T 20: ಮತ್ತೆ ಯುವ ಭಾರತಕ್ಕೆ ಆಸ್ಟ್ರೇಲಿಯ ಶರಣು
ಜೈಸ್ವಾಲ್, ಗಾಯಕ್ವಾಡ್, ಇಶಾನ್, ರಿಂಕು ಬ್ಯಾಟಿಂಗ್ ವೈಭವ
Team Udayavani, Nov 26, 2023, 11:21 PM IST
ತಿರುವನಂತಪುರ: ಜೈಸ್ವಾಲ್, ಗಾಯಕ್ವಾಡ್, ಇಶಾನ್ ಕಿಶನ್, ರಿಂಕು ಸಿಂಗ್ ಅವರ ಜಬರ್ದಸ್ತ್ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತ ಕಲೆಹಾಕಿದ ಭಾರತ, ತಿರುವನಂತಪುರದ ದ್ವಿತೀಯ ಟಿ20 ಪಂದ್ಯದಲ್ಲೂ ಆಸ್ಟ್ರೇಲಿಯದ ಮೇಲೆ ಸವಾರಿ ಮಾಡಿ 44 ರನ್ನುಗಳ ಜಯಭೇರಿ ಮೊಳಗಿಸಿದೆ. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ನಾಲ್ಕೇ ವಿಕೆಟಿಗೆ 235 ರನ್ ರಾಶಿ ಹಾಕಿತು. ಇದು ಆಸ್ಟ್ರೇಲಿಯ ವಿರುದ್ಧ ಭಾರತ ಪೇರಿಸಿದ ಅತ್ಯಧಿಕ ಮೊತ್ತ. ಚೇಸಿಂಗ್ ವೇಳೆ ಆಸೀಸ್ ತೀವ್ರ ಒತ್ತಡಕ್ಕೆ ಸಿಲುಕಿತು. ಬೌಲಿಂಗ್‌ನಲ್ಲೂ ಮಿಂಚಿದ ನಮ್ಮವರು ನಿರಂತರವಾಗಿ ವಿಕೆಟ್ ಉರುಳಿಸುತ್ತ ಹೋದರು. ಅಂತಿಮವಾಗಿ ಕಾಂಗರೂ ಪಡೆ 9 ವಿಕೆಟಿಗೆ 191 ರನ್ ಮಾಡಿತು.
ಬೌಲಿಂಗ್‌ನಲ್ಲೂ ತಿರುಗೇಟು
ಆರಂಭದಿಂದಲೇ ಹತ್ತರ ಸರಾಸರಿಯಲ್ಲಿ ರನ್ ಬಾರಿಸುತ್ತ ಹೋದ ಭಾರತ, 10ನೇ ಓವರ್ ಬಳಿಕ ಇನ್ನಷ್ಟು ಬಿರುಸಿನ ಆಟಕ್ಕೆ ಇಳಿಯಿತು. ಆಸ್ಟ್ರೇಲಿಯ ಕೂಡ ಹತ್ತರ ರನ್‌ರೇಟ್ ಕಾಯ್ದುಕೊಂಡೇ ಬಂತು. 10 ಓವರ್ ಮುಗಿಯುವ ವೇಳೆ 104 ರನ್ ಪೇರಿಸಿತು. ಆದರೆ ಆಗಲೇ 4 ವಿಕೆಟ್ ಕಳೆದುಕೊಂಡಿತ್ತು.
ಈ ಹಂತದಲ್ಲಿ ಸ್ಟೋಯಿನಿಸ್-ಟಿಮ್ ಡೇವಿಡ್ ಮುನ್ನುಗ್ಗಿ ಬಾರಿಸತೊಡಗಿದರು. ಅಂತಿಮ 7 ಓವರ್‌ಗಳಲ್ಲಿ 101 ರನ್ ತೆಗೆಯುವ ಸವಾಲು ಎದುರಾಯಿತು. ಇದನ್ನು ಮೆಟ್ಟಿ ನಿಲ್ಲಲಾಗಲಿಲ್ಲ. ಪ್ರಸಿದ್ಧ್ ಕೃಷ್ಣ ಮತ್ತು ರವಿ ಬಿಷ್ಣೋಯಿ ತಲಾ 3 ವಿಕೆಟ್ ಉಡಾಯಿಸಿದರು.
ಸ್ಫೋಟಕ ಆರಂಭ
ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಸೇರಿಕೊಂಡು ಭಾರತಕ್ಕೆ ಸ್ಫೋಟಕ ಆರಂಭವಿತ್ತರು. ಪವರ್ ಪ್ಲೇಯಲ್ಲಿ ಬರೋಬ್ಬರಿ 77 ರನ್ ಹರಿದು ಬಂತು. ಇದು ಪವರ್ ಪ್ಲೇಯಲ್ಲಿ ಭಾರತ ಬಾರಿಸಿದ 3ನೇ ಅತ್ಯಧಿಕ ರನ್.
ಈ ಕಿರು ಆವಧಿಯಲ್ಲೇ ಜೈಸ್ವಾಲ್ ಅರ್ಧ ಶತಕ ಸಿಡಿಸಿ ಆಗಿತ್ತು. 6 ಓವರ್ ಆಗುವಷ್ಟರಲ್ಲಿ 12 ಬೌಂಡರಿ, 3 ಸಿಕ್ಸರ್ ಬಾರಿಸಿದ ಭಾರತ ಬೃಹತ್ ಮೊತ್ತಕ್ಕೆ ಬುನಾದಿ ನಿರ್ಮಿಸಿತು.
ಜೈಸ್ವಾಲ್ ಅವರದು ಜಬರ್ದಸ್ತ್ ಬ್ಯಾಟಿಂಗ್. 4ನೇ ಓವರ್ ಎಸೆಯಲು ಬಂದ ಸೀನ್ ಅಬೋಟ್ ಬ್ಯಾಟಿಂಗ್ ಅಬ್ಬರದ “ಸೀನ್’ ಒಂದನ್ನು ಕಾಣಬೇಕಾಯಿತು. ಈ ಓವರ್‌ನಲ್ಲಿ ಜೈಸ್ವಾಲ್ ಬರೋಬ್ಬರಿ 24 ರನ್ ಸೂರೆಗೈದರು. ಮೊದಲ 5 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಯಲ್ಪಟ್ಟಿತು. ಜೈಸ್ವಾಲ್ 24 ಎಸೆತಗಳಿಂದ ಅರ್ಧ ಶತಕ ಬಾರಿಸಿದರು. ಮುಂದಿನ ಎಸೆತದಲ್ಲಿ ಎಲ್ಲಿಸ್‌ಗೆ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಪವರ್ ಪ್ಲೇ ಕೂಡ ಮುಗಿದಿತ್ತು. 53 ರನ್ನುಗಳ ಈ ರಂಜನೀಯ ಆಟದಲ್ಲಿ 9 ಫೋರ್, 2 ಸಿಕ್ಸರ್ ಒಳಗೊಂಡಿತ್ತು. ಜೈಸ್ವಾಲ್ ಪವರ್ ಪ್ಲೇ ಅವಧಿಯಲ್ಲೇ ಅರ್ಧ ಶತಕ ಬಾರಿಸಿದ ಭಾರತದ 3ನೇ ಆಟಗಾರ. ರೋಹಿತ್ ಶರ್ಮ, ಕೆ.ಎಲ್. ರಾಹುಲ್ ಉಳಿದಿಬ್ಬರು. ಇವರದು 50 ರನ್ ಸಾಧನೆ ಆಗಿತ್ತು.
9.5 ಓವರ್‌ಗಳಲ್ಲಿ ಭಾರತದ 100 ರನ್ ಹರಿದು ಬಂತು. ಮೊದಲ ಪಂದ್ಯದಲ್ಲಿ ಎಸೆತ ಎದುರಿಸುವ ಮೊದಲೇ ರನೌಟ್ ಆಗಿ ನಿರ್ಗಮಿಸಿದ್ದ ಗಾಯಕ್ವಾಡ್ ಇಲ್ಲಿ ಯಾವುದೇ ಎಡವಟ್ಟು ಮಾಡಿಕೊಳ್ಳದೆ ಇನ್ನಿಂಗ್ಸ್ ಬೆಳೆಸುತ್ತ ಹೋದರು. ಜೈಸ್ವಾಲ್ ಅವರ ಬಿರುಸಿನ ಆಟವನ್ನು ಇಶಾನ್ ಕಿಶನ್ ಮುಂದುವರಿಸಿದರು. ಮ್ಯಾಕ್ಸ್‌ವೆಲ್ ಅವರ ಓವರ್ ಒಂದರಲ್ಲಿ 23 ರನ್ ಸೋರಿ ಹೋಯಿತು. 15 ಓವರ್ ಅಂತ್ಯಕ್ಕೆ ಭಾರತ ಒಂದೇ ವಿಕೆಟ್ ಕಳೆದುಕೊಂಡು 164 ರನ್ ರಾಶಿ ಹಾಕುವಲ್ಲಿ ಯಶಸ್ವಿಯಾಗಿತ್ತು.
ಇಶಾನ್ ಕಿಶನ್ ಗಾಯಕ್ವಾಡ್‌ಗಿಂತ ಬೇಗ ಅರ್ಧ ಶತಕದ ಸಂಭ್ರಮ ಆಚರಿಸಿದರು. 32 ಎಸೆತ, 52 ರನ್… ಇಶಾನ್ ಬಿರುಸಿಗೆ ಸಾಕ್ಷಿ. 4 ಸಿಕ್ಸರ್, 3 ಬೌಂಡರಿ ಈ ಸೊಗಸಾದ ಆಟದ ಮೆರುಗನ್ನು ಹೆಚ್ಚಿಸಿತು. ಗಾಯಕ್ವಾಡ್-ಇಶಾನ್ ಜೋಡಿ 87 ರನ್ ಒಟ್ಟುಗೂಡಿಸಿತು. ಗಾಯಕ್ವಾಡ್ 39 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಆಗ 18ನೇ ಓವರ್ ಜಾರಿಯಲ್ಲಿತ್ತು. 43 ಎಸೆತಗಳಿಂದ 58 ರನ್ ಮಾಡಿದ ರುತುರಾಜ್ ಟಾಪ್ ಸ್ಕೋರರ್ ಎನಿಸಿದರು (3 ಬೌಂಡರಿ, 2 ಸಿಕ್ಸರ್).
ಕ್ಯಾಪ್ಟನ್ ಸೂರ್ಯ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದರೆ, ಭಡ್ತಿ ಪಡೆದು ಬಂದ ರಿಂಕು ಸಿಂಗ್ ಸಿಡಿಲಬ್ಬರದ ಆಟದಿಂದ ಧಾರಾಳ ರಂಜನೆ ಒದಗಿಸಿದರು. ಇವರ ಅಬ್ಬರದ ವೇಳೆ 19ನೇ ಓವರ್‌ನಲ್ಲಿ 25 ರನ್ ಸೋರಿ ಹೋಯಿತು. ಮತ್ತೂಮ್ಮೆ ಮಿಂಚಿದ ರಿಂಕು ಕೇವಲ 9 ಎಸೆತಗಳಿಂದ ಅಜೇಯ 31 ರನ್ ಬಾರಿಸಿದರು (4 ಬೌಂಡರಿ, 2 ಸಿಕ್ಸರ್). ಭಾರತದ ಸರದಿಯಲ್ಲಿ ಒಟ್ಟು 19 ಬೌಂಡರಿ, 13 ಸಿಕ್ಸರ್ ಸಿಡಿಯಲ್ಪಟ್ಟಿತು.
ಮ್ಯಾಕ್ಸ್‌ವೆಲ್, ಝಂಪ ಸೇರ್ಪಡೆ
ದ್ವಿತೀಯ ಟಿ20 ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ವಿಶಾಖಪಟ್ಟಣದ ವಿಜೇತ ತಂಡವನ್ನೇ ಉಳಿಸಿಕೊಳ್ಳಲಾಯಿತು. ಆದರೆ ಆಸ್ಟ್ರೇಲಿಯ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆ್ಯಡಂ ಝಂಪ ಸೇರ್ಪಡೆಯಿಂದ ಇನ್ನಷ್ಟು ಬಲಿಷ್ಠಗೊಂಡಿತು. ಇವರಿಗಾಗಿ ಸ್ಥಾನ ಕಳೆದುಕೊಂಡವರು ಜೇಸನ್ ಮತ್ತು ಆರನ್ ಹಾರ್ಡಿ.
ಸ್ಕೋರ್ ಪಟ್ಟಿ
ಭಾರತ
ಯಶಸ್ವಿ ಜೈಸ್ವಾಲ್ ಸಿ ಝಂಪ ಬಿ ಎಲ್ಲಿಸ್ 53
ರುತುರಾಜ್ ಗಾಯಕ್ವಾಡ್ ಸಿ ಡೇವಿಡ್ ಬಿ ಎಲ್ಲಿಸ್ 58
ಇಶಾನ್ ಕಿಶನ್ ಸಿ ಎಲ್ಲಿಸ್ ಬಿ ಸ್ಟೋಯಿನಿಸ್ 52
ಸೂರ್ಯಕುಮಾರ್ ಸಿ ಸ್ಟೋಯಿನಿಸ್ ಬಿ ಎಲ್ಲಿಸ್ 19
ರಿಂಕು ಸಿಂಗ್ ಔಟಾಗದೆ 31
ತಿಲಕ್ ವರ್ಮ ಔಟಾಗದೆ 7
ಇತರ 15
ಒಟ್ಟು (20 ಓವರ್‌ಗಳಲ್ಲಿ 4 ವಿಕೆಟಿಗೆ) 235
ವಿಕೆಟ್ ಪತನ: 1-77, 2-164, 3-189, 4-221.
ಬೌಲಿಂಗ್: ಮಾರ್ಕಸ್ ಸ್ಟೋಯಿನಿಸ್ 3-0-27-1
ನಥನ್ ಎಲ್ಲಿಸ್ 4-0-45-3
ಗ್ಲೆನ್ ಮ್ಯಾಕ್ಸ್‌ವೆಲ್ 2-0-38-0
ಸೀನ್ ಅಬೋಟ್ 3-0-56-0
ಆ್ಯಡಂ ಝಂಪ 4-0-33-0
ತನ್ವೀರ್ ಸಂಘಾ 4-0-34-0
ಆಸ್ಟ್ರೇಲಿಯ
ಸ್ಟೀವನ್ ಸ್ಮಿತ್ ಸಿ ಜೈಸ್ವಾಲ್ ಬಿ ಪ್ರಸಿದ್ಧ್ 19
ಮ್ಯಾಥ್ಯೂ ಶಾರ್ಟ್ ಬಿ ಬಿಷ್ಣೋಯಿ 19
ಜೋಶ್ ಇಂಗ್ಲಿಸ್ ಸಿ ತಿಲಕ್ ಬಿ ಬಿಷ್ಣೋಯಿ 2
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಜೈಸ್ವಾಲ್ ಬಿ ಅಕ್ಷರ್ 12
ಸ್ಟೋಯಿನಿಸ್ ಸಿ ಅಕ್ಷರ್ ಬಿ ಮುಕೇಶ್ 45 ಟಿಮ್ ಡೇವಿಡ್‌ಸಿ ಗಾಯಕ್ವಾಡ್ ಬಿ ಬಿಷ್ಣೋಯಿ 37
ಮ್ಯಾಥ್ಯೂ ವೇಡ್ ಔಟಾಗದೆ 42
ಸೀನ್ ಅಬೋಟ್ ಬಿ ಪ್ರಸಿದ್ಧ್ 1
ನಥನ್ ಎಲ್ಲಿಸ್ ಬಿ ಪ್ರಸಿದ್ಧ್ 1
ಆ್ಯಡಂ ಝಂಪ ಬಿ ಅಕ್ಷರ್ 1
ತನ್ವೀರ್ ಸಂಘಾ ಔಟಾಗದೆ 2
ಇತರ 10
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 191
ವಿಕೆಟ್ ಪತನ: 1-35, 2-39, 3-53, 4-58, 5-139, 6-148, 7-149, 8-152, 9-155.
ಬೌಲಿಂಗ್: ಅರ್ಷದೀಪ್ ಸಿಂಗ್ 4-0-46-1
ಪ್ರಸಿದ್ಧ್ ಕೃಷ್ಣ 4-0-41-3
ರವಿ ಬಿಷ್ಣೋಯಿ 4-0-32-3
ಅಕ್ಷರ್ ಪಟೇಲ್ 4-0-25-1
ಮುಕೇಶ್ ಕುಮಾರ್ 4-0-43-1
ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.