IPL; ಹನ್ನೊಂದು ಕ್ರಿಕೆಟಿಗರನ್ನು ಕೈಬಿಟ್ಟ ಆರ್‌ಸಿಬಿ: ಹಸರಂಗ, ಹರ್ಷಲ್, ಹೇಝಲ್‌ವುಡ್…
ಸ್ಟಾರ್ ಆಟಗಾರರಿಗೆ ಗೇಟ್‌ಪಾಸ್, ಡಿ. 19ಕ್ಕೆ ಐಪಿಎಲ್ ಮಿನಿ ಹರಾಜು
Team Udayavani, Nov 27, 2023, 6:00 AM IST
ಬೆಂಗಳೂರು: ಮುಂದಿನ ಋತುವಿನ ಐಪಿಎಲ್ ಕ್ರಿಕೆಟಿಗರ ಹರಾಜು ಹಾದಿ ಸುಗಮಗೊಳ್ಳುವ ಸಲುವಾಗಿ ನಡೆಯುತ್ತಿದ್ದ ಐಪಿಎಲ್ ಟ್ರೇಡಿಂಗ್ ಪ್ರಕ್ರಿಯೆ ಒಂದು ಹಂತಕ್ಕೆ ಮುಗಿದಿದೆ. ರವಿವಾರ ಸಂಜೆ ಎಲ್ಲ 10 ತಂಡಗಳು ತಾವು ಉಳಿಸಿಕೊಂಡ ಕ್ರಿಕೆಟಿಗರ ಯಾದಿಯನ್ನು ಬಿಡುಗಡೆ ಮಾಡಿವೆ.
ಡಿ. 19ಕ್ಕೆ ಮಿನಿ ಹರಾಜು ನಡೆಯ ಲಿದ್ದು, ಇದಕ್ಕೆ ಒಂದು ವಾರ ಬಾಕಿ ಉಳಿದಿರುವಾಗ, ಅಂದರೆ ಡಿ. 12ರ ತನಕ ಆಟಗಾರರನ್ನು ಅದಲು ಬದಲು ಮಾಡಿಕೊಳ್ಳಲು ಅವಕಾಶವಿದೆ.ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಯಾದಿ ತೀವ್ರ ಕುತೂಹಲ ಮೂಡಿಸಿದೆ. ಆರ್‌ಸಿಬಿಯನ್ನೇ ತೆಗೆದುಕೊಳ್ಳುವುದಾದರೆ ಇಲ್ಲಿ ಹಸರಂಗ, ಹೇಝಲ್‌ವುಡ್, ಹರ್ಷಲ್ ಪಟೇಲ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ ಪಾರ್ನೆಲ್, ಕೇದಾರ್ ಜಾಧವ್ ಮೊದಲಾದ ಆಟಗಾರರ ಹೆಸರು ಕಾಣಿಸಿಕೊಂಡಿಲ್ಲ. ಇವರೆಲ್ಲರನ್ನೂ ಕೈಬಿಡಲಾಗಿದೆ.
ಹಾಗೆಯೇ ಟ್ರೇಡಿಂಗ್‌ನಲ್ಲಿ ಎಡಗೈ ಸ್ಪಿನ್ನರ್ ಶಾಬಾಜ್ ಅಹ್ಮದ್ ಆರ್‌ಸಿಬಿಯಿಂದ ಬೇರ್ಪಟ್ಟು ಸನ್‌ರೈಸರ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಹೈದರಾಬಾದ್ ತಂಡದ ಮಾಯಾಂಕ್ ಡಾಗರ್ ಆರ್‌ಸಿಬಿ ಸೇರಿಕೊಂಡಿದ್ದಾರೆ.
ಶಾಬಾಜ್ ಅಹ್ಮದ್ 2020ರಿಂದ ಆರ್‌ಸಿಬಿ ಪರ ಆಡುತ್ತಿದ್ದರು. ಒಟ್ಟು 39 ಐಪಿಎಲ್ ಪಂದ್ಯಗಳಿಂದ 14 ವಿಕೆಟ್ ಉರುಳಿಸಿದ್ದಾರೆ. 7 ರನ್ನಿಗೆ 3 ವಿಕೆಟ್ ಉರುಳಿಸಿದ್ದು ಅತ್ಯುತ್ತಮ ಸಾಧನೆಯಾಗಿದೆ.
ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಆರ್‌ಸಿಬಿ 2.4 ಕೋಟಿ ರೂ. ನೀಡಿ ಶಾಬಾಜ್ ಅವರನ್ನು ಮರಳಿ ಕರೆಸಿ ಕೊಂಡಿತ್ತು. ಇವರನ್ನು ಸೆಳೆಯಲು ಕೆಕೆಆರ್ ಕೂಡ ಭಾರೀ ಪ್ರಯತ್ನಪಟ್ಟಿತ್ತು. ಬಂಗಾಲದ ಈ ಸ್ಪಿನ್ನರ್‌ನನ್ನು ಆರ್‌ಸಿಬಿ ಮೊದಲ ಸಲ 2020ರಲ್ಲಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
ಮಾಯಾಂಕ್ ಡಾಗರ್ ಪಂಜಾಬ್ ಕಿಂಗ್ಸ್ ತಂಡವನ್ನೂ ಪ್ರತಿನಿಧಿಸಿದ್ದಾರೆ. 2023ರಲ್ಲಿ ಎಸ್‌ಆರ್‌ಎಚ್ ಪರ 3 ಪಂದ್ಯಗಳನ್ನಾಡಿ ಒಂದು ವಿಕೆಟ್ ಉರುಳಿಸಿದ್ದಷ್ಟೇ ಇವರ ಸಾಧನೆ.
ಆರ್‌ಸಿಬಿ ಸಾಧನೆಯೆಂದರೆ, ತನ್ನ ಜೇಬಿನಲ್ಲಿ ಅತ್ಯಧಿಕ 40.75 ಕೋಟಿ ರೂ. ಮೊತ್ತವನ್ನು ಉಳಿಸಿಕೊಂಡದ್ದು. ಅತ್ಯಂತ ಜಾಣ್ಮೆಯಿಂದ ವ್ಯವಹರಿಸಿದರೆ ಬಲಿಷ್ಠ ಹಾಗೂ ಸಂತುಲಿತ ತಂಡವೊಂದನ್ನು ಕಟ್ಟುವ ಅವಕಾಶ ಆರ್‌ಸಿಬಿ ಪಾಲಿಗೆ ಒದಗಿ ಬರಲಿದೆ.
ಕೆಕೆಆರ್‌ನಿಂದ 12 ಆಟಗಾರರು
ಕೆಕೆಆರ್ ಗರಿಷ್ಠ 12 ಕ್ರಿಕೆಟಿಗರನ್ನು ಕೈಬಿಟ್ಟಿದೆ. ಆರ್‌ಸಿಬಿ, ಮುಂಬೈ ಮತ್ತು ಡೆಲ್ಲಿ ತಂಡಗಳಿಂದ ತಲಾ 11 ಆಟಗಾರರು ಬೇರ್ಪಟ್ಟಿದ್ದಾರೆ. ಪಂಜಾಬ್ ಅತೀ ಕಡಿಮೆ 5 ಕ್ರಿಕೆಟಿಗರನ್ನು ಬಿಟ್ಟುಕೊಟ್ಟಿದೆ.
ಡೆಲ್ಲಿ ತಂಡದಿಂದ ಮನೀಷ್ ಪಾಂಡೆ; ಕೆಕೆಆರ್‌ನಿಂದ ನಂ.1 ಆಲ್‌ರೌಂಡರ್ ಶಕಿಬ್ ಅಲ್ ಹಸನ್, ಶಾದೂìಲ್ ಠಾಕೂರ್, ಫರ್ಗ್ಯುಸನ್, ಉಮೇಶ್ ಯಾದವ್, ಸೌಥಿ ಹೆಸರು ಮಾಯವಾಗಿದೆ.
ಗುಜರಾತ್‌ನಲ್ಲೇ ಪಾಂಡ್ಯ
ಭಾರೀ ಸುದ್ದಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಸದ್ಯ ಗುಜರಾತ್ ತಂಡದಲ್ಲೇ ಉಳಿದುಕೊಂಡಿದ್ದಾರೆ. ಯಶಸ್ವಿ ನಾಯಕರಾಗಿರುವ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳುವ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿತ್ತು. ಆದರೆ ಅಂಥದ್ದೇನೂ ಸಂಭವಿಸಿಲ್ಲ. ಅವರು ಗುಜರಾತ್ ನಾಯಕರಾಗಿ ಮುಂದುವರಿದಿದ್ದಾರೆ.
ಫ್ರಾಂಚೈಸಿಗಳಲ್ಲಿ ಉಳಿದ ಮೊತ್ತ
ಬೆಂಗಳೂರು 40.75 ಕೋ.ರೂ.
ಹೈದರಾಬಾದ್ 34 ಕೋ.ರೂ.
ಕೋಲ್ಕತಾ 32.7 ಕೋ.ರೂ.
ಚೆನ್ನೈ 32.2 ಕೋ.ರೂ.
ಪಂಜಾಬ್ 29.1 ಕೋ.ರೂ.
ಡೆಲ್ಲಿ 28.95 ಕೋ.ರೂ.
ಮುಂಬೈ 15.25 ಕೋ.ರೂ.
ರಾಜಸ್ಥಾನ್ 14.5 ಕೋ.ರೂ.
ಗುಜರಾತ್ 4.45 ಕೋ.ರೂ.
ಲಕ್ನೋ 3.55 ಕೋ.ರೂ.
ತಂಡಗಳಿಂದ ಬೇರ್ಪಟ್ಟ ಆಟಗಾರರು
ರಾಯಲ್ ಚಾಲೆಂಜರ್ ಬೆಂಗಳೂರು
ವನಿಂದು ಹಸರಂಗ, ಜೋಶ್ ಹೇಝಲ್‌ವುಡ್, ಹರ್ಷಲ್ ಪಟೇಲ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್.
ಚೆನ್ನೈ ಸೂಪರ್ ಕಿಂಗ್ಸ್
ಬೆನ್ ಸ್ಟೋಕ್ಸ್, ಡ್ವೇನ್ ಪ್ರಿಟೋರಿಯಸ್, ಭಗತ್ ವರ್ಮ, ಸುಭಾÅಂಶು ಸೇನಾಪತಿ, ಅಂಬಾಟಿ ರಾಯುಡು, ಕೈಲ್ ಜೇಮಿಸನ್, ಆಕಾಶ್ ಸಿಂಗ್, ಸಿಸಾಂಡ ಮಗಾಲ.
ಡೆಲ್ಲಿ ಕ್ಯಾಪಿಟಲ್ಸ್
ರಿಲೀ ರೋಸ್ಯೂ, ಚೇತನ್ ಸಕಾರಿಯಾ, ರೋವ¾ನ್ ಪೊವೆಲ್, ಮನೀಷ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಫಿಜುರ್ ರೆಹಮಾನ್, ಕಮಲೇಶ್ ನಾಗರಕೋಟಿ, ರಿಪಲ್ ಪಟೇಲ್, ಸಫìರಾಜ್ ಖಾನ್, ಅಮಾನ್ ಖಾನ್, ಪ್ರಿಯಂ ಗರ್ಗ್.
ರಾಜಸ್ಥಾನ್ ರಾಯಲ್ಸ್
ಜೋ ರೂಟ್, ಅಬ್ದುಲ್ ಬಾಸಿತ್, ಜೇಸನ್ ಹೋಲ್ಡರ್, ಆಕಾಶ್ ವಶಿಷ್ಠ, ಕುಲ್ದೀಪ್ ಯಾದವ್, ಒಬೆಡ್ ಮೆಕಾಯ್, ಮುರುಗನ್ ಅಶ್ವಿನ್, ಕೆ.ಸಿ. ಕಾರ್ಯಪ್ಪ, ಕೆ.ಎಂ. ಆಸಿಫ್.
ಪಂಜಾಬ್ ಕಿಂಗ್ಸ್
ಭನುಕ ರಾಜಪಕ್ಸ, ಮೋಹಿತ್ ರಥಿ, ರಾಜ್ ಅಂಗದ್ ಬಾವಾ, ಶಾರೂಖ್ ಖಾನ್, ಬಲತೇಜ್ ದಂಡ.
ಕೋಲ್ಕತಾ ನೈಟ್‌ರೈಡರ್
ಶಕಿಬ್ ಅಲ್ ಹಸನ್, ಲಿಟನ್ ದಾಸ್, ಆರ್ಯ ದೇಸಾಯಿ, ಡೇವಿಡ್ ವೀಸ್, ಎನ್. ಜಗದೀಶನ್, ಮನ್‌ದೀಪ್ ಸಿಂಗ್, ಕುಲವಂತ್ ಖಜೊÅàಲಿಯಾ, ಶಾದೂìಲ್ ಠಾಕೂರ್, ಲಾಕಿ ಫರ್ಗ್ಯುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾರ್ಲ್ಸ್.
ಮುಂಬೈ ಇಂಡಿಯನ್ಸ್
ಮೊಹಮ್ಮದ್ ಅರ್ಷದ್ ಖಾನ್, ರಮಣ್‌ದೀಪ್ ಸಿಂಗ್, ಹೃತಿಕ್ ಶೋಕೀನ್, ರಾಘವ್ ಗೋಯಲ್, ಜೋಫÅ ಆರ್ಚರ್, ಟ್ರಿಸ್ಟನ್ ಸ್ಟಬ್ಸ್, ಡುವಾನ್ ಜಾನ್ಸನ್, ಜೇ ರಿಚರ್ಡ್‌ಸನ್, ರಿಲೀ ಮೆರಿಡಿತ್, ಕ್ರಿಸ್ ಜೋರ್ಡನ್, ಸಂದೀಪ್ ವಾರಿಯರ್.
ಗುಜರಾತ್ ಟೈಟಾನ್ಸ್
ಯಶ್ ದಯಾಳ್, ಕೆ.ಎಸ್. ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಪ್ರದೀಪ್ ಸಂಗ್ವಾನ್, ಒಡೀನ್ ಸ್ಮಿತ್, ಅಲ್ಜಾರಿ ಜೋಸೆಫ್, ದಸುನ್ ಶಣಕ.
ಸನ್‌ರೈಸರ್ ಹೈದರಾಬಾದ್
ಹ್ಯಾರಿ ಬ್ರೂಕ್, ಸಮರ್ಥ್ ವ್ಯಾಸ್, ಕಾರ್ತಿಕ್ ತ್ಯಾಗಿ, ವಿವ್ರಾಂತ್ ಶರ್ಮ, ಅಖೀಲ್ ಹುಸೇನ್, ಆದಿಲ್ ರಶೀದ್.
ಲಕ್ನೋ ಸೂಪರ್ ಜೈಂಟ್ಸ್
ಜೈದೇವ್ ಉನಾದ್ಕತ್, ಡೇನಿಯಲ್ ಸ್ಯಾಮ್ಸ್, ಮನನ್ ವೋಹ್ರಾ, ಸ್ವಪ್ನಿಲ್ ಸಿಂಗ್, ಕರಣ್ ಶರ್ಮ, ಅರ್ಪಿತ್ ಗುಲೇರಿಯಾ, ಸೂರ್ಯಾಂಶ್ ಶಡೆY, ಕರುಣ್ ನಾಯರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.