Deepfake Video: ನಟಿ ಆಲಿಯಾ ಭಟ್ ಆಶ್ಲೀಲ ಸನ್ನೆಯ ವಿಡಿಯೋ ವೈರಲ್
Team Udayavani, Nov 27, 2023, 11:43 AM IST
ಮುಂಬಯಿ: ಸಿನಿರಂಗದಲ್ಲಿ ಕಳೆದ ಕೆಲ ದಿನಗಳ ಹಿಂದೆ ಸಂಚಲನ ಸೃಷ್ಟಿಸಿರುವ ಡೀಪ್ ಫೇಕ್ ವಿಡಿಯೋ ವಿಚಾರದಲ್ಲಿ ಇದೀಗ ಮತ್ತೊಬ್ಬ ಸ್ಟಾರ್ ನಟಿಯ ಹೆಸರು ಕೇಳಿ ಬಂದಿದೆ. ಬಾಲಿವುಡ್ ನಟಿಯೊಬ್ಬರ ಡೀಪ್ ಫೇಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಬಳಸಿ ಸೋಶಿಯಲ್ ಮೀಡಿಯಾ ಪ್ರಭಾವಿ ಝಾರಾ ಪಟೇಲ್ ಅವರ ಅಸಲಿ ವಿಡಿಯೋಗೆ ಜೋಡಿಸಲಾಗಿತ್ತು. ಇದಾದ ಬಳಿಕ ನಟಿ ಕತ್ರಿನಾ ಕೈಫ್ ಅವರ ಮುಖವನ್ನು ಬೇರೊಬ್ಬರ ವಿಡಿಯೋಗೆ ಬಳಸಿ ಆಶ್ಲೀಲವಾಗಿ ಡೀಪ್ ಫೇಕ್ ಮಾಡಲಾಗಿತ್ತು.
ನಟಿ ಕಾಜೋಲ್ ಕೂಡ ಡೀಪ್ ಫೇಕ್ ಗೆ ಗುರಿಯಾಗಿದ್ದರು. ಇದೀಗ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅವರ ಮುಖವನ್ನು ಬಳಸಿ ಡೀಪ್ ಫೇಕ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ
ಬೆಡ್ ಮೇಲೆ ಸಣ್ಣ ಬಟ್ಟೆಯನ್ನು ಧರಿಸಿಕೊಂಡಿರುವ ಹುಡುಗಿಯೊಬ್ಬಳು ಆಶ್ಲೀಲವಾಗಿ ತನ್ನ ದೇಹದ ಪ್ರದರ್ಶನ ಮಾಡುತ್ತಿದ್ದಾಳೆ. ಹಿನ್ನೆಲೆಯಲ್ಲಿ ಹಾಡೊಂದು ಪ್ಲೇ ಆಗಿದೆ. ಆಶ್ಲೀಲ ಸನ್ನೆಯನ್ನು ತೋರಿಸುತ್ತಿರುವ ಯುವತಿಯ ವಿಡಿಯೋಗೆ ನಟಿ ಆಲಿಯಾ ಭಟ್ ಅವರ ಫೋಟೋವನ್ನು ಜೋಡಿಸಿ ಡೀಪ್ ಫೇಕ್ ಮಾಡಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು ಜಾರಿ ಮಾಡುವುದೆಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.