Divya Uruduga – Aravind KP; ‘ಅರ್ಧಂಬರ್ಧ ಲವ್ ಸ್ಟೋರಿ’ ಡಿ.1ರಂದು ರಿಲೀಸ್
Team Udayavani, Nov 28, 2023, 2:35 PM IST
ಬಿಗ್‌ಬಾಸ್ ಮೂಲಕ ಒಂದಾದ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ನಟಿಸಿರುವ “ಅರ್ಧಂಬರ್ಧ ಪ್ರೇಮಕಥೆ’ ಚಿತ್ರ ಡಿಸೆಂಬರ್ 1ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಅರವಿಂದ್ ಕೌಶಿಕ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಟ್ರೇಲರ್ ರಿಲೀಸ್ ವೇಳೆ ಮಾತನಾಡಿದ ಅರವಿಂದ್ ಕೌಶಿಕ್, “ಇದೊಂದು ಲವ್ ಸ್ಟೋರಿ. ಆದರೆ ರೆಗ್ಯುಲರ್ ಶೈಲಿ ಬಿಟ್ಟ ಕಥೆ. ನಾಯಕ, ನಾಯಕಿ ಇಬ್ಬರೂ ಒಂದಾಗಬೇಕು ಅನ್ನೋದೇ ನೋಡುಗರ ಆಸೆಯಾಗಿರುತ್ತೆ, ಅವರು ಒಂದಾಗ್ತಾರಾ, ಇಲ್ವಾ ಅಂತ ಹೇಳ್ಳೋದೇ ಈ ಚಿತ್ರ. ಲವ್ ಅನ್ನೋದೆಲ್ಲ ಪುಸ್ತಕದ ಬದನೇ ಕಾಯಿ ಅಂತ ಯಾವ ಪಾತ್ರ ಹೇಳುತ್ತೆ, ಕೊನೆಗೂ ಅವರು ಪ್ರೀತಿಯನ್ನು ನಂಬುತ್ತಾರಾ, ಇಲ್ವಾ ಅನ್ನೋದೇ ಸಿನಿಮಾ. ಪ್ರೀತಿ ನಮ್ಮ ಕನಸುಗಳ ಜೊತೆಗೇ ಬೆಳೆಯುತ್ತದೆ. ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದನ್ನು ಉಳಿಸಿಕೊಳ್ಳೋದು ಕಷ್ಟ. ಕಳೆದ 48 ಗಂಟೆಗಳಲ್ಲಿ ನಾನು 6 ಸಲ ಸಿನಿಮಾನ ನೋಡಿದ್ದೇನೆ. ಕ್ಲೈಮ್ಯಾಕ್ಸ್ ನೋಡಿ ಸ್ವತಃ ನನ್ನ ಕಣ್ಣಲ್ಲೂ ನೀರು ಬಂತು’ ಎಂದು ಚಿತ್ರದ ಬಗ್ಗೆ ಹೇಳಿದರು.
ನಾಯಕ ಅರವಿಂದ್ ಕೆಪಿ. “ಈ ಚಿತ್ರದಲ್ಲಿ ನಾವಿಬ್ಬರೂ ಪ್ರೇಮಿಗಳೇ ಅಲ್ಲ, ಹಾಗಾಗಿ ಐ ಲವ್ ಯೂ ಹೇಳುವ ಪ್ರಮೇಯವೂ ಬರಲ್ಲ, ಅದೇ ಕಾರಣದಿಂದ ಚಿತ್ರಕ್ಕೆ ಅರ್ಧಂಬರ್ಧ ಪ್ರೇಮಕಥೆ ಟೈಟಲ್ ಇಟ್ಟಿರೋದು’ ಎಂದು ಹೇಳಿದರು,
ನಾಯಕಿ ದಿವ್ಯಾ ಮಾತನಾಡಿ “ಈ ಚಿತ್ರ ನನಗೆ ಸಿಕ್ಕಾಪಟ್ಟೆ ಸ್ಪೆಷಲ್. ಏಕೆಂದರೆ ನಿರ್ದೇಶಕ ಅರವಿಂದ್ ಕೌಶಿಕ್ ಜೊತೆ ಎರಡನೇ ಬಾರಿಗೆ ಕೆಲಸ ಮಾಡಿರೋದು. ಅಲ್ಲದೆ ಕೆಪಿ ಜೊತೆ ಸ್ಕ್ರೀನ್ ಶೇರ್ ಮಾಡಿರೋದು. ಕಥೆ ಕೇಳುವಾಗ ನಾನು ಕೆಪಿ ಜೊತೆ ನಟಿಸುತ್ತೇನೆ ಎಂಬ ಮಾಡುತ್ತೇನೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ, ರಿಯಲ್ ಲೈಫ್ನಲ್ಲಿ ನಾನು ಹೇಗಿದ್ದೆನೋ, ಅದಕ್ಕೆ ತದ್ವಿರುದ್ಧವಾದ ಪಾತ್ರ ಚಿತ್ರದಲ್ಲಿದೆ. ಲೈಫ್ ಪ್ರಾಬ್ಲಿಂಗಳನ್ನು ತುಂಬಾ ಹಚ್ಚಿಕೊಳ್ಳುವ ಹುಡುಗಿ. ಆಕೆ ನೋಡಲು ಸ್ವಲ್ಪ ಮುಂಗೋಪಿಯಾದರೂ, ಆಕೆಯ ಮನಸು ಹೂವಿನಂಥದ್ದು, ಜನ ಆಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲ್ಲ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಬಕ್ಸಸ್ ಮೀಡಿಯಾದ ಕಾರ್ತಿಕ್ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.