ಒಂದು ಸಿನಿಮಾ 5 ಗಂಟೆ 19 ನಿಮಿಷನಾ.! ದೀರ್ಘ ಅವಧಿಯ ಬಿಟೌನ್‌ ನ 7 ಸಿನಿಮಾಗಳಿವು..

ಸಿನಿಮಾ ಎರಡೂವರೆ ಗಂಟೆಗಿಂತ ಜಾಸ್ತಿ ಇದ್ದರೂ ಪ್ರೇಕ್ಷಕರು ತಾಳ್ಮೆ ಕಳೆದುಕೊಳ್ಳುತ್ತಾರೆ.

ಸುಹಾನ್ ಶೇಕ್, Nov 28, 2023, 4:00 PM IST

ಒಂದು ಸಿನಿಮಾ 5 ಗಂಟೆ 19 ನಿಮಿಷನಾ.! ದೀರ್ಘ ಅವಧಿಯ ಬಿಟೌನ್‌ ನ 7 ಸಿನಿಮಾಗಳಿವು..

ರಣ್ಬೀರ್‌ ಕಪೂರ್‌ ಅಭಿನಯದ ʼಅನಿಮಲ್‌ʼ ಸಿನಿಮಾ ಇದೇ ಡಿ.1 ರಂದು ರಿಲೀಸ್‌ ಆಗಲಿದೆ. ಸಿನಿಮಾದ ಟ್ರೇಲರ್‌ ಗಮನ ಸೆಳೆದಿದ್ದು, ಸಿನಿಮಾದ ರನ್‌ ಟೈಮ್‌ ಕೆಲವರಿಗೆ ಶಾಕ್‌ ನೀಡಿದೆ. ಸಿನಿಮಾ ಬರೋಬ್ಬರಿ 3:21 ನಿಮಿಷವಿರಲಿದೆ ಎಂದು ಚಿತ್ರತಂಡ ರಿವೀಲ್‌ ಮಾಡಿದೆ.

ಒಂದು ಸಿನಿಮಾ ಎರಡೂವರೆ ಗಂಟೆಗಿಂತ ಜಾಸ್ತಿ ಇದ್ದರೂ ಪ್ರೇಕ್ಷಕರು ತಾಳ್ಮೆ ಕಳೆದುಕೊಳ್ಳುತ್ತಾರೆ. ಇದರ ಜೊತೆ ಕೆಲವೊಮ್ಮೆ ಸಿನಿಮಾ ಚೆನ್ನಾಗಿಲ್ಲ ಎಂದು ಅರ್ಧದಲ್ಲೇ ಥಿಯೇಟರ್‌ ನಿಂದ ಜನ ವಾಪಾಸ್‌ ಬರುತ್ತಾರೆ. ಬಾಲಿವುಡ್‌ ನಲ್ಲಿ ಒಂದು ಸಿನಿಮಾ 3 ಗಂಟೆಗಿಂತ ಹೆಚ್ಚಿನ ಅವಧಿ ಹೊಂದಿರುವುದು ಇದೇ  ಮೊದಲಲ್ಲ. ಸುದೀರ್ಘ ಅವಧಿ ಹೊಂದಿರುವ ಬಾಲಿವುಡ್ ನ 7 ಸಿನಿಮಾಗಳ ಪಟ್ಟಿ ಇಲ್ಲಿದೆ.

ಜೋಧಾ ಅಕ್ಬರ್: (2008): ಅಶುತೋಷ್ ಗೋವಾರಿಕರ್ ನಿರ್ದೇಶನದ ಈ ಸಿನಿಮಾ ಐತಿಹಾಸಿಕ ಕಥೆಯನ್ನೊಳಗೊಂಡಿದ್ದು, ಮೊಘಲ್ ಚಕ್ರವರ್ತಿ ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್ ಮತ್ತು ರಜಪೂತ ರಾಜಕುಮಾರಿ ಜೋಧಾ ನಡುವಿನ ಪ್ರೇಮಕಥೆಯನ್ನು ಹೇಳುತ್ತದೆ. ಸಿನಿಮಾದ ಮೇಕಿಂಗ್‌ ರಿಚ್‌ ಆಗಿ ಮೂಡಿಬಂದಿದ್ದು,16 ನೇ ಶತಮಾನದ ಕಥೆಯ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಇದರ ಅವಧಿಯನ್ನು ನೋಡಿ ಬೆರಗಾದರು. 3 ಗಂಟೆ 34 ನಿಮಿಷ ಈ ಸಿನಿಮಾದ ರನ್‌ ಟೈಮ್‌ ಆಗಿತ್ತು. ಹೃತಿಕ್ ರೋಷನ್ , ಐಶ್ವರ್ಯಾ ರೈ, ಸೂನ್‌ ಸೂದ್‌ ಮುಂತಾದವರು ನಟಿಸಿದ್ದರು.

ಕಭಿ ಅಲ್ವಿದಾ ನಾ ಕೆಹನಾ (2006): ಶಾರುಖ್‌ ಖಾನ್‌ ಅವರ ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ  ಈ ಸಿನಿಮಾ ಕೂಡ ಹಿಟ್‌ ಸಾಲಿಗೆ ಸೇರಿದೆ. ಕರಣ್‌ ಜೋಹರ್‌ ನಿರ್ದೇಶನದ ʼಕಭಿ ಅಲ್ವಿದಾ ನಾ ಕೆಹನಾʼ ಸಿನಿಮಾ ಸ್ನೇಹ ಹಾಗೂ ಪ್ರೀತಿಯ ಬಂಧವನ್ನು ಹೇಳುತ್ತದೆ. ಸಿನಿಮಾದ ಕಥೆ ಫೀಲ್‌ ಗುಡ್‌ ಆಗಿ ಸಾಗುತ್ತದೆ. ಆದರೆ 3 ಗಂಟೆ 35 ನಿಮಿಷದವರೆಗೂ ಪ್ರೇಕ್ಷಕರು ಥಿಯೇಟರ್‌ ನಲ್ಲಿ ಕೂರಿಸುವಂತೆ ಮಾಡುತ್ತದೆ. ಶಾರುಖ್‌ ಖಾನ್, ರಾಣಿ ಮುಖರ್ಜಿ ಜೊತೆ ಅಭಿಷೇಕ್ ಬಚ್ಚನ್, ಪ್ರೀತಿ ಜಿಂಟಾ, ಮತ್ತು ಅಮಿತಾಭ್ ಬಚ್ಚನ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ.

ಸಲಾಮ್-ಇ-ಇಷ್ಕ್: ಎ ಟ್ರಿಬ್ಯೂಟ್ ಟು ಲವ್: (2007): ನಿಖಿಲ್ ಅಡ್ವಾಣಿ ನಿರ್ದೇಶನದ ಈ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌, ಜೂಹಿ ಚಾವ್ಲಾ ಜೊತೆ ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ, ಆಯೇಶಾ ಟಾಕಿಯಾ ಜೊತೆ ಅಕ್ಷಯ್ ಖನ್ನಾ, ವಿದ್ಯಾ ಬಾಲನ್ ಜೊತೆ ಜಾನ್ ಅಬ್ರಹಾಂ, ಗೋವಿಂದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರು ಜೋಡಿಗಳ ಸಂಬಂಧದ ಸವಾಲುಗಳನ್ನು ತೋರಿಸಿರುವ ಚಿತ್ರದ ಪ್ರೇಕ್ಷರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಸಿನಿಮಾದ ರನ್‌ ಟೈಮ್ 3ಗಂಟೆ 36 ನಿಮಿಷ ಆಗಿತ್ತು.

ಮೊಹಬ್ಬತೇನ್ (2000) : ಶಾರುಖ್‌ ಖಾನ್‌ ಸಿನಿ ಕೆರಿಯರ್‌ ನಲ್ಲಿ ರೊಮ್ಯಾಂಟಿಕ್‌ ಹಿಟ್‌ ಕೊಟ್ಟ ಸಿನಿಮಾಗಳಲ್ಲಿ ʼ ಮೊಹಬ್ಬತೇನ್ʼ ಸಿನಿಮಾ ಕೂಡ ಒಂದು. ಗುರುಕುಲದಲ್ಲಿ ಹುಟ್ಟುವ ಸಿನಿಮಾದ ಕಥೆ ಅಂದಿನ ಕಾಲದಲ್ಲಿ ಪ್ರೇಕ್ಷಕರ ಮನಗೆದ್ದಿತ್ತು. ಲವ್‌ ಸ್ಟೋರಿ ಸಿನಿಮಾವಾಗಿ ಬಾಲಿವುಡ್‌ ನಲ್ಲಿ ʼ ಮೊಹಬ್ಬತೇನ್ʼ ಇಂದಿಗೂ ಎವರ್‌ ಗ್ರೀನ್‌ ಸಿನಿಮಾವಾಗಿದೆ. ಆದಿತ್ಯ ಚೋಪ್ರಾ ನಿರ್ದೇಶನದ ಈ ಸಿನಿಮಾದ ರನ್‌ ಟೈಮ್‌ 3 ಗಂಟೆ 36 ನಿಮಿಷ ಇತ್ತು. ಆದರೂ ಥಿಯೇಟರ್‌ ನಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.

ಲಗಾನ್: ಒನ್ಸ್ ಅಪಾನ್ ಎ ಟೈಮ್ ಇನ್ ಇಂಡಿಯಾ: (2001): ಆಮಿರ್‌ ಖಾನ್‌ ಕೆರಿಯರ್‌ ನಲ್ಲಿ ಬಿಗ್‌ ಹಿಟ್‌ ಕೊಟ್ಟ ಹಾಗೂ ಕ್ರಿಕೆಟ್ ಕಥಾಹಂದರದ ಸಿನಿಮಾವಾಗಿ ಹಿಟ್‌ ಕೊಟ್ಟ ಸಿನಿಮಾಗಳಲ್ಲಿ ಎವರ್‌ ಗ್ರೀನ್‌ ಆಗಿ ನಿಲ್ಲು ʼಲಗಾನ್‌ʼ ಸಿನಿಮಾವನ್ನು ಅಶುತೋಷ್ ಗೋವಾರಿಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಹಿಟ್‌ ಜೊತೆಗೆ ಆಸ್ಕರ್‌ ಗೆ ಹೋಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಸಿನಿಮಾದ ಅವಧಿ ನಿಜವಾಗಿಯೂ ಕ್ರಿಕೆಟ್‌ ಮ್ಯಾಚ್‌ ನ ಅವಧಿಯಂತೆ ದೀರ್ಘವಾಗಿತ್ತು. 3 ಗಂಟೆ 44 ನಿಮಿಷ ಸಿನಿಮಾದ ಅವಧಿ ಇತ್ತು.

ಮೇರಾ ನಾಮ್ ಜೋಕರ್: (1970) : ರಾಜ್‌ ಕಪೂರ್‌ ಅವರ ವೃತ್ತಿ ಬದುಕಿನಲ್ಲಿ ಈ ಸಿನಿಮಾ ವಿಶೇಷ ಸಿನಿಮಾ. ಡ್ರೀಮ್‌ ಪ್ರಾಜೆಕ್ಟ್‌ ಸಿನಿಮಾವಾಗಿತ್ತು. ಆದರೆ ಅಂದುಕೊಂಡ ಮಟ್ಟಿಗೆ ಸಿನಿಮಾ ಕ್ಲಿಕ್‌ ಆಗಿಲ್ಲ. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೂ ಇದೊಂದು ಇದು ಬರೀ ಸಿನಿಮಾವಲ್ಲ ಒಂದು ಎಮೋಷನ್‌ ಎನ್ನುವುದು ಇಂದಿಗೂ ಅನೇಕರ ಅಭಿಪ್ರಾಯ. ಸಿನಿಮಾ ರಿಲೀಸ್‌ ವೇಳೆ ರಾಜ್‌ ಕಪೂರ್‌  ಅವರ ಅಭಿನಯಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಆ ವೇಳೆ ಸಿನಿಮಾದ ಅವಧಿ ಬಗ್ಗೆಯೂ ಸುದ್ದಿಯಾಗಿತ್ತು. 4 ಗಂಟೆ 4 ನಿಮಿಷ ಅವಧಿಯನ್ನು ಹೊಂದಿದ್ದ ʼಮೇರಾ ನಾಮ್‌ ಜೋಕರ್‌ʼ ಬಹುಶಃ ಇಂದಿನ ಕಾಲದಲ್ಲಿ ಬಿಡುಗಡೆ ಆಗಿದ್ದರೆ, ಅದರ ರನ್‌ ಟೈಮ್‌ ಕಾರಣದಿಂದ ಒಂದು ವೆಬ್‌ ಸಿರೀಸ್‌ ಆಗಿ ರಿಲೀಸ್‌ ಆಗುತ್ತಿತ್ತೋ ಏನೋ.

ಗ್ಯಾಂಗ್ಸ್ ಆಫ್ ವಾಸೇಪುರ್: (2012):  ಅನುರಾಗ್‌ ಕಶ್ಯಪ್‌ ಅವರ ಕ್ರೈಮ್‌ ಡ್ರಾಮಾ ʼ ಗ್ಯಾಂಗ್ಸ್ ಆಫ್ ವಾಸೇಪುರ್ʼ ಸಿನಿಮಾ ಲವ್‌, ರೊಮ್ಯಾನ್ಸ್‌, ಕ್ರೈಮ್‌ ಹೀಗೆ ಎಲ್ಲಾ ಆಯಾಮದಲ್ಲೂ ಸಾಗುವ ಸಿನಿಮಾ. ಕ್ರೈಮ್‌ ನ್ನು ತುಸು ಹೆಚ್ಚಾಗಿಯೇ ಸಿನಿಮಾದಲ್ಲಿ ತೋರಿಸಲಾಗಿದೆ.  ಎರಡು ಭಾಗಗದಲ್ಲಿ ತೆರೆಕಂಡ ಸಿನಿಮಾದ ಹಿಂದಿನ ಅಸಲಿ ಕಹಾನಿಯೇ ಬೇರೆ. ನಿರ್ದೇಶಕ ಅನುರಾಗ್‌ ಕಶ್ಯಪ್‌ ಮೊದಲು ʼ ಗ್ಯಾಂಗ್ಸ್ ಆಫ್ ವಾಸೇಪುರ್ʼ ಸಿನಿಮಾವನ್ನು ಒಂದೇ ಪಾರ್ಟ್‌ ನಲ್ಲಿ ರಿಲೀಸ್‌ ಮಾಡುವವರಿದ್ದರು. ಆದರೆ ಅದರ ಅವಧಿ ಕೇಳಿ ಥಿಯೇಟರ್‌ ಮಾಲಕರು ಸಿನಿಮಾವನ್ನು ರಿಲೀಸ್‌ ಮಾಡಲು ಮುಂದೆ ಬರಲಿಲ್ಲ. ಮೊದಲು ಈ ಸಿನಿಮಾದ ಅವಧಿ 5 ಗಂಟೆ 19 ನಿಮಿಷ ಇತ್ತು. ಥಿಯೇಟರ್‌ ಮಾಲಕರು ಇಷ್ಟು ದೀರ್ಘ ರನ್‌ ಟೈಮ್‌ ಇರುವ ಸಿನಿಮಾವನ್ನು ರಿಲೀಸ್‌ ಮಾಡಲು ಒಪ್ಪದಿದ್ದಾಗ, ಅನಿವಾರ್ಯವಾಗಿ ಅನುರಾಗ್‌ ಎರಡು ಭಾಗಗಳಾಗಿ ಸಿನಿಮಾವನ್ನು ರಿಲೀಸ್‌ ಮಾಡುವ ಯೋಜನೆಯನ್ನು ಹಾಕಿಕೊಂಡರು.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.