IFFI: ಈಗ ನಾವು ರೂಪಿಸುತ್ತಿರುವುದು ಕಾಂತಾರದ ಎರಡನೇ ಭಾಗವಲ್ಲ… – ರಿಷಬ್‌ ಶೆಟ್ಟಿ


Team Udayavani, Nov 28, 2023, 7:53 PM IST

KANTARA RISH

ಪಣಜಿ: ʼಈಗ ನಾವು ರೂಪಿಸುತ್ತಿರುವುದು ಕಾಂತಾರದ ಮೊದಲ ಭಾಗ, ಎರಡನೇ ಭಾಗವಲ್ಲʼ ಎಂದು ಸ್ಪಷ್ಟಪಡಿಸಿದವರು ನಿರ್ದೇಶಕ ರಿಷಬ್‌ ಶೆಟ್ಟಿ.

ಇಫಿ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದ ಸ್ಪರ್ಧೆಯಲ್ಲಿ ಕಾಂತಾರ ಭಾಗವಹಿಸಿದ್ದು, ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಉಳಿದ 15 (ಎರಡು ಹಿಂದಿ ಸಿನಿಮಾವೂ ಸೇರಿದಂತೆ) ಸಿನಿಮಾಗಳೊಂದಿಗೆ ಸೆಣಸುತ್ತಿದೆ. ಈ ಸಂಬಂಧ ಕೆಂಪು ಹಾಸಿನ ಗೌರವ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ಮುಂದೆ ಬರುತ್ತಿರುವುದು ಕಾಂತಾರದ ಮೊದಲ ಭಾಗ” ಎಂದರು.

ಹಲವು ಮಾದರಿಯ ಕಥೆಗಳು, ಕನಸುಗಳೊಂದಿಗೆ ಕರ್ನಾಟಕದ ಪುಟ್ಟ ಊರಿನಿಂದ ಬೆಂಗಳೂರಿಗೆ ಬರುತ್ತೇವೆ. ಎಲ್ಲವೂ ಹೇಳಲಾಗುವುದಿಲ್ಲ. ಒಂದಿಷ್ಟನ್ನು ಹೇಳುತ್ತೇವೆ. ಹಾಗೆಯೇ ಕಾಂತಾರ ಆ ನೆಲೆಯಲ್ಲಿ ಮೂಡಿದ್ದು. ಈಗ ಅದರ ಹಿಂದಿನ ಹಲವಾರು ಸಂಗತಿಗಳು ಹೇಳುವುದಿದೆ. ಈ ಹಿನ್ನೆಲೆಯಲ್ಲೇ ನನ್ನ ಹೊಸ ಸಿನಿಮಾ ರೂಪುಗೊಳ್ಳುತ್ತಿದೆʼ ಎಂದರು.

ಕಾಂತಾರ ಯಶಸ್ಸಿನ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದನ್ನು ಹೊಣೆಗಾರಿಕೆಯೆಂದೇ ಸ್ವೀಕರಿಸಿದ್ದೇನೆ. ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ನೀಡುವುದು ನಮ್ಮ ಗುರಿ ಎಂದರಲ್ಲದೇ, ಕಾಂತಾರ ಸಿನಿಮಾ ಶ್ರದ್ಧೆಯ ನೆಲೆಯೆಂದೇ ಹೇಳುವೆ. ನಾವು ಏನನ್ನು ಮಾಡುತ್ತೇವೆಯೋ ಅದರಲ್ಲಿ ಶ್ರದ್ಧೆ ಇರಬೇಕು. ನಾನು ನಂಬದಿರುವುದನ್ನು ನಾನು ಮಾಡಿಲ್ಲ. ಕಾಂತಾರದಲ್ಲಿನ ಭೂತಾರಾಧನೆ ಎಲ್ಲವೂ ಬಾಲ್ಯದಿಂದಲೂ ನೋಡುತ್ತಾ, ಆಚರಿಸುತ್ತಾ ಬಂದಂಥವು ಎಂದು ವಿವರಿಸಿದರು.

ಜನಪ್ರಿಯತೆಗಾಗಿ ಯಾರದೇ ನಂಬಿಕೆಗೆ ಧಕ್ಕೆ ತರುವಂಥದ್ದು ಸೂಕ್ತವಾದುದಲ್ಲ. ಹಾಗೆ ಮಾಡಲೂ ಬಾರದು ಎಂಬುದು ರಿಷಬ್‌ ಶೆಟ್ಟಿಯವರ ಅಭಿಪ್ರಾಯವಾಗಿತ್ತು. ಸಾಮಾನ್ಯವಾಗಿ ಋಣಾತ್ಮಕ ಅಭಿಪ್ರಾಯಗಳನ್ನೇ ಹೆಚ್ಚು ಪ್ರಸರಿಸುವಂಥ ಸಾಮಾಜಿಕ ಮಾಧ್ಯಮಗಳೂ ಕಾಂತಾರದ ವಿಷಯದಲ್ಲಿ ಧನಾತ್ಮಕವಾಗಿಯೇ ಪ್ರತಿಕ್ರಿಯಿಸಿದವು. ಹಾಗಾಗಿ ಕಾಂತಾರದ ಯಶಸ್ಸಿನಲ್ಲಿ ಅವುಗಳ ಸಹಯೋಗವೂ ಇದೆ. ನಾವೆಂದೂ ಕಾಂತಾರವನ್ನು ಪ್ಯಾನ್ ಇಂಡಿಯಾ ಸಿನಿಮಾವೆಂದು ಮಾಡಿರಲಿಲ್ಲ. ಜನರೇ ಆ ಮಟ್ಟಕ್ಕೆ ಕೊಂಡೊಯ್ದರುʼ ಎಂದರು.

ಭಾಷೆಗಳ ಗಡಿ ಮೀರಿ ಎಲ್ಲರೂ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡಲು ಈಗ ಸಾಧ್ಯವಾಗುತ್ತಿದೆ. ಈ ದಿಸೆಯಲ್ಲಿ ಒಟಿಟಿಗಳೂ ಸಹಾಯ ಮಾಡುತ್ತಿವೆ ಎಂದರಲ್ಲದೇ, ಈಗ ನಾವು ಭಾರತೀಯ ಭಾಷೆಗಳ ಸಿನಿಮಾ ಎಂದು ಕರೆಯುವುದು ಸೂಕ್ತ ಎಂದು ಹೇಳಿದರು.

ಕಾಂತಾರ ಚಲನಚಿತ್ರ ಪ್ರದರ್ಶನದ ಬಳಿಕ ಕೊನೆಯ ದೃಶ್ಯ ನಟನೆ ಎಂದೆನಿಸುವುದಿಲ್ಲ. ಆ ಅನುಭವ ಹಂಚಿಕೊಳ್ಳಿ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುತ್ತಾ, ಈ ಪ್ರಶ್ನೆ ಹಲವಾರು ಬಾರಿ ತೂರಿ ಬಂದಿದೆ. ಆಗ ಹೇಳಿದ್ದನ್ನೇ ಈಗಲೂ ಹೇಳುವೆ. ಆ ಅನುಭವವನ್ನು ಹೇಳಲಾಗದು, ನನ್ನ ಮನಸ್ಸಿನಲ್ಲೇ ಉಳಿಸಿಕೊಂಡಿರುವೆ ಎಂದರು.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2 Movie Review

Sidlingu 2 Review ಫ್ಯಾಮಿಲಿ ಡ್ರಾಮಾದಲ್ಲಿ ವಿಜಯ ಪ್ರಸಾದ

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

Mr.Rani movie review: ನಾನು ಅವಳಲ್ಲ ಅವನು!

Mr.Rani movie review: ನಾನು ಅವಳಲ್ಲ ಅವನು!

Gajarama Movie Review

Gajarama Movie Review: ಪ್ರೀತಿ ಮಧುರ ತ್ಯಾಗ ಅಮರ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.