Mangalore: ಫ್ಲ್ಯಾಟ್ ಮಾರಾಟ- 30 ಲ.ರೂ. ವಂಚನೆ
Team Udayavani, Nov 30, 2023, 11:54 PM IST
ಮಂಗಳೂರು: ಜಪ್ಪು ಶಾದಿಮಹಲ್ ಬಳಿಯ ನಿರ್ಮಾಣ ಹಂತದ ವಸತಿ ಸಮುಚ್ಚಯದಲ್ಲಿ ಫ್ಲ್ಯಾಟ್ ನೀಡುವುದಾಗಿ 30 ಲಕ್ಷ ರೂ. ವಂಚಿಸಿರುವ ಕುರಿತಂತೆ ಪಾಲಕ್ಕಾಡ್ ಮೂಲದ ದಂಪತಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಪಾಲಕ್ಕಾಡ್ ಜಿಲ್ಲೆ ಚೆರ್ಪಲ್ ಸೇರಿ ನಿವಾಸಿ ರುಕಿಯಾಬಿ ಮೂಡಂಬೈಲ್ ಮತ್ತು ಮೊಹಮ್ಮದ್ ಆಲಿ ಹಣ ಕಳೆದುಕೊಂಡವರು. 2015ರಲ್ಲಿ ಅಶ್ರಫ್ ಹಸನ್ ಮತ್ತು ಮೊಹಮ್ಮದ್ ಸಲಾಂ ತಮ್ಮನ್ನು ನಿರ್ಮಾಣ ಸಂಸ್ಥೆಯೊಂದರ ಪಾಲುದಾರರೆಂದು ನಂಬಿಸಿ, ಜಪ್ಪು ಶಾದಿಮಹಲ್ ಬಳಿಯ ವಸತಿ ಸಮುಚ್ಚಯ ನಿರ್ಮಾಣ ಮಾಡುತ್ತಿದ್ದು, ಅದರಲ್ಲಿ ಮೊದಲನೇ ಮಹಡಿಯನ್ನು 31,75,500 ರೂ.ಗೆ ಮಾರಾಟ ಮಾಡುತ್ತಿದ್ದೇವೆ. 2017ರಲ್ಲಿ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದರು.
ಅವರ ಮಾತನ್ನು ನಂಬಿ 20 ಲಕ್ಷ ರೂ. ಮೌಲ್ಯದ ಚೆಕ್ ಹಾಗೂ 10 ಲಕ್ಷ ರೂ. ನಗದು ಪಾವತಿಸಿದ್ದರು. 2017ರಲ್ಲಿ ಅಪಾರ್ಟ್‌ಮೆಂಟ್ ಪೂರ್ಣಗೊಳ್ಳದೇ ಇದ್ದುದರಿಂದ ಸಂಸ್ಥೆಯವರನ್ನು ಸಂಪರ್ಕಿಸಿ ಹಣ ವಾಪಸು ಕೇಳಿದ್ದಾರೆ. ಸುಳ್ಳು ನೆಪಗಳನ್ನು ಹೇಳಿ ತಪ್ಪಿಸಿಕೊಂಡಿದ್ದ ಅವರು ಬಳಿಕ ತಲಾ 10 ಲಕ್ಷ ರೂ. ಮೌಲ್ಯದ 3 ಚೆಕ್‌ಗಳನ್ನು ನೀಡಿದ್ದು, ಅದನ್ನು ಬ್ಯಾಂಕ್‌ಗೆ ಹಾಕಿದಾಗ ಅಮಾನ್ಯಗೊಂಡಿವೆ. ಅನಂತರ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.