Kushtagi: ಜನತಾ ದರ್ಶನದಲ್ಲಿ ವಿಷ ಸೇವನೆ ಹೈಡ್ರಾಮಾ
ಮನವಿ ಪತ್ರದ ಜೊತೆಗೆ ವಿಷದ ಬಾಟಲಿ ತಂದಿದ್ದ ವ್ಯಕ್ತಿ !
Team Udayavani, Dec 1, 2023, 7:48 PM IST
ಕುಷ್ಟಗಿ: ಕುಷ್ಟಗಿಯಲ್ಲಿ ಜನತಾ ದರ್ಶನ ವೇಳೆ ವ್ಯಕ್ತಿಯೋರ್ವ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ವಿಷ ಸೇವನೆಯ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.
ತಾಲೂಕಿನ ನಿಡಶೇಷಿ ಗ್ರಾಮದ ಮಹಿಬೂಬಸಾಬ್ ಮುದಗಲ್ ಎಂಬಾತ ವಿಷ ಸೇವನೆಗೆ ಹೈಡ್ರಾಮಾ ನಡೆಸಿದ ವ್ಯಕ್ತಿ. ಈ ವ್ಯಕ್ತಿ ಮನವಿ ಪತ್ರದ ಜೊತೆಗೆ ವಿಷದ ಬಾಟಲಿ ತಂದಿದ್ದ.
ಕಳೆದ 23 ವರ್ಷಗಳ ಹಿಂದೆ ಮದಲಗಟ್ಟೆ ಆಂಜನೇಯ ದೇವಸ್ಥಾನ ಬಳಿ, ತಮ್ಮ ಜಮೀನಿನಲ್ಲಿ ಸರ್ಕಾರ ಸಮುದಾಯ ಭವನ ನಿರ್ಮಿಸಿದೆ. ಇದಕ್ಕೆ ಪರಿಹಾರ ನೀಡಬೇಕೆಂಬುದು ಇತನ ವಾದ.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಬಾಷಣ ಹಾಗೂ ಮನವಿ ಸ್ವೀಕರಿಸಿ ನಿರ್ಗಮಿಸಿದ ನಂತರ, ತನ್ನ ಬ್ಯಾಗಿನಲ್ಲಿದ್ದ ವಿಷದ ಬಾಟಲ್ ತೆಗೆಯಲು ಮುಂದಾದ, ಕೂಡಲೇ ಗಮನಿಸಿದ ಪೊಲೀಸರು, ಆತನ ಕೈಯಿಂದ ವಿಷದ ಬಾಟಲ್ ಕಸಿದುಕೊಂಡಾಗ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.ಮದ್ಯೆ ಪ್ರವೇಶಿಸಿದ ತಹಶೀಲ್ದಾರ ಶ್ರುತಿ ಮಳ್ಳಪ್ಪಗೌಡ್ರು ಅವರು, ಮಹಿಬೂಬ್ ಸಾಬ್ ಮುದಗಲ್ ಅವರ ಮನವಿ ಆಲಿಸಿ ಈ ಕುರಿತು ಪರಿಶೀಲಿಸುವುದಾಗಿ ಸಮಾದಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೀಲ್ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
ಕೊಪ್ಪಳ: 3 ದಿನದಲ್ಲಿ 300 ಜನರ ಮೇಲೆ ಕೇಸ್53 ಪ್ರಕರಣ -4.75 ಲಕ್ಷ ರೂ. ವಶ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.