Arakalgudu: ದುರಸ್ತಿ ಕಾಣದ ತೂಗು ಸೇತುವೆ


Team Udayavani, Nov 28, 2023, 4:29 PM IST

Arakalgudu: ದುರಸ್ತಿ ಕಾಣದ ತೂಗು ಸೇತುವೆ

ಅರಕಲಗೂಡು: ತಾಲೂಕಿನ ಕೊಣನೂರು ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ನಿರ್ವಣೆ ಇಲ್ಲದೆ ಅವಸಾನದ ಅಂಚಿಗೆ ತಲುಪಿದೆ. ಜಿ

ಪಂ ವ್ಯಾಪ್ತಿಗೆ ಒಳಪಡುವ ತೂಗುಸೇತುವೆ ಕಾಮಗಾರಿಯನ್ನು 1999-2000ನೇ ಸಾಲಿನಲ್ಲಿ ಅಂದಾಜು 30ಲಕ್ಷರು ವ್ಯಯಮಾಡಿ 196.0 ಮೀ. ಉದ್ದ ಹಾಗೂ 1.20 ಮೀ. ಅಳತೆಯಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಕೊಣನೂರು ಮತ್ತು ಕಟ್ಟೇಪುರ ನಡುವಿನ ಸಂಪರ್ಕಕ್ಕೆ ಕೇವಲ ಎರಡು ಕಿ.ಮೀ. ಇದೆ.ಆದರೆ ಬಸ್‌ ಮಾರ್ಗದಲ್ಲಿ ಈ ಗ್ರಾಮಕ್ಕೆ ಹೋಗಬೇಕಾದರೇ 10ಕಿಮೀ ದೂರ ಸುತ್ತಿ ಹೋಗಬೇಕು. ಇಷ್ಟು ಅನಿವಾರ್ಯ ಹಾಗೂ ಉಪಯುಕ್ತವಿರುವ ತೂಗುಸೇತುವೆ ಮಾರ್ಗದ ಭದ್ರತೆಯಲ್ಲಿ ಇಲಾಖೆ ಎಡವಿದೆ.

ಜಿಲ್ಲೆ ಮಟ್ಟಿಗೆ ಹೇಳಬೇಕೆಂದರೆ ಕೊಣನೂರು ತೂಗುಸೇತುವೆಯೇ ಪ್ರಥಮ ಹಾಗೂ ಕೊನೆ ಮಾರ್ಗ. ಇದು ರಮಣೀಯವಾದ ಸ್ಥಳದಲ್ಲಿ ನಿರ್ಮಾಣ ಗೊಂಡಿರುವ ಹಿನ್ನೆಲೆ ಪ್ರತಿದಿನ ನೂರಾರು ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅಲ್ಲದೆ, ಸೇತುವೆ ಕೆಳಗೆ ತುಂಬಾ ವಿಶಾಲವಾಗಿ ಹರಿವ ಕಾವೇರಿ ನದಿಯಲ್ಲಿ ಈಜು ಮಸ್ತಿ ಜೋರಾಗಿ ನಡೆಯುತ್ತದೆ. ಸೇತುವೆ ನಿರ್ಮಾಣಗೊಂಡು ಸುಮಾರು 23ವರ್ಷ ತುಂಬಿದ್ದು, ಅಂದಿನಿಂದ ಇಂದಿನವರೆಗೆ ಒಮ್ಮೆಯೂ ನಿರ್ವಹಣೆ ಮಾಡಿದಂತೆ ಕಂಡುಬಂದಿಲ್ಲ. ಜತೆಗೆ ನಡುವೆ ಅಕ್ಕಪಕ್ಕದ ಗ್ರಾಮಸ್ಥರು ತಾವು ಓಡಾಡುವ ಸೇತುವೆಯನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂಬ ಅರಿವಿಲ್ಲದಿರುವುದು ದುಸ್ಥಿತಿಗೆ ಕಾರಣವಾಗಿದೆ.

ಸೇತುವೆ ಮೇಲೆ ಹಿಂದೆ ಮೋಟಾರ್‌ ಬೈಕ್‌ ಹಾಗೂ ಸೈಕಲ್‌ ಸವಾರಿ ನಿರಂತರವಾಗಿ ನಡೆದಿರುವುದರಿಂದ ಸೇತುವೆಗೆ ಧಕ್ಕೆಯಾಗಿದೆ. ಇದನ್ನು ಮನಗಂಡ ಜಿಪಂ ಸೇತುವೆ ಎರಡು ಕಡೆ ಪ್ರವೇಶದ್ವಾರದಲ್ಲಿ ಗೇಟ್‌ ನಿರ್ಮಿಸಿದೆ. ಇದರಿಂದ ಮೋಟಾರ್‌ ಸೈಕಲ್‌ ಓಡಿಸಲು ಅಡಚಣೆಯಾದರೂ, ಸೈಕಲ್‌ ಸವಾರಿಗೆ ಸಮಸ್ಯೆಯಾಗಿಲ್ಲ. ಇಷ್ಟೊಂದು ಸಮಸ್ಯೆಗಳಿದ್ದರೂ ಸೇತುವೆ ಬಳಿ ರಕ್ಷಕರಿಲ್ಲದಿರುವುದು. ಒಬ್ಬ ಸಿಬ್ಬಂದಿಯನ್ನು ಕಡ್ಡಾಯವಾಗಿ ಇಲ್ಲಿಗೆ ನೇಮಕಮಾಡಿದರೇ ಸೇತುವೆ ರಕ್ಷಣೆ ಹಾಗೂ ನಿರ್ವಾಹಣೆ ಬಗ್ಗೆ ಎಚ್ಚರ ವಹಿಸಬಹುದಾಗಿದೆ.

ಸೇತುವೆಯನ್ನು ನಿರ್ಮಾಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದಾಗಿನಿಂದ ತಡೆಗೋಡೆಯಾಗಿರುವ ಕಬ್ಬಿಣದ ತಂತಿಗಳು, ನೆಲ ಹಾಸಿಗೆ ಹಾಗೂ ವೈರ್‌ ಗಳಿಗೆ ಬಣ್ಣ ಲೇಪಿಸಿಯೇ ಇಲ್ಲ. ಅವುಗಳು ತುಕ್ಕುಹಿಡಿಯುತ್ತಿವೆ. ಅಲ್ಲದೆ ಒಂದೆರಡು ನೆಲ ಹಾಸಿಗೆಯ ಕಬ್ಬಿಣದ ಮಣೆ ಕೂಡ ಹಾಳಾಗಿವೆ. ಇದು ಅನಾಹುತಕ್ಕೆ ದಾರಿಮಾಡಿದೆ.

ಜಿಲ್ಲಾಧಿಕಾರಿಯಿಂದ ನಿಷೇದಾಜ್ಞೆ ಜಾರಿ: ದೂರದ ಗುಜರಾತ್‌ ರಾಜ್ಯದಲ್ಲಿ ನಡೆದಿರುವ ತೂಗುಸೇತುವೆ ದುರಂತವನ್ನು ಅರಿತಿರುವ ಜಿಲ್ಲಾಡಳಿತ ದುರಸ್ತಿಗೆ ಒಳಗಾಗಿರುವ ಕೊಣನೂರು ತೂಗು ಸೇತುವೆಯ ಮೇಲಿನ ಸಾರ್ವಜನಿಕ ಸಂಚಾರವನ್ನು ಹಿಂದಿನ ಜಿಲ್ಲಾಧಿಕಾರಿ ಎಂಎಸ್‌ ಅರ್ಚನಾ ಅವರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ಈ ಆದೇಶವನ್ನು ಸ್ಥಳೀಯ ಮಟ್ಟದ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕಿದೆ.ಅಲ್ಲದೆ ಜನರು ಸಹ ಸಹಕಾರ ನೀಡಬೇಕಿದೆ.

ಐತಿಹಾಸಿಕ ಕಟ್ಟೇಪುರ ಅಣೆಕಟ್ಟು ವೀಕ್ಷಣೆಗೆ ಹೋಗುವ ಪ್ರವಾಸಿಗರು ಹಾಗೂ ಗ್ರಾಮಸ್ಥರಿಗೆ ಹತ್ತಾರು ಕಿಮೀ ಸುತ್ತಿಹೋಗುವ ಬದಲು ಕಡಿಮೆ ಅವಧಿಯಲ್ಲಿ ಸಾಗಲು ಸರ್ಕಾರ ನಿರ್ಮಿಸಿರುವ ಕೊಣನೂರು ತೂಗುಸೇತುವೆಯನ್ನು ಸಂರಕ್ಷಿಸುವ ಕೆಲಸ ಇಲ್ಲಿ ಸಂಚರಿಸುವ ಪ್ರತಿಯೊಬ್ಬರ ಕರ್ತವ್ಯ. ಅದೇ ರೀತಿ ಇದರ ನಿರ್ವಹಣೆಯನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು. ಕೂಡಲೇ ದುರಸ್ತಿ ಕೈಗೊಂಡು ಸಾರ್ವಜನಿಕರನ್ನು ರಕ್ಷಿಸಬೇಕು. ●ನಾಗರಾಜು, ಸ್ಥಳೀಯ

ಕೊಣನೂರು ತೂಗು ಸೇತುವೆ ನಿರ್ಮಾಣಗೊಂಡ ಬಳಿಕ 2-3 ಬಾರಿ ಸೇತುವೆಗೆ ಬಣ್ಣಲೇಪಿಸಲಾಗಿದೆ. ಕೆಲವೊಂದು ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸಲಾಗಿದೆ. ಈ ಹಿಂದೆ ತೂಗು ಸೇತುವೆ ನಿರ್ಮಾಣಮಾಡಿರುವ ಕಂಪನಿ ಆಧುನಿಕವಾಗಿ ದುರಸ್ತಿಕಾರ್ಯ ಕೈಗೊಳ್ಳುವ ಸಲುವಾಗಿ 49 ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. ಅನುಮೋದನೆ ಬಳಿಕ ಕೆಲಸ ಆರಂಭಗೊಳ್ಳಲಿದೆ. ನಿಷೇಧಾಜ್ಞೆಗೆ ಜನರ ಸಹಕಾರ ಮುಖ್ಯ.-ಓಬಯ್ಯ, ಎಇಇ, ಜಿಪಂ ಉಪ ವಿಭಾಗ ಅರಕಲಗೂಡು.

-ವಿಜಯ್‌‌ ಕುಮಾರ್

ಟಾಪ್ ನ್ಯೂಸ್

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

11

Hasan: 100 ರೂ.ಗೆ ಸ್ನೇಹಿನನ್ನೇ ಹತ್ಯೆಗೈದ ಕಿರಾತಕರು

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

ಸರಕಾರದ ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

State Govt ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

A vehicle caught fire at Shiradi Ghat

Shiradi ಘಾಟ್‌ನಲ್ಲಿ ವಾಹನ ಬೆಂಕಿಗೆ ಆಹುತಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

Yermarus: Private bus caused end of 150 sheeps

Yermarus: ಖಾಸಗಿ ಬಸ್ ಹರಿದು 150 ಕುರಿಗಳ ಮಾರಣಹೋಮ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Family drama ‘Langoti Man’ hits screens today

Langoti Man: ಫ್ಯಾಮಿಲಿ ಡ್ರಾಮಾ ʼಲಂಗೋಟಿ ಮ್ಯಾನ್‌ʼ ಇಂದು ತೆರೆಗೆ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.