Time: ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ…:ಗಡಿಯಾರದ ನಡಿಗೆ!

ಕಾಲ ಎನ್ನುವುದು ಎಲ್ಲರಿಗೂ ಒಂದು ಅವಕಾಶವನ್ನು ನೀಡುತ್ತದೆ

Team Udayavani, Nov 29, 2023, 11:21 AM IST

5-time

ಎಲ್ಲರಿಗೂ ತಿಳಿದಿರುವಂತೆ ಸಮಯವು ಯಾರಿಗೂ ಕಾಯುವುದಿಲ್ಲ. ಮತ್ತು ಅದು ಹಿಂದಕ್ಕೂ ಬರುವುದಿಲ್ಲ. ಹಾಗಾಗಿ ಸಮಯಕ್ಕೆ ಸರಿಯಾಗಿ ನಾವು ಸಾಗಬೇಕು. “ನಾವು ಸಮಯವನ್ನು ಗೌರವಿಸದಿದ್ದರೆ, ಸಮಯವು ನಮ್ಮನ್ನು ಗೌರವಿಸುವುದಿಲ್ಲ”. ಸಮಯಕ್ಕೆ ಸರಿಯಾಗಿ ಏಳುವುದು, ಊಟ ಮಾಡುವುದು, ಓದುವುದು ಮತ್ತು ನಿದ್ದೆ ಮಾಡುವುದು ಹೀಗೆ ಎಲ್ಲಾ ಕೆಲಸವನ್ನು ಮಾಡುವುದೇ ಉತ್ತಮ.

“ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ-ವಿಚಾರ ಮಾತ್ರ. ಎಲ್ಲರೂ ಕಾಲಕ್ಕೆ ತಕ್ಕಂತೆ ಸಾಗಬೇಕು ಮತ್ತು ಬದಲಾಗಬೇಕು. ಸಮಯ ಬರುತ್ತದೆ ಹಾಗೇ ಹೋಗುತ್ತೆ ಯಾರಿಗಾಗಿಯೂ ನಿಲ್ಲುವುದಿಲ್ಲ. ಇದನ್ನು ಯಾರಿಂದಲೂ ಮಾರಲು ಸಾಧ್ಯವಿಲ್ಲ ಹಾಗೇ ಖರೀದಿಸಲೂ ಸಾಧ್ಯವಿಲ್ಲ. ಕಚೇರಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಲೀ ಅಥವಾ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಾಗಲೀ ಎಲ್ಲರಿಗೂ ಒಂದೇ ಸಮಯ ಅದುವೇ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತದೆ. ಇದರ ಬಗ್ಗೆ ತಿಳಿದವರು ಎಂದಿಗೂ ಜೀವನದಲ್ಲಿ ಮುಂದೆ ಸಾಗುತ್ತಾರೆ.

“ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ”ಎಂಬ ಗಾದೆ ನೂರಕ್ಕೆ ನೂರು ಸತ್ಯ. ಹಾಗೆಯೇ ಎಲ್ಲರೂ ಕೂಡ ತಮ್ಮ ಜೀವನದ ಪಯಣಕ್ಕಾಗಿ ಮನಸ್ಸಿನ ಒಂದು ವೇಳಾಪಟ್ಟಿಯನ್ನು ನಿರ್ಮಿಸಿಕೊಂಡಿದ್ದಾರೆ. ಅದಕ್ಕೆ ಅನುಗುಣವಾಗಿ ದೈನಂದಿನ ಜೀವನ ನಡೆಯುತ್ತದೆ.

ವಿದ್ಯಾರ್ಥಿಯ ಜೀವನದಲ್ಲಿ ಸಮಯ ಹೇಗೆ ಮಹತ್ವ ಎಂದರೆ, ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿಯೂ ಇದರ ಮೌಲ್ಯವು ತುಂಬಾ ಹೆಚ್ಚಿರುತ್ತದೆ. ಹೇಗೆಂದರೆ ಈ ವಿದ್ಯಾರ್ಥಿ ಜೀವನದಲ್ಲಿ ಸಮಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮ ಸರಿ ಮತ್ತು ತಪ್ಪುಗಳನ್ನು ಗುರುತಿಸಿ ತಿದ್ದಿಕೊಳ್ಳಲು ಇದು ಅವಶ್ಯವಿದೆ. ವಿದ್ಯಾರ್ಥಿ ಎಂದರೆ ಸಮಯಪಾಲನೆ ಮತ್ತು ಶಿಸ್ತುಪಾಲನೆಯನ್ನು ಮಾಡುವವರು ಎಂದರ್ಥ. ವಿದ್ಯಾರ್ಥಿಗಳು ಸಮಯಪಾಲನೆಯಿಂದ ಅವರ ಜೀವನದ ಯಶಸ್ಸನ್ನು ಕಾಣಬಹುದು.

ಇದರ ಮಹತ್ವವನ್ನು ತಿಳಿದಿರುವ ಯಾವುದೇ ವ್ಯಕ್ತಿಯಾದರೂ ತನ್ನ ಕೆಲಸವನ್ನು ಎಂದಿಗೂ ಮುಂದೂಡಲು ಬಯಸುವುದಿಲ್ಲ. ಹಾಗೆಯೇ ಯಶಸ್ಸಿನ ದಾರಿಯಲ್ಲಿ ಸಾಗುತ್ತಾನೆ. “ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು, ಬುದ್ದಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.”ಕಾಲ ಎನ್ನುವುದು ಎಲ್ಲರಿಗೂ ಒಂದು ಅವಕಾಶವನ್ನು ನೀಡುತ್ತದೆ. ಅದರಲ್ಲಿ ನಾವು ವಿಜಯವನ್ನು ಅಥವಾ ಸೋಲನ್ನು ಕಾಣಬಹುದು. ಕೆಲವು ಅದ್ಭುತವಾದ ಅವಕಾಶವನ್ನು ಒಮ್ಮೆ ಕಳೆದುಕೊಂಡರೆ ಮತೊಮ್ಮೆ  ಆ ಅವಕಾಶ ಮರಳಿಬಾರದು.

“ಸಮಯವು ಯಾವುದೇ ಆರಂಭ ಅಥವಾ ಅಂತ್ಯವನ್ನು ಹೊಂದಿರದ ಅದ್ಬುತ ವಿಷಯವಾಗಿದೆ.”

– ನಾಗಮಣಿ. ಈ

ಪ್ರಥಮ ಪತ್ರಿಕೋದ್ಯಮ

ಎಂಜಿಎಂ ಕಾಲೇಜು ಉಡುಪಿ

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

1-rrrr

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

ಇ-ತ್ಯಾಜ್ಯ ತಗ್ಗಿಸಲು ಸರಕಾರದ ಐಡಿಯಾ! ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

Electronic Waste ತಗ್ಗಿಸಲು ಸರಕಾರದ ಐಡಿಯಾ!ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.