Haveri: ಹೆಚ್ಚಾದ ಜಾತಿ, ಧರ್ಮ, ಪಕ್ಷ ದ ಅಂಧಕಾರ ಭಾವೈಕ್ಯ ಸಮ್ಮೇಳನ
ಚಿತ್ರದುರ್ಗ, ಹಾವೇರಿ ಸೇರಿ 90ಕ್ಕೂ ಹೆಚ್ಚು ಬೀರದೇವರಗಳ ಪಲ್ಲಕ್ಕಿಗಳು ಆಗಮಿಸಿದ್ದವು
Team Udayavani, Nov 30, 2023, 6:02 PM IST
ಹಾವೇರಿ: ಪ್ರಸ್ತುತ ಭಾವೈಕ್ಯತೆ ಮಾಯವಾಗಿದೆ. ಜಾತಿ, ಧರ್ಮ, ಪಕ್ಷದ ಅಂಧಕಾರದಲ್ಲಿ ಸುತ್ತಿಕೊಂಡಿದ್ದೇವೆ. ಜನರನ್ನು ಅರಳಿಸುವುದು ಕಷ್ಟ. ಕೆರಳಿಸುವುದು ಬಹಳ ಸುಲಭ ಮಾಜಿ ಸಚಿವ ಎಚ್.ವಿಶ್ವನಾಥ ಹೇಳಿದರು.
ಜಿಲ್ಲೆಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಆಯೋಜಿಸಿದ್ದ 536ನೇ ಕನಕ ಜಯಂತ್ಯುತ್ಸವ ಮತ್ತು ಭಾವೈಕ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅರಳಿಸುವ-ಕೆರಳಿಸುವ ಗುಂಪುಗಳ ಸಂಘರ್ಷದಲ್ಲಿ ದೇಶದ ಅಭಿವೃದ್ಧಿ ಹಳಿ ತಪ್ಪುತ್ತಿದೆ.
ಜನರನ್ನು ಶಾಂತಿಯ ತೋಟದಲ್ಲಿ ಕಟ್ಟಿ ಹಾಕುವ ಕೆಲಸವನ್ನು ಹಾಗೂ ದೇಶದ ಅಭಿವೃದ್ಧಿ ಕುರಿತು ಎಲ್ಲ ಧರ್ಮಗಳ ಧರ್ಮಾ ಧಿಕಾರಿಗಳು ಚಿಂತನೆ ಮಾಡಬೇಕಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕನಕದಾಸರು ಇದ್ದ ಸಂದರ್ಭದಲ್ಲಿ ಮುಸಲ್ಮಾನರ ಸಂಖ್ಯೆ ಕಡಿಮೆ ಇತ್ತು. ಕ್ರಿಶ್ಚಿಯನ್ನರು ಇರಲೇ ಇಲ್ಲ. ನಮ್ಮ ದೇಶದ ಜಾತಿ ವ್ಯವಸ್ಥೆ ಬಗ್ಗೆಯೇ ಅವರು ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾರಿದರು ಎಂದರು.
ಕ್ಯಾಥೋಲಿಕ್ ಧರ್ಮಗುರು ಡಾ|ಫಾ|ಅಲೊಧೀನ್ಸ್ ಫರ್ನಾಂಡಿಸ್ ಯೇಸ್ ಮಾತನಾಡಿ, ದೇವರು ಆಯ್ಕೆ ಮಾಡಿದ ಸಮುದಾಯ
ಕುರುಬ ಸಮುದಾಯ. ಯೇಸು ಕ್ರಿಸ್ತ್ ಹುಟ್ಟಿದಾಗ ಮೊದಲ ಸಂದೇಶ ತಂದಿದ್ದು ಕುರುಬ ಸಮುದಾಯ ಎಂದರು. ಬಿಜಾಪುರದ ಹಜರತ್ ಹಾಶಿಮ್ ಫೀರ್ ದರ್ಗಾದ ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ ಮಾತನಾಡಿ, ನಮ್ಮದು ಭಾವೈಕ್ಯತೆಯ ನಾಡು. ಸಿದ್ದರಾಮಯ್ಯ ಅವರು ರಾಜ್ಯವನ್ನು ನಂಬರ್ ಒನ್ ಮಾಡಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಮೊಹಮ್ಮದ್ ಪೈಗಂಬರರು, ಯೇಸು ಕ್ರಿಸ್ತ್ ಹುಟ್ಟಿದ್ದೂ
ಕುರುಬರ ಮನೆಯಲ್ಲಿ. ಇದು ಭಾವೈಕ್ಯತೆ. ಕನಕದಾಸರ ಕುಲ ಕುಲ ಎಂದು ಹೊಡೆದಾಡದಿರಿ, ಕುಲ ಎಂದರೆ ಅವರ ಆಲೋಚನೆಯಲ್ಲಿ ರಕ್ತ. ರಕ್ತ ಯಾವ ಕುಲವನ್ನೂ ನೋಡುವುದಿಲ್ಲ. ಕನಕದಾಸರು ಅಸಮಾನತೆ, ಜಾತಿ ವ್ಯವಸ್ಥೆ ಹೋಗಬೇಕು ಎಂದು ಬಯಸಿದವರು ಎಂದರು.
ಈ ಸಂದರ್ಭದಲ್ಲಿ ಮಲ್ಲೇಶಪ್ಪ ಹೊರಪೇಟೆ ಅವರ ಕನಕನ ಹೆಜ್ಜೆ ಮಕ್ಕಳ ಕಾದಂಬರಿಯನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು. ನಿರಂಜನಾನಂದಪುರಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಹಾಸಿದ್ದೇಶ್ವರಿ ದೇವರುಗಳ ಕುಂಭಾಭಿಷೇಕ ನೆರವೇರಿಸಲಾಯಿತು.
ಕಾಗಿನೆಲೆಗೆ ಚಿತ್ರದುರ್ಗ, ಹಾವೇರಿ ಸೇರಿ 90ಕ್ಕೂ ಹೆಚ್ಚು ಬೀರದೇವರಗಳ ಪಲ್ಲಕ್ಕಿಗಳು ಆಗಮಿಸಿದ್ದವು. ಶಾಸಕ ಬಸವರಾಜ
ಶಿವಣ್ಣನವರ ಅಧ್ಯಕ್ಷತೆ ವಹಿಸಿದ್ದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಎಚ್. ಎಂ.ರೇವಣ್ಣ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ, ಮಾಜಿ ಸಂಸದ ಮಂಜುನಾಥ ಕುನ್ನೂರ, ನಾಗರಾಜ ಆನ್ವೇರಿ, ಶಿವಪುತ್ರಪ್ಪ ಅಗಡಿ, ಎಸ್.ಎಫ್.ಎನ್. ಗಾಜೀಗೌಡ್ರ, ಸೋಮಣ್ಣ ಬೇವಿನಮರದ,
ಗ್ರಾಪಂ ಅಧ್ಯಕ್ಷೆ ಗುತ್ಯೆವ್ವ ದುರಮುರಗಿ ಇದ್ದರು.
2018ರ ಚುನಾವಣೆ ವೇಳೆ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಅಲ್ಲಿನ ಕಾಂಗ್ರೆಸ್ ಮುಖಂಡ ಹಂಗರಗಿ ಮುಚಕಂಡಯ್ಯ ಅವರಿಗೆ ಬಿಜೆಪಿ ಸೇರಲು ಸಾಕಷ್ಟು ಒತ್ತಡ ಇತ್ತು. ಆಗ ಆತ ಈ ಬಗ್ಗೆ ನನ್ನ ಸಲಹೆ ಕೇಳಿದ್ದರು. ಆಗ ನಾನು ಯಾವ ಕಾರಣಕ್ಕೂ ಬಿಜೆಪಿಗೆ ಸೇರಬೇಡ ಎಂದೆ. ಸಿದ್ದರಾಮಯ್ಯ ವಿಧಾನಸೌಧದಲ್ಲಿ ಇದ್ದರೆ ಚೆಂದ ಎಂದಿದ್ದೆ. ಯಡಿಯೂರಪ್ಪ,
ಸಿದ್ದರಾಮಯ್ಯನಂಥವರು ಜೀವಂತ ಇರುವವರೆಗೆ ವಿಧಾನಸಭೆಯಲ್ಲಿ ಇರಬೇಕು.
ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮೂರುಸಾವಿರ ಮಠ, ಹುಬ್ಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.