅಥವಾ ಲೋಪವನ್ನು ಸರಿ ಮಾಡಿ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ನ.18ರಂದು ಉತ್ತರಪ್ರದೇಶ ಸರ್ಕಾರ ಹಲಾಲ್ ಪ್ರಮಾಣಿತ ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು. ಆ ಬಳಿಕ 92 ದಾಳಿ ನಡೆಸಿ, 500 ಬಾರಿ ತಪಾಸಣೆ ಮಾಡಲಾಗಿದೆ. ಈ ವೇಳೆ 3000 ಕೆಜಿ ತೂಕದ, 7-8 ಲಕ್ಷ ರೂ. ಮೌಲ್ಯದ ಹಲಾಲ್ ಪ್ರಮಾಣೀಕೃತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿರುವ ಆಹಾರ ಭದ್ರತೆ ಮತ್ತು ಔಷಧ ಆಡಳಿತ ಆಯುಕ್ತೆ ಅನಿತಾ ಸಿಂಗ್, ಲಕ್ನೋದಲ್ಲಿರುವ ಐ-ಸಿಎಎಸ್‌ನ ನ್ಯಾಷನಲ್ ಅಕ್ರೆಡಿಷನ್ ಬೋರ್ಡ್ ಫಾರ್ ಸರ್ಟಿಫಿಕೇಷನ್ ಸಂಸ್ಥೆ ಸೇರಿ ಮೂರು ಸಂಸ್ಥೆಗಳಿಗೆ ಮಾತ್ರ ಹಲಾಲ್ ಪ್ರಮಾಣಪತ್ರ ನೀಡಲು ಅಧಿಕಾರವಿದೆ. ಆದರೆ 700ರಿಂದ 800 ಸಂಸ್ಥೆಗಳು ಅನಧಿಕೃತವಾಗಿ ಪ್ರಮಾಣ ಪತ್ರ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.