Puttur ಅರಿಯಡ್ಕ ಗ್ರಾಮದ ವಿವಿಧೆಡೆ ಕಳ್ಳರ ಹಾವಳಿ
Team Udayavani, Nov 28, 2023, 10:06 PM IST
ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು, ಮಡ್ಯಂಗಳ, ಮದ್ಲ ಪ್ರದೇಶಗಳಲ್ಲಿ ಸರಣಿ ಕಳ್ಳತನ ನಡೆದ ಘಟನೆ ನ.27ರ ರಾತ್ರಿ ನಡೆದಿದೆ.
ಕಳ್ಳರ ತಂಡವೊಂದು ಇಲ್ಲಿನ ಮನೆ, ಅಂಗಡಿಯಿಂದ ಕಳ್ಳತನ ನಡೆಸಿದೆ. ಕೌಡಿಚ್ಚಾರು ಜಂಕ್ಷನ್‌ನ ಉಮೇಶ್ ಗೌಡ ಅವರ ಅಂಗಡಿಯ ಮಾಡಿನ ಹಂಚು ತೆಗೆದು ಒಳ ನುಗ್ಗಿದ ಕಳ್ಳರು ಚಿಲ್ಲರೆ ಹಣ ಹಾಗೂ ಸಿಗರೇಟ್ ದೋಚಿದ್ದಾರೆ. ಇದರ ಮೌಲ್ಯ ಸುಮಾರು 6 ಸಾವಿರ ಎಂದು ಅಂದಾಜಿಸಲಾಗಿದೆ.
ಮದ್ಲದಲ್ಲಿರುವ ದಿನಕರ ಬೋರ್ಕರ್‌ಅವರ ಮನೆ ವಠಾರದಿಂದ ಒಣಗಲು ಹಾಕಿದ್ದ 3 ಸಾವಿರಕ್ಕೂ ಅಧಿಕ ಅಡಿಕೆ ಕದ್ದೊಯ್ದಿದ್ದಾರೆ.
ಮಡ್ಯಂಗಳದ ಗೋಪಾಲಕೃಷ್ಣ ಭಟ್ ಅವರ ಮನೆಯ ವಠಾರದಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಅಡಿಕೆ ಕದ್ದೊಯ್ದು ಇದರಲ್ಲಿ ಒಂದು ಗೋಣಿ ಚೀಲ ಅಡಿಕೆಯನ್ನು ಗೇಟ್ ಬಳಿ ಎಸೆದು ಹೋಗಿದ್ದಾರೆ. ಇದರ ಮೌಲ್ಯ ಸುಮಾರು 9 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಪೊಲೀಸರು ಪರಿಶೀಲನೆ
ಮಾಡುತ್ತಿರುವಾಗಲೇ ಕಳ್ಳತನ !
ಮದ್ಲ ದಿನಕರ ಬೋರ್ಕರ್‌ಅವರ ಮನೆಯಿಂದ ರಾತ್ರಿ 10 ಗಂಟೆ ಸುಮಾರಿಗೆ ಕಳ್ಳತನ ನಡೆದಿದ್ದು ಈ ಬಗ್ಗೆ ಪೊಲೀಸರಿಗೆ ತಿಳಿಸಲಾಗಿತ್ತು. ತತ್‌ಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳರ ಬಗ್ಗೆ ತನಿಖೆ ನಡೆಸುತ್ತಿದ್ದರು. ಈ ವೇಳೆಗಾಗಲೇ ಕೌಡಿಚ್ಚಾರುನಲ್ಲಿ ಅಂಗಡಿ ಮತ್ತು ಮಡ್ಯಂಗಳದಲ್ಲಿ ಮನೆಯಿಂದ ಕಳ್ಳತನ ನಡೆದಿದೆ. ಒಂದು ಕಡೆಯಲ್ಲಿ ಪೊಲೀಸರು ಕಳ್ಳರ ಹುಡುಕಾಟ ನಡೆಸುತ್ತಿರುವಾಗಲೇ ಅಲ್ಲೇ ಆಸುಪಾಸಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.