Sandalwood: 2 ಕೋಟಿಗೂ ಅಧಿಕ ವೀಕ್ಷಣೆ ಕಂಡ ʻಕಾಂತಾರ ಚಾಪ್ಟರ್ 1ʼ ಫಸ್ಟ್‌ಲುಕ್ ಟೀಸರ್
ಮತ್ತೆ ನಿರೀಕ್ಷೆ ಹೆಚ್ಚಿಸಿದ ರಿಷಬ್ ಶೆಟ್ಟಿ & ಟೀಂ
Team Udayavani, Nov 30, 2023, 6:05 PM IST
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿರಂಗದಲ್ಲಿ ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಹೊರಟಿದೆ. ಕನ್ನಡದ ಬಹುನಿರೀಕ್ಷಿತ ಸಿನೆಮಾ ʻಕಾಂತಾರ ಚಾಪ್ಟರ್ 1ʼ ನ ಟೀಸರ್ ಯೂಟ್ಯೂಬ್‌ನಲ್ಲಿ ನಿರೀಕ್ಷೆಯಂತೆಯೇ ನಂ.1 ಟ್ರೆಂಡಿಂಗ್‌ನಲ್ಲಿದೆ.
ಈಗಾಗಲೇ 2 ಕೋಟಿಗೂ ಹೆಚ್ಚು ಜನ ಕಾಂತಾರ ಚಾಪ್ಟರ್ 1 ನ ಫಸ್ಟ್‌ಲುಕ್ ಟೀಸರ್ ವೀಕ್ಷಿಸಿದ್ದಾರೆ. ಕೇವಲ 24 ಗಂಟೆಯಲ್ಲೇ ಸುಮಾರು 1 ಕೋಟಿ 20 ಲಕ್ಷಕ್ಕೂ ಹೆಚ್ಚು ಮಂದಿ ಈ ಸಿನೆಮಾದ ಪ್ರೀಕ್ವೆಲ್ ವೀಕ್ಷಿಸಿದ್ದು ದಾಖಲೆಯಾಗಿದೆ.
ಟೀಸರ್ ವೀಕ್ಷಿಸಿದ ಚಿತ್ರರಸಿಕರು ರಿಷಬ್ ಶೆಟ್ಟಿ ತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರಾದ ಪ್ರಭಾಸ್, ಪೃಥ್ವಿರಾಜ್ , ರಕ್ಷಿತ್ ಶೆಟ್ಟಿ ಮೊದಲಾದವರು ಟೀಸರ್ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗೂಗಲ್ ಸರ್ಚ್‌ನಲ್ಲೂ ಕಾಂತಾರ 1 ರಿಲೀಸ್ ಡೇಟ್ ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಲಾಗಿದೆ. ಇದಕ್ಕಾಗಿ ಗೂಗಲ್ ಇಂಡಿಯಾ ತನ್ನ ʻಎಕ್ಸ್ʼ ಖಾತೆಯಲ್ಲಿ ಮೆಚ್ಚುಗೆ ಸೂಚಿಸಿದೆ. ಈ ವೇಳೆ ʻಕಾಂತಾರ 1ʼ ಎಂದು ಕನ್ನಡದಲ್ಲೇ ಬರೆದಿದ್ದಕ್ಕೆ ಕನ್ನಡಿಗರು ಖುಷ್ ಆಗಿದ್ದಾರೆ.
ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದು ಮತ್ತು ಬೆಂಗಾಲಿ ಭಾಷೆಗಳಲ್ಲಿ ಕಾಂತಾರ 1 ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ವಿಶೇಷವೆಂದರೆ ಒಂದೇ ವೀಡಿಯೊ ಟ್ರ್ಯಾಕ್‌ನಲ್ಲಿ ಭಾಷೆಗಳನ್ನು ಬದಲಾಯಿಸುವ ಅವಕಾಶವನ್ನು ನೀಡಲಾಗಿತ್ತು.
ಇತ್ತೀಚೆಗೆ ಗೋವಾದಲ್ಲಿ ನಡೆದ ಇಫ್ಫಿ ಚಿತ್ರೋತ್ಸವದಲ್ಲಿ ಕಾಂತಾರ ಚಿತ್ರಕ್ಕೆ ಸ್ಪೆಷಲ್ ಜ್ಯೂರಿ ಅವಾರ್ಡ್ ನೀಡಿ ಗೌರವಿಸಲಾಗಿತ್ತು. ಈ ವೇಳೆ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ ʻಕಾಂತಾರ 1 ದ ಫಸ್ಟ್‌ಲುಕ್ ಟೀಸರ್‌ಗೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಸಂತಸವಾಗಿದೆ. ಇದು ನಮ್ಮ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ. ದಿನದ 24 ಗಂಟೆ ಕೆಲಸ ಮಾಡಿದರೂ ಕಮ್ಮಿಯೇ ಎನ್ನುವಂತಾಗಿದೆ. ನನ್ನನ್ನು ದೇಶಕ್ಕೆ ಪರಿಚಯಿಸಿದ್ದು ಕಾಂತಾರ. ಹೀಗಾಗಿ ಜನರ ಪ್ರೀತಿಗೆ, ಅಭಿಮಾನಕ್ಕೆ ಎಂದಿಗೂ ಕೃತಜ್ಙʼ ಎಂದು ಹೇಳಿದ್ಧಾರೆ.
ನಿರ್ಮಾಪಕ ವಿಜಯ್ ಕಿರಗಂದೂರು ಅವರಿಂದ ನಿರ್ಮಾಣವಾಗುತ್ತಿರುವ ಈ ಸಿನೆಮಾದ ಬಜೆಟ್ ಬರೋಬ್ಬರಿ 125 ಕೋಟಿ ರೂ. ಹೀಗಾಗಿ ಸಹಜವಾಗಿಯೇ ಈ ಚಿತ್ರದ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದೆ. 2024 ರಲ್ಲಿ ಏಳು ಭಾಷೆಗಳಲ್ಲಿ ಕಾಂತಾರ ಚಾಪ್ಟರ್ 1 ಹೊರಬರಲಿದ್ದು ಸ್ಯಾಂಡಲ್‌ವುಡ್‌ನ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಜಗದಗಲ ಹಾರಿಸಲಿದೆ ಎಂಬ ನಂಬಿಕೆ ಸಿನಿಪ್ರೇಮಿಗಳಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.