Pakistan Cricketers; ಆಸ್ಟ್ರೇಲಿಯಾದಲ್ಲಿ ಲಗೇಜ್ ಹೊತ್ತ ಪಾಕ್ ಆಟಗಾರರು!
Team Udayavani, Dec 2, 2023, 10:22 AM IST
ಸಿಡ್ನಿ: ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ ಕ್ರಿಕೆಟ್ ತಂಡ ಈಗ ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಿದೆ. ವರದಿಗಳ ಪ್ರಕಾರ ಆ ತಂಡಕ್ಕೆ ಅತ್ಯಂತ ಮುಜುಗರದ ಸನ್ನಿವೇಶ ಎದುರಾಗಿದೆ.
ತಂಡವನ್ನು ಸ್ವಾಗತಿಸಲು ಆಸ್ಟ್ರೇಲಿಯ ಕ್ರಿಕೆಟ್ ಸಂಸ್ಥೆ ಕಡೆಯಿಂದಾಗಲೀ, ಪಾಕಿಸ್ತಾನ ರಾಯಭಾರ ಕಚೇರಿ ಕಡೆಯಿಂದಾಗಲೀ ಯಾರೂ ಬಂದಿರಲಿಲ್ಲವೆನ್ನಲಾಗಿದೆ! ಹಾಗಾಗಿ ಪಾಕ್ ಕ್ರಿಕೆಟಿಗರು ಸ್ವತಃ ತಮ್ಮ ಲಗೇಜ್ ಗಳನ್ನು ಎತ್ತಿ ಟ್ರಕ್‌ಗೆ ತುಂಬಿದ್ದಾರೆ. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ದೊಡ್ಡಮಟ್ಟಿಗೆ ಓಡಾಡುತ್ತಿದೆ.
ಈ ವೇಳೆ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅಭಿಮಾನಿಗಳ ಸೆಲ್ಫಿಗೆ ಪೋಸ್ ನೀಡಿದ್ದಲ್ಲದೇ, ಸಂತೋಷವಾಗಿ ಲಗೇಜನ್ನು ಟ್ರಕ್‌ಗೆ ಹಾಕಿದ್ದಾರೆ. ಈ ಸ್ವಭಾವ ಕೆಲವರಿಂದ ಪ್ರಶಂಸೆ ಗೆ ಪಾತ್ರವಾಗಿದೆ. ಇನ್ನು ಕೆಲವರು ಅದು ವಿನಯವಂತಿಕೆ ಯಿಂದ ಮಾಡಿದ ಕೆಲಸವಲ್ಲ, ಒತ್ತಾಯ ಪೂರ್ವಕವಾಗಿ ಮಾಡಿಸಿದ್ದು ಎಂದು ಆಡಿಕೊಂಡಿದ್ದಾರೆ.
ಪಾಕಿಸ್ತಾನ ರಾಯಭಾರ ಕಚೇರಿ ಪ್ರತಿನಿಧಿಗಳು ಹಾಜರಿರಲೇ ಬೇಕೆಂದು ನಿರೀಕ್ಷಿಸುವ ಅಗತ್ಯವಿಲ್ಲ. ಆದರೆ ಆತಿಥೇಯ ದೇಶವಾಗಿರುವುದರಿಂದ ಆಸೀಸ್ ಸಂಸ್ಥೆಯ ಪ್ರತಿನಿಧಿಗಳಂತೂ ಸ್ವಾಗತಕ್ಕೆ ಬರಬೇಕಾಗಿತ್ತು. ಹಾಗೆಯೇ ಲಗೇಜ್‌ಗಳನ್ನು ತುಂಬಲು ವ್ಯಕ್ತಿಗಳನ್ನೂ ನಿಯೋಜಿಸಬೇಕಾಗಿತ್ತು. ಈ ವಿಚಾರದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ಸಂಸ್ಥೆ ಎಡವಿದೆಯಾ? ಉದ್ದೇಶಪೂರ್ವಕವಾಗಿ ಹೀಗೆ ವರ್ತಿಸಿದೆಯಾ? ಅಥವಾ ಸದ್ಯ ಲಭಿಸಿರುವುದು ಅಪೂರ್ಣ ಮಾಹಿತಿಯಾ? ಎನ್ನುವುದು ಇನ್ನಷ್ಟೇ ಖಚಿತವಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.