![Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ](https://www.udayavani.com/wp-content/uploads/2024/12/6-37-415x249.jpg)
ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ
ಶಾಕ್ ಆದ ನಟಿ ಮೃಣಾಲ್
Team Udayavani, Nov 30, 2023, 4:05 PM IST
![ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ](https://www.udayavani.com/wp-content/uploads/2023/11/tdy-18-10-620x372.jpg)
ವಿಶಾಖಪಟ್ಟಣಂ: ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ಬಹು ನಿರೀಕ್ಷಿತ ʼಹಾಯ್ ನಾನ್ನʼ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದ್ದು, ತಂದೆ – ಮಗಳ ಭಾವಯಾನದ ಕಥೆಯಳ್ಳ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ನಾನಿ – ಮೃಣಾಲ್ ಸೇರಿದಂತೆ ಸಿನಿಮಾತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗೆ ʼಹಾಯ್ ನಾನ್ನʼ ಪ್ರೀ ರಿಲೀಸ್ ಇವೆಂಟ್ ವಿಶಾಖಪಟ್ಟಣಂನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಿಗ್ ಸ್ಕ್ರೀನ್ ನಲ್ಲಿ ಹಾಕಿರುವ ಫೋಟೋವೊಂದರ ಕುರಿತು ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಗರಂ ಆಗಿದ್ದಾರೆ.
ʼಹಾಯ್ ನಾನ್ನʼ ದಲ್ಲಿ ರಶ್ಮಿಕಾ ಹಾಗೂ ದೇವರಕೊಂಡ ನಟಿಸಿಲ್ಲ. ಆದರೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೇದಿಕೆಯ ಎಲ್ ಇಡಿ ಪರದೆ ಮೇಲೆ ಇದ್ದಕ್ಕಿದ್ದಂತೆ ರಶ್ಮಿಕಾ – ದೇವರಕೊಂಡ ಅವರ ಮಾಲ್ಡೀವ್ಸ್ ಹಾಲಿಡೇಯ ಫೋಟೋವನ್ನು ಹಾಕಲಾಗಿದೆ. ಇದನ್ನು ನೋಡಿ ಕೆಳಗೆ ಕೂತಿದ್ದ ಮೃಣಾಲ್ ಠಾಕೂರ್ ಶಾಕ್ ಆಗಿದ್ದಾರೆ. ಸಿನಿಮಾಕ್ಕೆ ಸಂಬಂಧವೇ ಇಲ್ಲದವರ ಫೋಟೋ ಹಾಕಿರುವುದಕ್ಕೆ ಅವರು ಶಾಕ್ ಆಗಿದ್ದಾರೆ.
ಸದ್ಯ ಈ ಫೋಟೋ ಬಿಗ್ ಸ್ಕ್ರೀನ್ ಮೇಲೆ ಹಾಕಲು ʼಹಾಯ್ ನಾನ್ನʼ ತಂಡದವರು ಅನುಮತಿ ಕೇಳಿದ್ದರೋ, ಇಲ್ವೋ ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಆದರೆ ಇದನ್ನು ನೋಡಿದ ಕಾರ್ಯಕ್ರಮದ ನಿರೂಪಕಿ ಸುಮಾ, ಫೋಟೋಗ್ರಾಫರ್ ಬಳಿ ನನಗೆ ಸಂಶಯವಿದೆ. ಆ ದಿನ ಬಾಲಿಗೆ ಹೋದವನು ನೀನೇ ಇರಬೇಕು. ಒಂದು ವೇಳೆ ಇದ್ದರೆ ನೀನು ಅಂತಹ ಫೋಟೋಗಳನ್ನು ಕ್ಲಿಕ್ ಮಾಡಬಹುದೇ? ನೀನು ಸೆಲೆಬ್ರಿಟಿ ಫೋಟೋಗ್ರಾಫರ್ ಆಗಿದ್ದರೂ ಖಾಸಗಿತನ ಎನ್ನುವಂಥದ್ದು ಇರುತ್ತದೆ. ನೀವು ಡಿಸ್ ಪ್ಲೇ ಅಲ್ಲಿ ಏನೇ ನೋಡಿದರೂ ಅದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಇತ್ತ ʼಹಾಯ್ ನಾನ್ನʼ ತಂಡದ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಇದೊಂದು ಕೀಳು ಮಟ್ಟದ ಪ್ರಚಾರ ತಂತ್ರʼ ಒಬ್ಬರು ಕಮೆಂಟ್ ಮಾಡಿದ್ದಾರೆ. “ನೀವು ಇದನ್ನು ಬೇಕಂತಲೇ ಪ್ರದರ್ಶನ ಮಾಡಿದ್ದೀರಾ? ಎಂದಿದ್ದಾರೆ. “ಒಂದು ವೇಳೆ ಇದು ಪ್ರಚಾರದ ಪ್ಲ್ಯಾನ್ ಅಗಿದ್ದರೆ, ಅತ್ಯಂತ ಕೀಳಾದ ಯೋಜನೆ” ಎಂದು ಮತ್ತೊಬ್ಬರು ಹೇಳಿದ್ದಾರೆ.
7 ಭಾಷೆಗಳಲ್ಲಿ ʼಹಾಯ್ ನಾನ್ನʼ ಡಿ.7 ರಂದು ರಿಲೀಸ್ ಆಗಲಿದೆ.
Cheap promotional stunts from HiNanna Team
Fans emo hero ni Personal ga Tag chesi Abuse cheyadam
Hero emo Ma #VijayDeverakonda and #RashmikaMandanna personal life ni Events lo use cheyadam
Endhuku ra babu e cheap stunts
collections ravali ante ma hero personal life lagadam pic.twitter.com/GIDfGRtENy— THE CHANTI (@chanticomrade_) November 29, 2023
ಟಾಪ್ ನ್ಯೂಸ್
![Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ](https://www.udayavani.com/wp-content/uploads/2024/12/6-37-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Atlee to collaborate with Salman Khan](https://www.udayavani.com/wp-content/uploads/2024/12/atlee-150x87.jpg)
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
![15](https://www.udayavani.com/wp-content/uploads/2024/12/15-5-150x90.jpg)
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
![Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್](https://www.udayavani.com/wp-content/uploads/2024/12/13-13-150x90.jpg)
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
![Rashmika-Mandanna-2](https://www.udayavani.com/wp-content/uploads/2024/12/Rashmika-Mandanna-2-150x106.jpg)
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
![1-lllaa](https://www.udayavani.com/wp-content/uploads/2024/12/1-lllaa-150x84.jpg)
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
MUST WATCH
ಹೊಸ ಸೇರ್ಪಡೆ
![Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ](https://www.udayavani.com/wp-content/uploads/2024/12/6-37-150x90.jpg)
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
![Atlee to collaborate with Salman Khan](https://www.udayavani.com/wp-content/uploads/2024/12/atlee-150x87.jpg)
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
![11-](https://www.udayavani.com/wp-content/uploads/2024/12/11-1-5-150x90.jpg)
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
![10-tumkur](https://www.udayavani.com/wp-content/uploads/2024/12/10-tumkur-150x90.jpg)
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
![Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು](https://www.udayavani.com/wp-content/uploads/2024/12/mumbai4-150x84.jpg)
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.