Bengaluru Kambala: ಬೆಂಗೂರ್‌ ಕಂಬ್ಳ ಮುಗೀಂಡ್‌, ಊರುಗ್‌ ಪೋಯಿ

Team Udayavani, Nov 27, 2023, 11:17 AM IST

Bengaluru Kambala: ಬೆಂಗೂರ್‌ ಕಂಬ್ಳ ಮುಗೀಂಡ್‌, ಊರುಗ್‌ ಪೋಯಿ

ಬೆಂಗಳೂರು: ಬೆಂಗ್ಳೂರ್ದ ಕಂಬ್ಳ ಮುಗೀಂಡ್‌….ನನ ಊರುಗ್‌ ಪೋಯಿ, ಪೋಯಿ….ಇದು ಬೆಂಗಳೂರು ಕಂಬಳ ಮುಗಿಸಿಕೊಂಡು ಮತ್ತೆ ಕರಾವಳಿಯತ್ತ ಸಾಗುತ್ತಿರುವ ಕೋಣಗಳ ಮಾಲಿಕರು, ಸಹಾಯಕರಿಂದ ಕೇಳಿ ಬಂದ ತುಳುವಿನ ಮಾತುಗಳು.

ಎರಡು ದಿನಗಳ ಅದ್ಧೂರಿ ಕಂಬಳಕ್ಕೆ ಭಾನುವಾರ ರಾತ್ರಿ ತೆರೆ ಬಿದ್ದ ಬೆನ್ನಲ್ಲೇ “ನಮ್ಮ ಬೆಂಗಳೂರು ಕಂಬಳ’ಕ್ಕೆ ಬಂದಿದ್ದ ಕೋಣಗಳು ರಾತ್ರೋ ರಾತ್ರಿಯೇ ಲಾರಿಗಳನ್ನು ಹತ್ತಿ ಕಡಲತಡಿಯತ್ತ ಸಾಗಿದವು. ಗೆದ್ದ ಕೋಣಗಳ ಮಾಲೀಕರು ಬಂಗಾರದ ಮೆಡಲ್‌ ತೋರಿಸುತ್ತಾ ಸಂಭ್ರಮದಲ್ಲಿ ಕೋಣಗಳ ಬೆನ್ನು ತಟ್ಟಿ ಶಬಾಸ್‌ಗಿರಿ ಕೊಟ್ಟು ಬೀಗಿದರೆ, ಸೋತ ಕೋಣಗಳ ಪರಿಚಾರಕರು ಮುಂದಿನ ಕಂಬಳದಲ್ಲಿ ನಮ್ಮ ಕೋಣ ಮೆಡಲ್‌ ಪಡೆಯುವ ವಿಶ್ವಾಸವಿದೆ ಎನ್ನುತ್ತಾ ಬೆಂಗಳೂರು ತೊರೆದರು.

ಒಂದಾದ ಮೇಲೊಂದರಂತೆ ಕೋಣಗಳನ್ನು ತುಂಬಿದ ಲಾರಿಗಳು ತುಮಕೂರು ರಸ್ತೆ ಮೂಲಕ ಹಾಸನದತ್ತ ಪ್ರಯಾಣ ಬೆಳೆಸಿದವು. ಹಾಸನದಲ್ಲಿ ಕೋಣಗಳಿಗೆ ಕೊಂಚ ವಿಶ್ರಾಂತಿ ಕೊಟ್ಟು ಶಿರಾಡಿ ಅಥವಾ ಚಾರ್ಮಾಡಿ ಘಾಟ್‌ ಇಳಿದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳತ್ತ ಪ್ರಯಾಣಿಸಲು ಯೋಜನೆ ರೂಪಿಸಿರುವುದಾಗಿ 10ಕ್ಕೂ ಹೆಚ್ಚಿನ ಕೋಣಗಳ ಮಾಲೀಕರು “ಉದಯವಾಣಿ’ಗೆ ತಿಳಿಸಿದ್ದಾರೆ.

ಊರಿಗಿಂತ ಬೆಂಗ್ಳೂರು ಕಂಬ್ಳ ಆಗ್ಬೋದು ಮಾರ್ರೆ: ಕರಾವಳಿಗಿಂತಲೂ ಬೆಂಗಳೂರಿನಲ್ಲೇ ಕಂಬಳ ಮಾಡಿದರೆ ಉತ್ತಮ ಮಾರ್ರೆ. ಆದರೆ, ಊರಿನಿಂದ ಬೆಂಗಳೂರಿಗೆ ಕೋಣಗಳನ್ನು ಕರೆ ತರುವುದೊಂದೇ ಸಮಸ್ಯೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಸಿದ್ಧತೆ ಮಾಡಿಕೊಂಡು ನುರಿತ ಕೋಣಗಳನ್ನು ಕರೆತರುತ್ತೇವೆ ಎಂದು ಬಹುತೇಕ ಮಾಲೀಕರು, ಓಡಿಸುವವರು, ಪರಿಚಾರಕರು ಅಭಿಪ್ರಾಯ ವ್ಯಕ್ತಪಡಿಸಿದರು. ಲಾರಿಯಿಂದ ಇಳಿಸುವ ವೇಳೆ ಬಹುತೇಕ ಕೋಣಗಳು ಗಲಿಬಿಲಿ ಕೊಂಡಿದ್ದವು. ಆದರೆ, ಈಗ ಬೆಂಗಳೂರಿನ ವಾತಾವರಣಕ್ಕೆ ಎಲ್ಲ ಕೋಣಗಳೂ ಒಗ್ಗಿಕೊಂಡಿವೆ. ಬೆಂಗಳೂರಿನಲ್ಲಿ ರಾತ್ರಿ ಆಗುತ್ತಿದ್ದಂತೆ ಕೊಂಚ ಚಳಿಯ ಅನುಭವವಾದರೂ ಕೋಣಗಳ ಆರೋಗ್ಯದಲ್ಲಿ ವ್ಯತ್ಯಾಸವಾಗಲಿಲ್ಲ. ಶೇ.70 ಕೋಣಗಳು ಕಂಬಳದಲ್ಲಿ ಉತ್ತಮ ಪ್ರದರ್ಶನ ನೀಡಿವೆ ಎನ್ನುತ್ತಾರೆ ಕಂಬಳ ತಜ್ಞರು ಹಾಗೂ ಪರಿಚಾರಕರು.

ಕೋಣಗಳಿಗೆ ಸೂಕ್ತ ವ್ಯವಸ್ಥೆ ಕಂಬಳಕ್ಕೆ ಬಂದ ಕೋಣಗಳಿಗೆ ಉಳಿದುಕೊಳ್ಳಲು ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಇಲ್ಲಿರುವ ಯಾವುದೇ ಕೋಣಗಳಿಗೂ ಸಮಸ್ಯೆಯಾಗಿರುವ ವರದಿಯಾಗಿಲ್ಲ. 179 ಜೋಡಿ ಕೋಣಗಳಿಗೆ ವಿಶ್ರಾಂತಿ ಪಡೆಯಲೆಂದು ಹಾಕಿದ್ದ 200 ಡೆರೆಗಳಲ್ಲೇ ಕೋಣಗಳ ನಿರ್ವಹಣೆಗೆ ಬಂದಿದ್ದ ಪರಿಚಾರಕರೂ ಎರಡು ರಾತ್ರಿ ಕಳೆದಿದ್ದಾರೆ. ಕೋಣಗಳನ್ನು ಕರೆ ತಂದಿದ್ದ ಲಾರಿಗಳಲ್ಲೇ ಮೇಲ್ವಿಚಾರಕರು ವಿಶ್ರಾಂತಿ ಪಡೆದರು. ಲಾರಿಗಳ ಹಿಂಭಾಗಕ್ಕೆ ಹಲಗೆಯಿಟ್ಟು ಕಂಬಳದಲ್ಲಿ ಸೋತ ಕೋಣಗಳನ್ನು ಲಾರಿಗೆ ಹತ್ತಿಸಿ ಕರೆದೊಯ್ಯುವ ದೃಶ್ಯ ಕಂಡು ಬಂತು. ಕಂಬಳದಲ್ಲಿ ವಿಜಯ ಪತಾಕೆ ಹಾರಿಸಿ ಮೆಡಲ್‌ ಗೆದ್ದ ಹಾಗೂ ಫೈನಲ್‌ಗೆ ಬಂದ 40ಕ್ಕೂ ಹೆಚ್ಚಿನ ಜೊತೆ ಕೋಣಗಳು ಸೋಮವಾರದವರೆಗೆ ಅರಮನೆ ಮೈದಾನದಲ್ಲಿದ್ದ ಠಿಕಾಣಿ ಹೂಡಿದ್ದು, ಮಧ್ಯಾಹ್ನ ಅಲ್ಲಿಂದ ಒಂದೊಂದಾಗಿ ತೆರಳಲಿವೆ. ಟ್ಯಾಂಕರ್‌ಗಳಲ್ಲಿ ತಂದಿದ್ದ ಕರಾವಳಿಯ ಎರಡೂವರೆ ಸಾವಿರ ಲೀಟರ್‌ ನೀರು ಕೆಲವೆಡೆ ಖಾಲಿಯಾಗಿದ್ದು, ಪರಿಚಾರಕರು ಶುದ್ಧ ಬಾಟಲ್‌ ನೀರನ್ನು ಪಾತ್ರೆಗಳಿಗೆ ತುಂಬಿ ಕೋಣಗಳಿಗೆ ಕುಡಿಸಿದ್ದಾರೆ. ಕುಡು, ಹುರುಳಿ, ಬೈಹುಲ್ಲುಗಳಿಗೆ ಕೊರತೆಯಾಗಿಲ್ಲ.

ಎಲ್ಲ ಕೋಣದ ಮಾಲೀಕರಿಗೂ ಅಭಿನಂದನೆ: ಬೆಂಗಳೂರು ಕಂಬಳ ಸಮಿತಿಯು ಹಮ್ಮಿಕೊಂಡಿದ್ದ ನಮ್ಮ ಬೆಂಗಳೂರು ಕಂಬಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಮ್ಮ ಕರೆಯೋಲೆಗೆ ಓಗೊಟ್ಟು ಕಂಬಳದಲ್ಲಿ ಭಾಗವಹಿಸಿದ ಎಲ್ಲ ಕೋಣಗಳ ಮಾಲೀ ಕರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಕಂಬಳದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಖುಷಿ ಇದೆ. ಎಲ್ಲರ ಸಹಕಾರದಿಂದ ಈ ಕಂಬಳ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಕಂಬಳ ನೋಡಲು ಬಂದವರ ಉತ್ಸಾಹ ಕಂಡು ಸಂತಸವಾಯಿತು ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕೆ.ಎಸ್‌. ಅಶೋಕ್‌ ಕುಮಾರ್‌ರೈ ಅಭಿಪ್ರಾಯಪಟ್ಟರು

ಬೆಂಗಳೂರು ಕಂಬಳ ಸುಸಜ್ಜಿತವಾಗಿತ್ತು. ಲಕ್ಷಾಂತರ ಜನರು ಚಪ್ಪಾಳೆ, ಶಿಳ್ಳೆಗಳ ಮೂಲಕ ಕೊಟ್ಟ ಪ್ರೋತ್ಸಾಹ ಅಚ್ಚರಿ ಮೂಡಿಸಿತು. ನಾನು ನೂರಾರು ಕಂಬಳಗಳಲ್ಲಿ ಭಾಗವಹಿಸಿದ್ದರೂ ಇಷ್ಟೊಂದು ಜನ ಸೇರಿಸುವುದನ್ನು ನೋಡಿರಲಿಲ್ಲ. ಧನಂಜಯ್‌, ಮಿಜಾರು ಶಕ್ತಿ ಪ್ರಸಾದ್‌ ಶೆಟ್ಟಿ ಕೋಣಗಳ ಪರಿಚಾರಕ.

ತುಳುನಾಡಿನಿಂದ ಬೆಂಗಳೂರಿಗೆ ಬಂದು 2 ದಿನಗಳ ಕಾಲ ಕೋಣಗಳೊಂದಿಗೆ ಕಳೆದಿರು ವುದು ಹೊಸ ಅನುಭವ ನೀಡಿದೆ. ಕೋಣಗಳಿಗೆ ಕೊಂಚ ಸುಸ್ತಾಗಿರುವುದು ಹೊರತುಪಡಿಸಿದರೆ ಬೇರೆ ಸಮಸ್ಯೆ ಇಲ್ಲ. ಅನಿಲ್‌, ಕುದ್ರಿಪದವು ಪ್ರವೀಣ್‌ ಕುಮಾರ್‌ ಕೋಣಗಳ ಮೇಲ್ವಿಚಾರಕ.

ಬೆಂಗಳೂರಿಗರ ಉತ್ಸಾಹ ನೋಡಿದರೆ 6 ತಿಂಗಳಿಗೊಮ್ಮೆ ಕಂಬಳ ಮಾಡಬಹುದು. ಆರಂಭದಲ್ಲಿ ಕೋಣಗಳು ಸೂಕ್ತವಾಗಿ ಸ್ಪಂದಿಸುತ್ತ ವೆಯೇ ಎಂಬ ಬಗ್ಗೆ ಕೊಂಚ ಆತಂಕವಿತ್ತು. ಸೋಮವಾರ ಬೆಳಗ್ಗೆ ಊರಿಗೆ ಪ್ರಯಾಣಿಸುತ್ತೇವೆ. ಗಣೇಶ್‌, ನರಿಂಗಾನದ ಸುಧಾಕರ್‌ ಆಳ್ವ ಮೋರ್ಲರ ಕೋಣಗಳ ಪರಿಚಾರಕ.

ಬೆಂಗಳೂರು ಕಂಬಳಕ್ಕೆ ಜನರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದೆ. ಸಂಚಾರ ದಟ್ಟಣೆ, ಮಾರ್ಗಮಧ್ಯೆ ಕೋಣಗಳು ತುಂಬಿರುವ ಲಾರಿ ಗಳಿಗೂ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿದ್ದೇವೆ. ಕೋಣದ ಮಾಲೀಕರಲ್ಲಿ ಮಂದಹಾಸ ಮೂಡಿದೆ. ಮುರಳೀಧರ್‌ ರೈ ಮಠಂತಬೆಟ್ಟು, ಕಾರ್ಯಧ್ಯಕ್ಷ, ಬೆಂಗಳೂರು ಕಂಬಳ ಸಮಿತಿ.

-ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

CM Siddu

Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ

Result: ಇಂದು ಯುಜಿನೀಟ್‌ ಪರಿಷ್ಕೃತ ತಾತ್ಕಾಲಿಕ ಫ‌ಲಿತಾಂಶ ಪ್ರಕಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.