Development: ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕತ್ತರಿಸುವುದು ಸರಿಯೇ ?


Team Udayavani, Dec 3, 2023, 7:00 AM IST

7-fusion

ಕಾಲೇಜು ರಜೆ ಇರುವುದರಿಂದ ನನ್ನ ಊರಿನತ್ತ ಪ್ರಯಾಣ ಬೆಳೆಸಿದೆ. ಬಹಳ ದಿನ ಮನೆಯವರಿಂದ ದೂರ ಇದ್ದ ಕಾರಣ ಮನೆಯವರನ್ನು ಸೇರುವ ತವಕ ಹೆಚ್ಚಾಗಿತ್ತು. ಊರಿಗೆ ಹೋಗುವ ದಾರಿ ಸಮೀಪವಾದಂತೆ ಪ್ರಯಾಣದ ಮಧ್ಯೆ ಯಾಕೋ ಬಹಳ ಹೊತ್ತು ಬಸ್‌ ನಿಂತಿತ್ತು. ನಾನು ಏನಾಗಿದೆ ಎಂದು ಕಿಟಕಿಯಿಂದ ಇಣುಕಿ ನೋಡಿದರೆ ಅಲ್ಲೇ ದೂರದಲ್ಲಿ ಹಿಂಡು ಹಿಂಡಾಗಿ ನಿಂತಿದ್ದ ಜನರ ಗುಂಪು ಕಂಡೆ. ನಾನು ಕುಳಿತಿದ್ದ ಬಸ್‌ನ ಎಲ್ಲ ಜನರು ಆ ಗುಂಪಿನ ಕಡೆಗೆ ಓಡಿ ಹೋಗುವುದನ್ನು ಕಂಡು ನನಗೆ ಅಲ್ಲಿ ಏನಾಗಿರಬಹುದು ಎಂದು  ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿತ್ತು.

ಆದಕಾರಣ  ನಾನು ಕೂಡ ಆ ಗುಂಪಿನತ್ತ ಓಡಿ ಹೋದೆ. ಅಲ್ಲಿ ಹೋಗಿ ನೋಡಿದರೆ  ಸದ್ಯಕ್ಕಿರುವ ರೋಡು ಸಣ್ಣದಾಗಿದೆ ಎಂದು ರೋಡನ್ನು ಅಗಲೀಕರಣ ಮಾಡುವ ಸಲುವಾಗಿ ಆಕಾಶ ಎತ್ತರಕ್ಕೆ ತನ್ನ ರೆಂಬೆಕೊಂಬೆಗಳನ್ನು ಚಾಚಿ ಯಾರ ಆಸರೆ ಇಲ್ಲದೆ ಬೆಳೆದು ನಿಂತಿರುವ ಹೆಮ್ಮರಗಳನ್ನು ಕಡಿಸುವುದನ್ನು ಕಂಡು ಮನಸ್ಸಿಗೆ ನೋವು ಉಂಟಾಯಿತು.

ಮರಗಳಿಗೆ ಏನಾದರೂ ಮಾತನಾಡಲು ಬರುತ್ತಿದ್ದರೆ ಅವು ಹೀಗೆ ಹೇಳುತ್ತಿದ್ದವೆನೋ..  ಮಾನವ ನಾನು ನಿನಗೆ ದಣಿದಾಗ ನೆರಳು ನೀಡಿದೆ, ಹಸಿವು ಎಂದಾಗ ಹಣ್ಣು ನೀಡಿದೆ, ಕೆಲಮೊಮ್ಮೆ ಮೋಜುಮಸ್ತಿ ಮಾಡಲು ಅವಕಾಶ ನೀಡಿದ್ದೇ ತಪಾಯಿತೆ?, ನನ್ನ ಪಾಡಿಗೆ ನನಗೆ ಬದುಕಲು ಬಿಡಿ, ನೀವೂ ಕೂಡ ಬದುಕಿ. ನನ್ನಿಂದ ನಿಮ್ಮ ಜೀವ ಉಳಿವುದೆಂದು ಗೊತ್ತಿದ್ದರೂ ನನ್ನನ್ನು ಕತ್ತರಿಸುತ್ತೀದ್ದೀರಲ್ಲ?, ನಾನು ಸಾಯುವುದನ್ನು ದುರುಗುಟ್ಟಿ ನೋಡಿ, ನಿಮ್ಮ ಫೋನುಗಳಲ್ಲಿ  ನಾನು ಸಾಯುವುದನ್ನು ರೆಕಾರ್ಡಿಂಗ್‌ ಮಾಡಿ ಸಂತೋಷ ಪಡುವುದು ಸರಿಯೇ?.

ಏನರ ಮಾನವ ನನ್ನನ್ನು ಅಭಿವೃದ್ಧಿಯ ಹೆಸರಿನಲ್ಲಿ ಏಕೆ ಕೊಲ್ಲುತ್ತಿರುವೆ. ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ ಎಂದು ತನ್ನ ಉಳಿವಿಗಾಗಿ ಕೇಳುತ್ತಿತ್ತೆನೋ? ಎನ್ನುವ ಹಾಗೆ ನನ್ನ ಮನಸ್ಸಿಗೆ ಅನ್ನಿಸಿತ್ತು. ಅಲ್ಲಿ ನಿಂತಿರುವ ಜನರಿಗೆ ತನ್ನನ್ನು ಕಾಪಾಡುವಂತೆ ಕೇಳುತ್ತಿತ್ತು ಎನ್ನುವ ರೀತಿಯಲ್ಲಿ  ನನ್ನ ಕಣ್ಣಿಗೆ ಗೋಚರಿಸಿತು. ಅನಂತರ ಹೆಚ್ಚು ಜನರು ಸೇರುವುದನ್ನು ಗಮನಿಸಿದ ಅಧಿಕಾರಿಗಳು ಎಲ್ಲರೂ ಹೊರಡುವಂತೆ ಸೂಚಿಸಿದರು.

ಮತ್ತೆ ಪ್ರಯಾಣ ಮುಂದುವರೆದರೂ ನನಗೆ ಅಲ್ಲಿ ನಡೆದಿರುವ ಘಟನೆ ಕಣ್ಣು ಕಟ್ಟಿತು. ಮನಸ್ಸಿಗೆ ಅನ್ನಿಸಿದ್ದು ಹೀಗೆ ನಮ್ಮ ದೇಶವನ್ನು  ಅಭಿವೃದ್ಧಿ ಪಡಿಸಲು ಗಿಡಮರಗಳನ್ನು ಕತ್ತರಿಸುವುದು ಅನಿವಾರ್ಯವೇ?. ಅಭಿವೃದ್ಧಿ ಎನ್ನುವ ಹೆಸರು ಬಳಸಿ, ಗಗನದೆತ್ತರ ಬೆಳೆದು ನಿಂತಿರುವ ಮರಗಳನ್ನು ಕಡಿಯುವುದು ಸರಿಯೇ? ಮೊದಲು ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಗಾದೆ ಇತ್ತು.

ಈಗ ತದ್ವಿರುದ್ಧವಾಗಿದೆ. ಕಾಡುಗಳನ್ನು ಅಳಿಸಿ ನಾಡನ್ನು ಬೆಳೆಸಿ ಎನ್ನುವ ಹಂತಕ್ಕೆ ಬಂದು ತಲುಪಿದೆ.  ಏಕೆಂದರೆ ಹೆಮ್ಮರವಾಗಿ ಬೆಳೆದು ನಿಂತಿರುವ ಮರಗಳನ್ನು ಕಡಿದು, ರೋಡಿನ ಅಗಲೀಕರಣ, ಕಾಂಪ್ಲೆಕ್ಸ್‌, ಮಾಲ್‌,  ಹೀಗೆ  ಇನಾವುದೋ ಹೆಸರಿನ ಕಟ್ಟಡಗಳನ್ನು ಕಟ್ಟುವುದು ಎಷ್ಟರ ಮಟ್ಟಿಗೆ ಸರಿ?. ಇದಕ್ಕೆ ಅಭಿವೃದ್ಧಿ ಎನ್ನುವ ಹೆಸರು ನೀಡುವುದು  ಸರಿಯೇ? ಎನ್ನುವ ಪ್ರಶ್ನೆಗಳು ಊರು ತಲಪುವವರೆಗೂ ನನಗೆ ಕಾಡಿದವು.

ಪರಿಸರವನ್ನು ಉಳಿಸಿ, ಬೆಳೆಸಿ, ಅದರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದ‌ರಿಂದ ಈಗಲೇ ನಾವೆಲ್ಲರೂ ಪರಿಸರ ರಕ್ಷಣೆ ಮಾಡುವ ಕೆಲಸ ಮಾಡಬೇಕಾಗಿದೆ. ಇಲ್ಲವಾದಲ್ಲಿ ಇವತ್ತು ನಾವು ಮರಗಳನ್ನು ನಾಶ ಮಾಡಿದರೆ ಮುಂದೊಂದು ದಿನ ನಾವು ಜೀವಂತವಿರುವಾಗಲೇ ನರಕವನ್ನು ಕಾಣಬೇಕಾಗುತ್ತದೆ.

-ನೀಲಮ್ಮ ಹೊಸಮನಿ

ವಿ.ವಿ., ವಿಜಾಪುರ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.