National Highway: ಶಾಲೆಗೆ ಹೋಗಲು ಮಕ್ಕಳಿಗೆ ಹೆದ್ದಾರಿಯೇ ಕಂಟಕ
Team Udayavani, Nov 27, 2023, 1:49 PM IST
ದೇವನಹಳ್ಳಿ: ಸರ್ಕಾರ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡುತ್ತಿದೆ. ಆದರೆ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಹೋಗಿ ಬರುತ್ತಿರುದ್ದಾರೆ. ಈ ಮಧ್ಯೆ, ವಿದ್ಯಾರ್ಥಿಗಳಿಗೆ ಹೆದ್ದಾರಿಯೇ ಕಂಟಕವಾಗಿ ಪರಿಣಮಿಸಿದೆ.
ಕ್ರಮ ಕೈಗೊಂಡಿಲ್ಲ: ವಿಶ್ವನಾಥಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಕರ್ನಾಟಕ ಪಬ್ಲಿಕ್ ಶಾಲೆಗೆ ದಿನನಿತ್ಯ ವಿದ್ಯಾರ್ಥಿಗಳು ನಡೆ ದುಕೊಂಡು ಸೈಕಲ್ ಮೂಲಕ ಹೋಗಿ ಬರುತ್ತಾರೆ. ಆದರೆ, ಶಾಲೆಗೆ ಹೋಗು ವಾಗ ಮತ್ತು ಶಾಲೆ ಬಿಟ್ಟ ನಂತರ ರಾಷ್ಟ್ರೀಯ ಹೆದ್ದಾರಿಯ ರಸ್ತೆ ದಾಟಲು ವಿದ್ಯಾರ್ಥಿಗಳು ತೀವ್ರ ಪರದಾಡು ತ್ತಿದ್ದಾರೆ.
ಇಲ್ಲೊಂದು ಅಂಡರ್ ಪಾಸ್ ನಿರ್ಮಿಸಿ ಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೆ, ಸ್ಪಂದಿಸಿಲ್ಲ. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಶಾಲಾ ಮಕ್ಕಳ ಪ್ರಾಣದ ಜತೆ ಹೈವೇ ಪ್ರಾಧಿಕಾರ ಚೆಲ್ಲಾಟವಾಡುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಅಂಡರ್‌ಪಾಸ್ ನಿರ್ಮಿಸಿ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಕರ್ನಾಟಕ ಪಬ್ಲಿಕ್ ಶಾಲೆ ಇರುವುದ ರಿಂದ ಅಂಡರ್ ಪಾಸ್ ಮತ್ತು ಸ್ಕೈ ವಾಕ್ ಮತ್ತು ಸರ್ವಿಸ್ ರಸ್ತೆ ನಿರ್ಮಿಸಿ ಕೊಡ ಬೇಕು. ಶಾಲಾ ವಿದ್ಯಾ ರ್ಥಿಗಳ ವಿದ್ಯಾ ಭ್ಯಾ ಸಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು. ಸರ್ಕಾರ ಶೈಕ್ಷಣಿಕ ಪ್ರಗತಿಗೆ ಕೋಟ್ಯಂತರ ರೂ.ವ್ಯಯ ಮಾಡುತ್ತಿದೆ. ಈ ಮಧ್ಯೆ ವಿದ್ಯಾ ರ್ಥಿಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಅಂಡರ್ ಪಾಸ್ ಮಾಡಿಕೊಡುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಕೂಡಲೇ ಅಂಡರ್ ಪಾಸ್ ನಿರ್ಮಾಣ ಮಾಡಬೇಕು.
ರಸ್ತೆ ದಾಟಲು ಪ್ರಯಾಸ: ರಾಷ್ಟ್ರೀಯ ಹೆದ್ದಾರಿ 207 ಆಗಿರುವುದರಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ನೆಲಮಂಗಲ, ದಾಬಸ್ ಪೇಟೆ, ತುಮಕೂರು ಇತರೆ ಕಡೆಗಳಿಗೆ ಹಾಗೂ ಸೂಲಿಬೆಲೆ, ದೇವನಹಳ್ಳಿ ,ಹೊಸಕೋಟೆ, ಹೊಸೂರು ರಸ್ತೆ ಆಗಿರುವುದರಿಂದ ಭಾರೀ ವಾಹನಗಳು ಸಂಚರಿಸುತ್ತಿವೆ. ವಾಹನ ದಟ್ಟಣೆ ಹೆಚ್ಚಿರುವುದರಿಂದ ವಿದ್ಯಾರ್ಥಿಗಳು ರಸ್ತೆ ದಾಟಲು ಪ್ರಯಾಸಪಡಬೇಕಿದೆ.
ಗ್ರಾಮಸ್ಥರು ಹೇಳಿದ್ದೇನು?: ವಿಶ್ವನಾಥಪುರ, ದಿನ್ನೇ ಸೋಲೂರು, ಬ್ಯಾಡರಹಳ್ಳಿ, ಶ್ಯಾನಪ್ಪನಹಳ್ಳಿ, ಕೊಯಿರಾ ಹೊಸೂರು, ಕುಂದಾಣ, ಚಪ್ಪರದ ಕಲ್ಲು ಸೇರಿದಂತೆ ವಿವಿಧ ಕಡೆಗಳಿಂದ ಗ್ರಾಮದ ರೈತರು ವಿದ್ಯಾರ್ಥಿಗಳು ದಿನವು ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಬಂದು ಇತರ ಪ್ರದೇಶಗಳಿಗೆ ಹೋಗುತ್ತಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಮತ್ತು ಇತರೆ ಸಂಪರ್ಕ ಗ್ರಾಮ ರಸ್ತೆಗಳಿಗೆ ಹೋಗಿ ಬರಲು ಇಲ್ಲೊಂದು ಅಂಡರ್ ಪಾಸ್ ಶೀಘ್ರವಾಗಿ ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಡೆದುಕೊಂಡು ಬಂದರೆ ಹೆದ್ದಾರಿ ದಾಟಲು ಭಯವಾಗುತ್ತದೆ. ಹೀಗಾಗಿ ಸೈಕಲ್‌ನಲ್ಲಿ ಸುತ್ತು ಹಾಕಿಕೊಂಡು ಶಾಲೆಗೆ ಹೋಗಬೇಕು. ಅಂಡರ್ ಪಾಸ್ ನಿರ್ಮಿಸಿದರೆ ಗ್ರಾಮಗಳ ನೂರಾರು ಜನರಿಗೆ ಅನುಕೂಲವಾಗುತ್ತದೆ. ಕೂಗಳತೆ ದೂರದ ಗೀತಂ ಯೂನಿವರ್ಸಿಟಿ ಕಾಲೇಜಿನ ಮುಂದೆ ದೊಡ್ಡದಾದ ಅಂಡರ್ ಪಾಸ್ ಆಗಿದೆ. ಸರ್ಕಾರಿ ಶಾಲೆ ಎಂದು ಕಡೆಗಣಿಸುತ್ತಿರುವುದು ಎಷ್ಟು ಮಟ್ಟಿಗೆ ಸರಿ?. – ರಾಧಿಕಾ, ವಿದ್ಯಾರ್ಥಿನಿ
ರಾಷ್ಟ್ರೀಯ ಹೆದ್ದಾರಿ 207 ಆಗಿರುವುದರಿಂದ ಅಪಘಾತಕ್ಕೆ ಆಹ್ವಾನ ಮಾಡಿಕೊಟ್ಟಂತಾಗಿದೆ. ಅಂಡರ್ ಪಾಸ್ ಇಲ್ಲದಿರುವುದರಿಂದ 1.5 ಕಿ ಮೀಟರ್ ಬದಲಿಗೆ 16 ಕಿ.ಮೀ. ಸುತ್ತಿ ಬಳಸಿ ಹೋಗುವಂತೆ ಆಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. –ಪುನೀತ್, ವಿಶ್ವನಾಥಪುರ ಗ್ರಾಮಸ್ಥ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.