New Krishna Bhavan:ಗುಡ್‌ ಬೈ ಹೇಳಿದೆ.. ಮಲ್ಲೇಶ್ವರಂನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್‌

ಇನ್ನು ಕೇವಲ ಐದು ದಿನಗಳ ಬಳಿಕ ಹೋಟೆಲ್‌ ಶಾಶ್ವತವಾಗಿ ಬಂದ್...

Team Udayavani, Nov 30, 2023, 1:38 PM IST

New Krishna Bhavan:ಗುಡ್‌ ಬೈ ಹೇಳಿದೆ.. ಮಲ್ಲೇಶ್ವರಂನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್‌

ಉದ್ಯಾನನಗರಿ ಬೆಂಗಳೂರು ಎಂದ ಕೂಡಲೇ ಲಾಲ್‌ ಭಾಗ್‌, ಕಬ್ಬನ್‌ ಪಾರ್ಕ್‌, ಎಂಜಿ ರೋಡ್‌, ಬ್ರಿಗೇಡ್‌ ರೋಡ್‌ ನೆನಪಾಗುವಂತೆ ಬಸವನಗುಡಿ, ಮಲ್ಲೇಶ್ವರಂ, ರಾಜಾಜಿನಗರ ಸುತ್ತಮುತ್ತ ಇರುವ ಜನತಾ ಹೋಟೆಲ್‌, ವಿದ್ಯಾರ್ಥಿ ಭವನ, ರಾಘವೇಂದ್ರ ಸ್ಟೋರ್ಸ್‌, ಉಪಹಾರ ದರ್ಶಿನಿಗಳ ಚಿತ್ರಣ ಕೂಡಾ ಕಣ್ಣ ಮುಂದೆ ಹಾದು ಹೋಗುತ್ತದೆ. ಅದೇ ರೀತಿ ಮಲ್ಲೇಶ್ವರಂ 70 ವರ್ಷಗಳ ಇತಿಹಾಸವಿರುವ ನ್ಯೂ ಕೃಷ್ಣ ಭವನ್‌ ಹೋಟೆಲ್‌ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಸಿ, ಬಿಸಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣ ಏಳು ದಶಕಗಳ ಕಾಲ ಮನೆಮಾತಾಗಿದ್ದ ನ್ಯೂ ಕೃಷ್ಣ ಭವನ್‌ ಇನ್ನು ಒಂದೇ ವಾರದಲ್ಲಿ ಇತಿಹಾಸದ ಪುಟ ಸೇರಲಿದೆ ಎಂಬುದು!

ಇದನ್ನೂ ಓದಿ:IPL; ಸಂಜು ಸ್ಯಾಮ್ಸನ್ ಗೆ ನಾಯಕತ್ವದ ಆಫರ್ ನೀಡಿತಾ ಸಿಎಸ್ ಕೆ? ಅಶ್ವಿನ್ ಹೇಳಿದ್ದೇನು?

ಹೌದು ಇನ್ನು ಕೇವಲ ಐದು ದಿನಗಳ ಬಳಿಕ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಜನಪ್ರಿಯ ನ್ಯೂ ಕೃಷ್ಣ ಭವನ್‌ ಹೋಟೆಲ್‌ ಕೇವಲ ನೆನಪುಗಳಲ್ಲಿ ಮಾತ್ರ ಉಳಿಯಲಿದೆ. ನ್ಯೂ ಕೃಷ್ಣ ಭವನ್‌ ಹೋಟೆಲ್‌ ಕೇವಲ ಮಲ್ಲೇಶ್ವರಂ ಜನರಿಗಷ್ಟೇ ಸೀಮಿತವಾಗಿರಲಿಲ್ಲವಾಗಿತ್ತು. ಅದರ ಜನಪ್ರಿಯತೆ ಇಡೀ ಬೆಂಗಳೂರಿನಾದ್ಯಂತ ಹಬ್ಬಿತ್ತು.

1954ರಲ್ಲಿ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಆರಂಭಗೊಂಡಿದ್ದ ನ್ಯೂ ಕೃಷ್ಣ ಭವನ್‌ ಹೋಟೆಲ್‌ ನಸುಕಿನ ವೇಳೆ ಜಾಗಿಂಗ್‌ ಗೆ ಹೋಗುವವರಿಂದ ಹಿಡಿದು ವಿವಿಧ ನೌಕರರ ಜನಪ್ರಿಯ ಉಪಹಾರ ಕೇಂದ್ರವಾಗಿತ್ತು. ಆದರೆ ಮಂಗಳವಾರ ನ್ಯೂ ಕೃಷ್ಣ ಭವನ್‌ ಹೋಟೆಲ್‌ ಗೆ ತೆರಳಿದ್ದ ಗ್ರಾಹಕರಿಗೆ ಶಾಕ್‌ ಆಗುವಂತೆ ಬ್ಯಾನರ್‌ ಅನ್ನು ಕಟ್ಟಲಾಗಿತ್ತು. ಅದರಲ್ಲಿ “ಆತ್ಮೀಯ ಗ್ರಾಹಕರೆ ನ್ಯೂ ಕೃಷ್ಣ ಭವನ್‌ 06-12-2023ರಿಂದ ಮುಚ್ಚಲಾಗುತ್ತದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದು” ಬರೆಯಲಾಗಿತ್ತು. ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಲು ಕಾರಣವಾಗಿದೆ.

ಹೋಟೆಲ್‌ ಮುಚ್ಚಲು ಕಾರಣವೇನು?

ಮಲ್ಲೇಶ್ವರಂನಲ್ಲಿರುವ ನ್ಯೂ ಕೃಷ್ಣ ಭವನ್‌ ಹೋಟೆಲ್‌ ಸದಾ ಜನಜಂಗುಳಿಯಿಂದ ತುಂಬಿರುತ್ತಿತ್ತು. ಇಲ್ಲಿನ ಬಿಸಿ ಬಿಸಿ ಇಡ್ಲಿ ಸಾಂಬಾರ್‌, ರಾಗಿ ರೊಟ್ಟಿ, ಗುಲಾಬ್‌ ಜಾಮೂನು, ನೀರು ದೋಸೆ, ಮಸಾಲೆ ದೋಸೆ, ಬಟನ್‌ ಇಡ್ಲಿಗೆ ಫೇಮಸ್‌ ಆಗಿತ್ತು. ಹೀಗೆ ಏಳು ದಶಕಗಳಿಂದ ಗ್ರಾಹಕರ ಪ್ರೀತಿಗೆ ಪಾತ್ರವಾಗಿದ್ದ ನ್ಯೂ ಕೃಷ್ಣ ಭವನ್‌ ಹೋಟೆಲ್‌ ಮುಚ್ಚುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಹೋಟೆಲ್‌ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ, ನ್ಯೂ ಕೃಷ್ಣ ಭವನ್‌ ಹೋಟೆಲ್‌ ಇರುವ ಕಟ್ಟಡ ಮತ್ತು ನಿವೇಶನವನ್ನು ಜ್ಯುವೆಲ್ಲರಿ ಕಂಪನಿಯೊಂದು ಖರೀದಿಸಿದ್ದು, ಈ ಕಾರಣದಿಂದ ಹೋಟೆಲ್‌ ಮುಚ್ಚಲು ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ.

ಹೋಟೆಲ್‌ ಮುಚ್ಚುತ್ತಿದೆಯಾದರೂ ಇಲ್ಲಿ ಕಳೆದ 45 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬಂದಿಗಳಿಗೆ ಬೇರೆ ಕಡೆ ವ್ಯವಸ್ಥೆ ಮಾಡುತ್ತಿರುವುದಾಗಿ ಆಡಳಿತ ಮಂಡಳಿ ಹೇಳಿದೆ. ಕೋವಿಡ್‌ ಗಿಂತ ಮೊದಲು ನ್ಯೂ ಕೃಷ್ಣ ಭವನ್‌ ಹೋಟೆಲ್‌ ನಲ್ಲಿ ಸುಮಾರು 120 ಮಂದಿ ಕೆಲಸಗಾರರಿದ್ದರು. ಆದರೆ ಕೋವಿಡ್‌ ನಂತರ ವ್ಯಾಪಾರ ಕುಸಿತದಿಂದಾಗಿ ಆ ಸಂಖ್ಯೆ ಈಗ 80ಕ್ಕೆ ಇಳಿಕೆಯಾಗಿದೆ.

ಇತಿಹಾಸ:

ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ರಾಮಕೃಷ್ಣ ಪ್ರಭು ಎಂಬುವವರಿ 1954ರಲ್ಲಿ ನ್ಯೂ ಕೃಷ್ಣ ಭವನ್‌ ಹೋಟಲ್‌ ಸ್ಥಾಪಿಸಿದ್ದರು. ನಂತರ ಹೋಟೆಲ್‌ ಮಾಲೀಕತ್ವ ರಾಮಕೃಷ್ಣ ಪ್ರಭು ಅವರ ಪುತ್ರ ಸುಂದರ್‌ ಪ್ರಭು ಅವರಿಗೆ ಹಸ್ತಾಂತರವಾಗಿತ್ತು. ಈಗ ಮೂರನೇ ತಲೆಮಾರಿನ ಸುನಿಲ್‌ ಎಸ್‌ ಪ್ರಭು ಹೋಟೆಲ್‌ ಮಾಲೀಕತ್ವ ವಹಿಸಿಕೊಂಡಿದ್ದಾರೆ.

ಮಲ್ಲೇಶ್ವರಂನ ಲ್ಯಾಂಡ್‌ ಮಾರ್ಕ್‌ ನ್ಯೂ ಕೃಷ್ಣ ಭವನ್‌ ಹೋಟೆಲ್‌ ಮುಚ್ಚುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಮಲ್ಲೇಶ್ವರಂನ ನಿವಾಸಿ, ಸ್ನೂಕರ್‌ ಲೆಜೆಂಡ್‌ ಅರವಿಂದ್‌ ಸಾವೂರ್‌, ಪಂಕಜ್‌ ಅಡ್ವಾಣಿ ಸೇರಿದಂತೆ ನೂರಾರು ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಟಾಪ್ ನ್ಯೂಸ್

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

BYV

Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.